ಗರ್ಭಕೋಶದ ಕ್ಯಾನ್ಸರ್ ನ ಅಪಾಯ ಹಾಗೂ ಚಿಕಿತ್ಸೆ ಏನು?

 ಡಾ.ಬಿ.ರಮೇಶ್

ಗರ್ಭಕೋಶದ ಒಳಪದರಿನಲ್ಲಿ ಕಂಡುಬರುವ ಕ್ಯಾನ್ಸರ್’ನ್ನು ‘ಎಂಡೋಮೆಟ್ರಿಯ ಕ್ಯಾನ್ಸರ್’ ಎಂದು ಹೇಳಲಾಗುತ್ತದೆ. ಸಂತಾನೋತ್ಪತ್ತಿ ಅಂಗಕ್ಕೆ ಉಂಟಾಗುವ ಕ್ಯಾನ್ಸರ್ ಗಳಲ್ಲಿ ಇದು 3ನೇ ಮುಖ್ಯ ಕ್ಯಾನ್ಸ ಆಗಿದೆ. ಸರ್ವಿಕಸ್ ಕ್ಯಾನ್ಸರ್ ಹಾಗೂ ಓವೇರಿಸ್ ಕ್ಯಾನ್ಸರ್ ಉಳಿದ ಎರಡು ಮುಖ್ಯ ಕ್ಯಾನ್ಸರ್ ಗಳಾಗಿವೆ.

ಮುಟ್ಟು ನಿಂತವರಲ್ಲಿಯೇ ಸಾಮಾನ್ಯವಾಗಿ ಇದು ಕಾಣಿಸಿಕೊಳ್ಳುತ್ತದೆ. ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸ ಹೊಂದಿದ ಮಧ್ಯವಯಸ್ಸಿನ ಮಹಿಳೆಯರಲ್ಲೂ ಇದು ಗೋಚರಿಸಬಹುದು.

ಯಾರ್ಯಾರಿಗೆ ಇದರ ಅಪಾಯ ಇದೆ?

ಯಾವ ಮಹಿಳೆಯರಲ್ಲಿ ಈಸ್ಟ್ರೋಜನ್ ಹಾರ್ಮೋನಿನ ಪ್ರಮಾಣ ಜಾಸ್ತಿ ಇದ್ದು, ಪ್ರೊಜೆಸ್ಟ್ರಾನ್ ಪ್ರಮಾಣ ಕಡಿಮೆ ಇರುತ್ತೊ ಅಂಥವರಲ್ಲಿ ಈ ಕ್ಯಾನ್ಸರ್ ನ ಸಾಧ್ಯತೆ ಇರುತ್ತದೆ.

 • ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ ಅಂದರೆ ಪಿಸಿಓಸಿ ಇರುವವರಲ್ಲಿ, ಅತಿಯಾದ ದೇಹತೂಕ ಹೊಂದಿರುವವರಲ್ಲಿ ಗರ್ಭಕೋಶದ ಒಳಪದರಿನ ಕ್ಯಾನ್ಸರ್ ಉಂಟಾಗಬಹುದು.
 • ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ಅದು ಅನುವಂಶಿಕವಾಗಿ ಮುಂದುವರಿಯಬಹುದು.
 • ಬಹುಬೇಗ ಋತುಚಕ್ರ ಶುರುವಾಗಿ ತಡವಾಗಿ ಮುಟ್ಟು ನಿಂತವರಲ್ಲಿ ಈ ಬಗೆಯ ಕ್ಯಾನ್ಸರಿನ ಸಾಧ್ಯತೆ ಹೆಚ್ಚು. ಅವರಲ್ಲಿ ಹಾರ್ಮೋನ್ ಎಕ್ಸ್ ಪೋಸ್ ಜಾಸ್ತಿ ಇರುತ್ತೆ.
 • ಗರ್ಭಧರಿಸದೇ ಇರುವ ಮಹಿಳೆಯರಲ್ಲಿ ಗರ್ಭಕೋಶದ ಪದರು ಬೆಳೆಯುತ್ತಾ ಹೋಗಿ ಕ್ಯಾನ್ಸರಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.
 • ಸ್ತನ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುವ ಮಹಿಳೆಯರಿಗೆ ಈ ಕ್ಯಾನ್ಸರಿನ ಸಾಧ್ಯತೆ ಇರುತ್ತದೆ.

ಇದರ ಲಕ್ಷಣಗಳು

 • ಮುಟ್ಟು ನಿಂತವರಲ್ಲಿ ಒಮ್ಮಿಂದೊಮ್ಮೆ ರಕ್ತಸ್ರಾವ ಉಂಟಾಗುವುದು.
 • ಕೆಲವರಿಗೆ 15 ದಿನಕ್ಕೊಮ್ಮೆ, 20 ದಿನಕ್ಕೊಮ್ಮೆ ಅನಿಯಮಿತಎಂಬಂತೆ ರಕ್ತಸ್ರಾವ ಆಗುತ್ತಿರುತ್ತದೆ.
 • ಮತ್ತೆ ಕೆಲವರಿಗೆ ಬಿಳಿಸ್ರಾವ ಆಗುತ್ತದೆ.

ಏನೇನು ಪರೀಕ್ಷೆ?

 • ಸ್ಕ್ಯಾನಿಂಗ್ ಮಾಡಿ ಗರ್ಭಕೋಶದ ಒಳಪದರಿನ ಗಾತ್ರದ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಅದರ ವಾಸ್ತವ ಗಾತ್ರ 5 ಮಿಲಿ ಮೀಟರ್ ಗಿಂತ ಕಡಿಮೆ ಇರಬೇಕು. ಅದಕ್ಕಿಂತ ಹೆಚ್ಚಿಗೆ ಇದೆಯೇ ಎಂದು ನೋಡಲಾಗುತ್ತದೆ.
 • ಪರೀಕ್ಷೆಯನ್ನು ಮತ್ತಷ್ಟು ನಿಖರವಾಗಿ ನಡೆಸಬೇಕೆಂದರೆ ಹಿಸ್ಟ್ರೊಸ್ಕೋಪಿ ಪರೀಕ್ಷೆ ನಡೆಸಲಾಗುತ್ತದೆ.
 • ಪರೀಕ್ಷೆಯಲ್ಲಿ ನಾರ್ಮಲ್ ಇಲ್ಲ ಎಂದು ಗೊತ್ತಾದರೆ, ಆ ಭಾಗದ ಟಿಶ್ಯೂತೆಗೆದು ಬಯಾಪ್ಸಿಗೆ ಕಳಿಸಲಾಗುತ್ತದೆ.
 • ಟಿಶ್ಯೂವನ್ನು ಮೈಕ್ರೋಸ್ಕೋಪ್ ನಲ್ಲಿ ಪರಿಶೀಲಿಸಿದಾಗ ಕ್ಯಾನ್ಸರ್ ಟೈಪ್ 1 ಹಂತದಲ್ಲಿದೆಯೊ ಟೈಪ್ 2 ಹಂತದಲ್ಲಿದೆಯೊ ಎಂಬುದು ಗೊತ್ತಾಗುತ್ತದೆ.
 • MRI ಸ್ಕ್ಯಾನ್ ಮತ್ತು PET ಸ್ಕ್ಯಾನ್ ಮುಖಾಂತರ ಮತ್ತಷ್ಟು ನಿಖರ ಪರೀಕ್ಷೆ ಮಾಡಬಹುದಾಗಿದೆ.

ಸ್ಟೇಜಿಂಗ್ ಕಂಡುಕೊಳ್ಳುವ ಅವಶ್ಯಕತೆ ಏನಿದೆ?

ಶಸ್ತ್ರಚಿಕಿತ್ಸೆಯ ಬಳಿಕ ಕ್ಯಾನ್ಸರ್ ಗ್ರಸ್ಥ ಮಹಿಳೆಗೆ ಕೀಮೊಥೆರಪಿ ಕೊಡಬೇಕಾ, ರೇಡಿಯೊಥೆರಪಿ ಕೊಡಬೇಕಾ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.

ಸ್ಟೇಜ್ 1: ಕ್ಯಾನ್ಸರ್ ಗರ್ಭಕೋಶಕ್ಕಷ್ಟೇ ಸೀಮಿತವಾಗಿರುತ್ತದೆ.
ಸ್ಟೇಜ್ 2: ಕ್ಯಾನ್ಸರ್ ಗರ್ಭಕೋಶದಿಂದ ಸ್ವಲ್ಪ ಮುಂದೆ ಗರ್ಭಕೋಶದ ಹೊರಮೈವರೆಗೂ ಪಸರಿಸಿರುತ್ತದೆ.
ಸ್ಟೇಜ್ 3: ಗರ್ಭಕೋಶದಿಂದ ಆಸುಪಾಸಿನ ಅಂಗಗಳಿಗೆ ತಲುಪಿರುತ್ತೆ.
ಸ್ಟೇಜ್ 4: ಕ್ಯಾನ್ಸರ್ ಗರ್ಭಕೋಶದಿಂದ ಮೂತ್ರಕೋಶ, ಶ್ವಾಸಕೋಶ ಹಾಗೂ ಬೇರೆ ಅಂಗಗಳಿಗೂ ತಲುಪಿರುತ್ತೆ.

ಚಿಕಿತ್ಸೆ ಹೇಗೆ?

ನುರಿತ ಕ್ಯಾನ್ಸರ್ ತಜ್ಜರಿಂದ ಚಿಕಿತ್ಸೆ ಪಡೆಯಬೇಕು.ಕ್ಯಾನ್ಸರ್ ಯಾವ ಹಂತದಲ್ಲಿ ಇದೆ ಎನ್ನುವುದನ್ನು ಕಂಡುಕೊಂಡು ವೈದ್ಯರು ಚಿಕಿತ್ಸೆ ನೀಡುತ್ತಾರೆ. ಆರಂಭಿಕ ಹಂತದಲ್ಲಿದ್ದಾಗ ಕ್ಯಾನ್ಸರ್ ಗೆ ಚಿಕಿತ್ಸೆ ನೀಡುವುದರಿಂದ ಸಾಕಷ್ಟು ಉತ್ತಮ ಫಲಿತಾಂಶ ಕಂಡುಕೊಳ್ಳಬಹುದು.

Radical Hysterectomy ಶಸ್ತ್ರಚಿಕಿತ್ಸೆಯಿಂದ Stage I & Stage II ಕ್ಯಾನ್ಸರ್‍ಅನ್ನು ಗುಣಪಡಿಸಬಹುದು. Stage 3 & Stage 4 ಖಾಯಿಲೆಗೆ Radiotheraphy ಚಿಕಿತ್ಸೆಯನು ನೀಡಬೇಕು.ಆದರೆ ರೋಗಿ ಬದುಕುಳಿಯುವ ಸಾಧ್ಯತೆ ಕಡಿಮೆ.

ಚಿಕಿತ್ಸೆಯ ಬಳಿಕ

ಶಸ್ತ್ರಚಿಕಿತ್ಸೆಯ ಬಳಿಕ ಪ್ರತಿ 3 ತಿಂಗಳಿಗೊಮ್ಮೆ ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಂಡು, ಕ್ಯಾನ್ಸರ್ ನ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಬಹುದು.
Pap smear & Scanning ಅನ್ನು ಪ್ರತಿ 6 ತಿಂಗಳಿಗೊಮ್ಮೆ ಮಾಡಬೇಕು.

ಮಾಹಿತಿಗೆ:
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

ಇಮೇಲ್: altiushospital@yahoo.com, www.altiushospital.com

Leave a Reply