ಡಿಜಿಟಲ್ ಕನ್ನಡ ಟೀಮ್:
ಬಿಬಿಎಂಪಿಂ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಆರ್.ಅಶೋಕ್ ಮಾಡಿದ ಕಾರ್ಯತಂತ್ರ ವಿಫಲವಾಗಲು ಬಿ.ಎಸ್ ಯಡಿಯೂರಪ್ಪ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಅದಕ್ಕೆ ಕೊಟ್ಟಿದ ಕಾರಣಗಳು ಕೂಡ ಸಕಾರಣಗಳಾಗಿದ್ದವು. ಆದ್ರೀಗ ಇಬ್ಬರ ನಡುವಿನ ಕಿತ್ತಾಟ ಮೂರನೆಯವರಿಗೆ ಲಾಭ ಎನ್ನುವಂತಾಗಿದ್ದು, ಆರ್. ಅಶೋಕ್ ಹಾಗೂ ಬಿ.ಎಸ್ ಯಡಿಯೂರಪ್ಪ ಅವರ ಕಿತ್ತಾಟದ ಲಾಭ ಪಡೆಯಲು ಆರ್ಎಸ್ಎಸ್ನ ಸಂತೋಷ್ ಮುಂದಾಗಿದ್ದಾರೆ.
ಒಂದೇ ಪಕ್ಷದ ಇಬ್ಬರು ನಾಯಕರ ನಡುವಿನ ಗಲಾಟೆ ಮೂರನೆಯವರಿಗೆ ಲಾಭ ತಂದು ಕೊಡುವ ಲಕ್ಷಣಗಳು ಕಾಣಿಸುತ್ತಿವೆ. ಇದರಿಂದ ಎಚ್ಚೆತ್ತುಕೊಂಡ ಮಾಜಿ ಸಿಎಂ ಬಿಎಸ್ವೈ, ಆರ್.ಅಶೋಕ್ ಪರ ಬ್ಯಾಟಿಂಗ್ ಮಾಡಿದ್ದಾರೆ. ನಮ್ಮಿಬ್ಬರ ನಡುವಿನ ಲಾಭ ಮೂರನೇ ವ್ಯಕ್ತಿಗೆ ಆಗಬಾರದು ಅನ್ನೋ ಸಂದೇಶ ರವಾನಿಸಿದ್ದಾರೆ.
ಇತ್ತೀಚೆಗೆ ಕರ್ನಾಟಕದಲ್ಲಿ ಬಿಜೆಪಿಗೆ ಭಾರೀ ಮುಜುಗರ ಉಂಟಾಗುತ್ತಿದೆ. ರಾಜ್ಯ ನಾಯಕರು ಮಾಡುತ್ತಿರುವ ಯೋಜನೆಗಳು ಸಫಲವಾಗುತ್ತಿಲ್ಲ ಎನ್ನುವುದನ್ನು “ತಂಡ ಸ್ಫೂರ್ತಿ ಇಲ್ಲದವರು ಹಾಗೂ ಗೆಲುವಿನ ಕೀರ್ತಿಯನ್ನು ಹಂಚಿಕೊಳ್ಳಲು ಸಿದ್ದರಿಲ್ಲದವರು ಎಂದಿಗೂ ಗೆಲುವನ್ನು ಸಾಧಿಸಲಾರರು” ಎಂದು ಚಾಣಕ್ಯನ ಮಾತುಗಳನ್ನು ಉಲ್ಲೇಖಿಸಿ ಫೇಸ್ಬುಕ್ನಲ್ಲಿ ಕೆಣಕಿದ್ರು. ಅದರಲ್ಲಿ ಆರ್. ಅಶೋಕ್ ಬಿಬಿಎಂಪಿಯಲ್ಲಿ ವೈಫಲ್ಯ ಅನುಭವಿಸಿದ್ದನ್ನು ನೆಪ ಮಾಡಿಕೊಂಡು ಪೋಸ್ಟ್ ಹಾಕಿದ್ರೆ, ಇನ್ನೊಂದು ಕಡೆ ವಿಧಾನಸಭೆಯಲ್ಲಿ ಸಿಕ್ಕ ಯಶಸ್ಸನ್ನು ಬಿ.ಎಸ್ ಯಡಿಯೂರಪ್ಪ ಮಾತ್ರವೇ ಉಳಿಸಿಕೊಂಡು ಮೆರೆದರು. ಆಪರೇಷನ್ ಕಮಲ ಮಾಡಲು ಯತ್ನಿಸಿ, ಸೋಲುಂಡರು ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರಿಗೂ ಟಾಂಗ್ ಕೊಟ್ಟಿದ್ದಾರೆ.
ಇದರಿಂದ ಕೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಸಂತೋಷ್ಗೆ ನೇರವಾಗಿಯೇ ಉತ್ತರ ಕೊಟ್ಟಿದ್ದಾರೆ. ಆದ್ರೆ ಜಾಣ ನಡೆ ಪ್ರದರ್ಶನ ಮಾಡಿರುವ ಬಿಎಸ್ ಯಡಿಯೂರಪ್ಪ, ಬಿಬಿಎಂಪಿ ವಿಚಾರದಲ್ಲಿ ಪಕ್ಷಕ್ಕೆ ಸೋಲಾಗಿದ್ದರಲ್ಲಿ ಆರ್ ಅಶೋಕ್ ಅವರನ್ನು ದೂರುವುದು ತರವಲ್ಲ. ಮೇಯರ್ ಚುನಾವಣೆಯಲ್ಲಿ ಆರ್. ಅಶೋಕ್ ಪ್ರಾಮಾಣಿಕ ಪ್ರಯತ್ನ ಮಾಡಿದ್ರು. ಅನಿವಾರ್ಯ ಕಾರಣದಿಂದ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಅನಂತ ಕುಮಾರ್ ಗೈರಾದರು, ಇಲ್ಲದಿದ್ದರೆ ನಿಶ್ಚಿತವಾಗಿ ನಾವೇ ಗೆಲ್ಲುತ್ತಿದ್ದೆವು, ಅಶೋಕ್ ಅವರನ್ನು ದೂರುವುದು ಶೋಭೆ ತರುವ ವಿಚಾರವಲ್ಲ. ಕೆಲವರು ಅಶೋಕ್ ಮೇಲೆ ಕಲ್ಲು ಹೊಡೆಯುವ ಪ್ರಯತ್ನ ಮಾಡಿದ್ತಿದ್ದಾರೆ ಎಂದು ಹೇಳಿದ್ದಾರೆ. ಆದ್ರೆ ಸಂತೋಷ್ ಹೇಳಿರುವ ಮಾತಿನ ಅರ್ಥ ಗೊತ್ತಾದರೂ ತನ್ನ ಮೇಲಿನ ಆರೋಪವನ್ನು ಮುಚ್ಚಿಟ್ಟುಕೊಂಡಿದ್ದಾರೆ.
ಬಿ.ಎಲ್ ಸಂತೋಷ್ ಆರ್ಎಸ್ಎಸ್ನಲ್ಲಿ ಸಂಘಟನೆ ಮಾಡಿದವರು. ನಾಯಕತ್ವದ ಗುಣ ಹೊಂದಿರುವ ಇವರು ಕಳೆದ ಚುನಾವಣೆಯಲ್ಲಿ ಬಿಎಸ್ವೈ ಜತೆಗೆ ಸಂತೋಷ್ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಆದರೂ ಅಚ್ಚರಿಯಿಲ್ಲ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಆದ್ರೆ ಸಂತೋಷ್ ಬೆಳವಣಿಗೆಯನ್ನು ದೂರದಿಂದಲೇ ಗಮನಿಸುತ್ತಿದ್ದ ಬಿಎಸ್ವೈ ಸ್ವಲ್ಪ ದೂರವಾದ್ರು. ಆ ಬಳಿಕ ನಾನೊಂದು ತೀರ ನೀನೊಂದು ತೀರ ಎನ್ನವಂತಾಯ್ತು.
ವಿಧಾನಸಭೆ ಗೆಲುವಿನ ಎಲ್ಲಾ ಶ್ರೇಯವನ್ನು ಬಿಎಸ್ವೈ ತಮ್ಮ ಬಗಲಿಗೆ ಹಾಕಿಕೊಂಡ್ರು. ಅವರ ಆಪರೇಷನ್ ಕಮಲದ ಸೋಲು ಅದಕ್ಕಾಗಿಯೇ ಎಂದು ಹೇಳುವುದಕ್ಕೆ ಈ ಸ್ಟೇಟಸ್ ಹಾಕಿದ್ದಾರೆ. ಇದು ಯಡಿಯೂರಪ್ಪ ಅವರಿಗೂ ಗೊತ್ತಿದ್ದು, ಮರೆಮಾಚುವ ಯತ್ನ ಮಾಡುತ್ತಿದ್ದಾರೆ.