ಭಾರತದ ರಸ್ತೆಗಳು ಯಮಲೋಕದ ಹಾದಿಗಳು!

ಡಿಜಿಟಲ್ ಕನ್ನಡ ಟೀಮ್:

ಭಾರತದ ರಸ್ತೆ ಸುರಕ್ಷತೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಪರಿಣಾಮ ನಮ್ಮ ರಸ್ತೆಗಳು ಯಮಲೋಕದ ದಾರಿಯಾಗಿವೆ.

ಹೌದು, ನಮ್ಮ ದೇಶದಲ್ಲಿ ಪ್ರತಿನಿತ್ಯ 56ರ ಸರಾಸರಿಯಲ್ಲಿ ಪಾದಚಾರಿಳು ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ. ಹೀಗಾಗಿ ನಮ್ಮ ರಸ್ತೆಗಳನ್ನು ಯಮಲೋಕಕ್ಕೆ ಹಾದಿ ಎಂದು ಹೇಳಿದ್ದು. ದಿನೇ ದಿನೆ ನಮ್ಮ ರಸ್ತೆಗಳು ಅಪಾಯಕಾರಿಯಾಗುತ್ತಿದ್ದು, 2014ರಲ್ಲಿ 12,330 ಮಂದಿ ರಸ್ತೆ ಅಪಘಾತದಲ್ಲಿ ಸತ್ತರೆ 2017ರಲ್ಲಿ 20457 ಪಾದಚಾರಿಗಳು ಪ್ರಾಣ ಕಳೆದುಕೊಂಡಿದ್ದರು. ಕೇವಲ 3 ವರ್ಷಗಳಲ್ಲಿ ಶೇ.66ರಷ್ಟು ಸಾವಿನ ಪ್ರಮಾಣ ಹೆಚ್ಚಿದೆ. ಇನ್ನು ಕಳೆದ ವರ್ಷ 48,746 ದ್ವಿಚಕ್ರ ವಾಹನ ಸವಾರರು, 3559 ಸೈಕಲ್ ಸವಾರರು ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ

ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಕೇಂದ್ರ ಸರ್ಕಾರ ಕ್ರಿಯಾತ್ಮಕ ಜಾಹೀರಾತುಗಳನ್ನು ಮಾಡಿದರೂ ನಮ್ಮ ಜನ ಅದನ್ನು ಪಾಲಿಸಲು ಮನಸ್ಸು ಮಾಡುತ್ತಿಲ್ಲ. ಪಾದಚಾರಿಗಳ ಸಾವಿನ ಪ್ರಮಾಣದಲ್ಲಿ ತಮಿಳುನಾಡು (3507) ಅಗ್ರಸ್ಥಾನ ಪಡೆದರೆ ಮಹಾರಾಷ್ಟ್ರ (1831), ಆಂಧ್ರ (1379) ಅಗ್ರ ಮೂರು ಸ್ಥಾನ ಪಡೆದಿವೆ.
ದ್ವಿಚಕ್ರ ವಾಹನ ಸವಾರರ ಸಾವಿನ ಪಟ್ಟಿಯಲ್ಲಿಯೂ ತಮಿಳುನಾಡು (6329) ಮೊದಲ ಸ್ಥಾನ ಪಡೆದಿದ್ದು, ನಂತರ ಉತ್ತರ ಪ್ರದೇಶ (5699), ಮಹಾರಾಷ್ಟ್ರ (4659) ಇವೆ.

ರಸ್ತೆ ಸುರಕ್ಷತೆಗಾಗಿ ಸುಪ್ರೀಂ ಕೋರ್ಟ್ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ 500 ಮೀ. ದೂರ ಮದ್ಯದ ಅಂಗಡಿಗೆ ನಿಷೇಧ ಹೇರಿ ತೀರ್ಪು ಕೊಟ್ಟರು ಅದು ಪಾಲನೆ ಮಾಡುವ ಆಸಕ್ತಿ ನಮ್ಮ ಸರ್ಕಾರ ಹಾಗೂ ಜನರಿಗೆ ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ನಿರ್ಲಕ್ಷ್ಯದಿಂದ ಪ್ರತಿ ವರ್ಷ ಸಾವಿರಾರು ಮಂದಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದಾರೆ.

Leave a Reply