ಕೇವಲ ನಾಲ್ಕು ತಿಂಗಳಲ್ಲಿ 18 ಸಾವಿರ ಕೋಟಿ ಕಪ್ಪು ಹಣ ಬಹಿರಂಗಪಡಿಸಿದ ಗುಜರಾತಿಗಳು!

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ನಿರ್ಧಾರ ಪ್ರಕಟಿಸುವ ಮುನ್ನ ಅಂದರೆ 2016 ಜೂನ್ ನಿಂದ ಸೆಪ್ಟೆಂಬರ್ ವರೆಗೂ ಆದಾಯ ಘೋಷಣೆ ಯೋಜನೆ (Income Declaration Scheme) ಮೂಲಕ ಕಪ್ಪುಹಣ ಹೊಂದಿರುವವರು ದಂಡ ಕಟ್ಟಿ ಅದನ್ನು ಬಿಳಿ ಮಾಡಿಕೊಳ್ಳುವ ಅವಕಾಶ ನೀಡಿತ್ತು. ಈ ಯೋಜನೆ ಅಡಿಯಲ್ಲಿ ದೇಶಾದ್ಯಂತ ಒಟ್ಟು 62,250 ಕೋಟಿ ರು.ನಷ್ಟು ಕಪ್ಪು ಹಣ ಬಹಿರಂಗಪಡಿಸಲಾಗಿದ್ದು, ಅದರಲ್ಲಿ ಅತಿ ಹೆಚ್ಚು ಕಪ್ಪುಹಣ ಬಹಿರಂಗ ಪಡಿಸಿದವರು ಗುಜರಾತಿಗಳು!

ಹೌದು, ಈ ನಾಲ್ಕು ತಿಂಗಳ ಅವಧಿಯಲ್ಲಿ ಗುಜರಾತಿನವರು ಒಟ್ಟು 18 ಸಾವಿರ ಕೋಟಿ ರು. ಕಪ್ಪುಹಣ ಬಹಿರಂಗಪಡಿಸಿದ್ದು, ದೇಶದಲ್ಲಿ ಬಹಿರಂಗಪಡಿಸಲಾದ ಕಪ್ಪು ಹಣದ ಪ್ರಮಾಣದಲ್ಲಿ ಶೇ.29ರಷ್ಟು ಗುಜರಾತಿಗಳೇ ಆಗಿದ್ದಾರೆ. ಭರತ್ ಸಿನ್ಹಾ ಝಾಲ ಎಂಬುವವರು ಈ ಯೋಜನೆಯ ಕುರಿತು ತೆರಿಗೆ ಇಲಾಖೆಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿ ಈ ವಿಚಾರವಾಗಿ ಮಾಹಿತಿ ಪಡೆಯಲಾಗಿದೆ. ಈ ಅರ್ಜಿಗೆ ಉತ್ತರಿಸಲು ತೆರಿಗೆ ಇಲಾಖೆ 2 ವರ್ಷಗಳ ಕಾಲಾವಕಾಶ ತೆಗೆದುಕೊಂಡಿದ್ದು, ಈಗ ಮಾಹಿತಿ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ಝಾಲ, ‘ಮೊದಲು ತೆರಿಗೆ ಅಧಿಕಾರಿಗಳು ನನ್ನ ಮಾಹಿತಿ ಹಕ್ಕು ಅರ್ಜಿಯನ್ನು ಕಳೆದುಹಾಕಿದ್ದರು. ನಂತರ ಆ ಅರ್ಜಿ ಗುಜರಾತಿ ಭಾಷೆಯಲ್ಲಿದೆ ಎಂದು ಹೇಳಿ ನಿರಾಕರಿಸಿತ್ತು. ಈ ವರ್ಷ ಸೆಪ್ಟೆಂಬರ್ 5ರಂದು ದೆಹಲಿಯಲ್ಲಿರುವ ತೆರಿಗೆ ಇಲಾಖೆಯ ಮುಖ್ಯ ಮಾಹಿತಿ ಆಯುಕ್ತರು ನನ್ನ ಅರ್ಜಿಗೆ ಸಂಬಂಧಿಸಿದ ಮಾಹಿತಿ ನೀಡಿದ್ದಾರೆ’ ಎಂದಿದ್ದಾರೆ.

Leave a Reply