ಕಾಂಗ್ರೆಸ್ ಗೆ ಕುಮಾರಸ್ವಾಮಿ ಅನಿವಾರ್ಯ! ಕೈ ನಾಯಕರಿಗೆ ಅಂಬಿ ಉಪದೇಶ!

ಡಿಜಿಟಲ್ ಕನ್ನಡ ಟೀಮ್:

‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ಗೆ ಅನಿವಾರ್ಯತೆಯೇ ಹೊರತು, ಕುಮಾರಸ್ವಾಮಿಗೆ ಕಾಂಗ್ರೆಸ್‌ ಅನಿವಾರ್ಯವಲ್ಲ…’ ಇದು ಮಾಜಿ ಮಂತ್ರಿ ಅಂಬರೀಶ್‌ ಕಾಂಗ್ರೆಸ್ ಗೆ ಪರೋಕ್ಷವಾಗಿ ಎಚ್ಚರಿಕೆ ನೀಡುತ್ತಾ ಸಿಎಂ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ ಪರಿ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದ್ದಿಷ್ಟು…

‘ಸರಕಾರ ಬೀಳಿಸಿದರೆ, ಮುಂದೇನಾಗುತ್ತದೆ ಎಂಬುದನ್ನು ಕಾಂಗ್ರೆಸ್‌ ಅರಿತು ಕೆಲಸ ಮಾಡಬೇಕು. ಕುಮಾರಸ್ವಾಮಿ ಅವರನ್ನು ಬಿಟ್ಟರೆ ಸರಕಾರ ಉಳಿಯುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು.
ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಇಲ್ಲವಾದ ಮೇಲೆ, ಯಾರೂ ನಾಯಕರು ಹುಟ್ಟಿಕೊಳ್ಳಲಿಲ್ಲವೇ? ಅಂತೆಯೇ ಮಂಡ್ಯ ಕಾಂಗ್ರೆಸ್ ಗೂ ಹೊಸ ನಾಯಕರು ಬರುತ್ತಾರೆ.
ನನಗೆ ಪಕ್ಷದ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಪುತ್ರ ಅಭಿಷೇಕ್‌ ನಾನು ಇರುವವರೆಗೂ ರಾಜಕೀಯಕ್ಕೆ ಬರುವುದಿಲ್ಲ. ಮಂಡ್ಯ ಜಿಲ್ಲೆಗೆ ನನ್ನ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದೇನೆ. ಮಹಿಳಾ ಯುನಿವರ್ಸಿಟಿ, ಕೆರಗೋಡು ರಸ್ತೆ, ಮಂಡ್ಯ ಅಮೃತ ಮಹೋತ್ಸವ, ರಾಜ್ ಕುಮಾರ್ ಕಾರ್ಯಕ್ರಮ, ಎಸ್.ಎಂ.ಕೃಷ್ಣ ಕಾರ್ಯಕ್ರಮ, ಮೆಡಿಕಲ್ ಕಾಲೇಜು ಆಸ್ಪತ್ರೆ, ಶಾಲಾ ಕಾಲೇಜು ಹೀಗೆ ಹಲವಾರು ಮಹತ್ವದ ಕಾರ್ಯ ಮಾಡಿದ್ದೇನೆ. ಮುಂದೆ ಬರುವ ನಾಯಕರು ಕೂಡ ಇವನ್ನೆಲ್ಲ ಮಾಡಲಿ.’

Leave a Reply