ಅನ್ನದಾತನ ವಿರುದ್ಧ ಜಲಫಿರಂಗಿ ಪ್ರಯೋಗಿಸಿದ ಕೇಂದ್ರ!

ಡಿಜಿಟಲ್ ಕನ್ನಡ ಟೀಮ್:

ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿ, ಸಾಲಮನ್ನಾ, ವಿದ್ಯುತ್ ಹಾಗೂ ಇಂಧನ ಬೆಲೆ ಕಡಿತ ಸೇರಿದಂತೆ ಅನೇಕ ಬೇಡಿಕೆ ಈಡೆರಿಸುವಂತೆ ಆಗ್ರಹಿಸಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭನೆಗೆ ಮುಂದಾದ ರೈತರಿಗೆ ಜಲಫಿರಂಗಿಯ ಉತ್ತರ ಸಿಕ್ಕಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ರೈತಾಪಿ ವರ್ಗದ ಮೇಲೆ ನಿರಾಸಕ್ತಿ ತೋರುತ್ತಿದೆ ಎಂದು ಆರೋಪಿಸಿ ಭಾರತೀಯ ಕಿಸಾನ್‌ ಯೂನಿಯನ್ ನೇತೃತ್ವದಲ್ಲಿ ಸೆ. 23 ರಿಂದ ಹರಿದ್ವಾರದಿಂದ ದೆಹಲಿಯ ಕಿಸಾನ್ ಘಾಟ್ ತನಕ ‘ಕಿಸಾನ್ ಕ್ರಾಂತಿ’ ಎಂಬ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಉತ್ತರ ಪ್ರದೇಶದಿಂದ ದೆಹಲಿಗೆ ಪಾದಯಾತ್ರೆ ಮೂಲಕ ರೈತರು ಆಗಮಿಸುತ್ತಿದ್ದ ವೇಳೆ ದೆಹಲಿಯ ಗಡಿ ಭಾಗದಲ್ಲಿ ಪ್ರತಿಭಟನಾನಿರತ ರೈತರನ್ನು ತಡೆದ ಪೊಲೀಸರು ಜಲಫಿರಂಗಿ ಪ್ರಯೋಗಿಸಿದ್ದಾರೆ.

ಈ ಪಾದಯಾತ್ರೆಯಲ್ಲಿ 60,000ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಪೊಲೀಸರು ದೆಹಲಿ ಪ್ರವೇಶಕ್ಕೆ ಅವಕಾಶ ನೀಡದಿದ್ದಾಗ ಜಗ್ಗದ ರೈತರು ಟ್ರಾಕ್ಟರ್ ಹಾಗೂ ಎತ್ತಿನಗಾಡಿಯ ಮೂಲಕ ಬ್ಯಾರಿಕೇಡ್‌ಗಳನ್ನು ತಳ್ಳಿ ಒಳನುಗ್ಗಲು ಯತ್ನಿಸಿದ್ದಾರೆ. ಆಗ ಪೊಲೀಸರು ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಿದರು.

ಪೊಲೀಸರ ಕ್ರಮವನ್ನು ಪ್ರಶ್ಲಿಸಿದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್, ”ರೈತರಿಗೆ ದೆಹಲಿ ಪ್ರವೇಶಿಸಲು ಅವಕಾಶ ನೀಡಲು ನಿರಾಕರಿಸಿದ್ದೇಕೆ? ಪಾದಯಾತ್ರೆ ಶಿಸ್ತುಬದ್ಧವಾಗಿ ನಡೆಯುತ್ತಿತ್ತು. ನಾವು ನಮ್ಮ ಸಮಸ್ಯೆಯನ್ನು ಸರಕಾರದ ಮುಂದೆ ಇಡದೆ ಬೇರೆ ಯಾರ ಬಳಿ ಬಳಿ ಇಡಬೇಕು? ನಾವು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಬೇಕೇ?’’ ಎಂದು ಭಾರತೀಯ ಪ್ರಶ್ನಿಸಿದ್ದಾರೆ.

ರೈತರ ವಿರುದ್ಧದ ಕ್ರಮಕ್ಕೆ ಆಕ್ರೋಶ ವ್.ಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಿಡಿಕಾರಿರುವುದು ಹೀಗೆ…”ರೈತರಿಗೆ ದಿಲ್ಲಿ ಪ್ರವೇಶಿಸಲು ಅವಕಾಶ ನೀಡದಿರುವುದು ತಪ್ಪು. ನಾವೆಲ್ಲರೂ ರೈತರ ಪರವಾಗಿದ್ದೇವೆ.”

Leave a Reply