ಇಂಧನ ಬೆಲೆ ₹ 2.50 ಇಳಿಸಿದ ಕೇಂದ್ರ! ರಾಜ್ಯ ಸರ್ಕಾರದ ಕಾಪಿ ಎಂದ ದೇವೇಗೌಡ್ರು!

ಡಿಜಿಟಲ್ ಕನ್ನಡ ಟೀಮ್:

ನಿರಂತರ ಇಂಧನ ಬೆಲೆ ಏರಿಕೆಯಿಂದ ವ್ಯಾಪಕ ಟೀಕೆಗೆ ಒಳಗಾಗಿದ್ದ ಕೇಂದ್ರ ಸರ್ಕಾರ ಈಗ ತೈಲ ದರ ಇಳಿಕೆಗೆ ಮುಂದಾಗಿದೆ. ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ತಲಾ ₹2.50ನಷ್ಟು ಇಳಿಸಿದ್ದು, ರಾಜ್ಯ ಸರ್ಕಾರಗಳು ₹2.50 ಇಳಿಸಿ ಒಟ್ಟು ₹5 ರಷ್ಟು ಬೆಲೆ ಇಳಿಕೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಕೇಂದ್ರದ ತೆರಿಗೆ ಸುಂಕದಲ್ಲಿ ₹1.5ರಷ್ಟು ಹಾಗೂ ತೈಲ ಕಂಪನಿಗಳಿಂದ ₹1ರಷ್ಟು ಬೆಲೆ ಇಳಿಕೆಯಾಗಿದೆ. ಈ ನಿರ್ಧಾರದಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ₹10,500 ಕೋಟಿ ಹೊರೆ ಬೀಳಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.

ಜೇಟ್ಲಿ ಅವರ ಮನವಿಗೆ ಮಹಾರಾಷ್ಟ್ರ, ಗುಜರಾತ್ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಸ್ಪಂದಿಸಿದ್ದು, ಬೆಲೆ ಇಳಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ‘ಕೇಂದ್ರ ಸರ್ಕಾರ ಈಗಲಾದರೂ ಜಾಗೃತವಾಗಿ ಬೆಲೆ ಇಳಿಕೆಗೆ ಮುಂದಾಗಿದೆ. ನಮ್ಮ ಸರ್ಕಾರ ಒಂದು ತಿಂಗಳ ಹಿಂದೆಯೇ ₹2 ರಷ್ಟು ಬೆಲೆ ಇಳಿಕೆ ಮಾಡಿದ್ದು, ಈಗ ಮತ್ತೇ ಬೆಲೆ ಇಳಿಸುವ ಮಾತಿಲ್ಲ’ ಎಂದಿದ್ದಾರೆ.

ಇನ್ನು ನವವೆಹಲಿಯವ ಮಾಜಿ ಪ್ರಧಾನಿ ದೇವೇಗೌಡರು ಕೇಂದ್ರದ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ಕರ್ನಾಟಕದಲ್ಲಿರುವ ಮೈತ್ರಿ ಸರ್ಕಾರದ ನಿರ್ಧಾರವನ್ನು ಕೇಂದ್ರ ಕಾಪಿ ಮಾಡಿದೆ. ಈಗ ಇತರೆ ರಾಜ್ಯಗಳು ನಮ್ಮ ಸರ್ಕಾರವನ್ನು ಕಾಪಿ ಮಾಡಲಿವೆ’ ಎಂದಿದ್ದಾರೆ.

Leave a Reply