ಉಪ ಚುನಾವಣೆ ಸಮರಕ್ಕೆ ಮುಹೂರ್ತ ಪ್ರಕಟ!

ಡಿಜಿಟಲ್ ಕನ್ನಡ ಟೀಮ್:

ರಾಜ್ಯದ ಎರಡು ವಿಧಾನಸಭಾ (ರಾಮನಗರ, ಜಮಖಂಡಿ) ಹಾಗೂ ಮೂರು ಲೋಕಸಭಾ ಕ್ಷೇತ್ರ (ಮಂಡ್ಯ, ಬಳ್ಳಾರಿ, ಶಿವಮೊಗ್ಗ)ಗಳ ಉಪ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ.

ನವೆಂಬರ್ 3ರಂದು ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ನ.6ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಪಂಚ ರಾಜ್ಯಗಳ ವಿಧಾನಸಭೆ ಮಹಾ ಸಮರದ ದಿನಾಂಕ ಪ್ರಕಟ!

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಷ್ಠೆಯ ಕದನವಾಗಿ ಬಿಂಬಿತವಾಗಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಮಿಜೋರಾಂ ಹಾಗೂ ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಿದೆ.

ಶನಿವಾರ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಚುನಾವಣಾ ದಿನಾಂಕ ಪ್ರಕಟಿಸಿದ ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾದ ಓ.ಪಿ ರಾವತ್, ‘ಇಂದಿನಿಂದಲೇ ಈ ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ಚುನಾವಣೆಗಳಲ್ಲಿ ವಿವಿ ಪ್ಯಾಟ್ ಬಳಸಲಾಗುವುದು. ಅಭ್ಯರ್ಥಿಗಳು ಅಪರಾಧ ಹಿನ್ನಲೆ ಇದ್ದರೆ ಅದನ್ನು ಬಹಿರಂಗ ಪಡಿಸಬೇಕು. ಈ ರಾಜ್ಯಗಳ ಸರ್ಕಾರದ ಅವಧಿ 2019ರ ಜನವರಿ ಮಧ್ಯಕ್ಕೆ ಮುಕ್ತಾಯವಾಗುವುದರಿಂದ ಡಿ.15ರ ಒಳಗಾಗಿ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳಿಸಬೇಕು’ ಎಂದರು.

ಯಾವ ರಾಜ್ಯಗಳಲ್ಲಿ ಚುನಾವಣೆ ಯಾವಾಗ?

ಮಧ್ಯಪ್ರದೇಶ:
ನ.7: ನಾಮಪತ್ರ ಸಲ್ಲಿಕೆ.
ನ.14: ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ.
ನ.28: ಮತದಾನ

ಛತ್ತೀಸ್ ಗಢ: (ಎರಡು ಹಂತಗಳಲ್ಲಿ ಮತದಾನ)
ಅ.16: ನಾಮಪತ್ರ ಸಲ್ಲಿಕೆ.
ಅ.23 ಮತ್ತು 26: ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ.
ನ.12: ಮೊದಲ ಹಂತ ಮತದಾನ (18 ಕ್ಷೇತ್ರ)
ನ.20: ಎರಡನೇ ಹಂತದ ಮತದಾನ (72 ಕ್ಷೇತ್ರ)

ರಾಜಸ್ಥಾನ ಮತ್ತು ತೆಲಂಗಾಣ:
ನ.12: ನಾಮಪತ್ರ ಸಲ್ಲಿಕೆ
ನ.22: ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ
ಡಿ.7: ಮತದಾನ

ಮಿಜೋರಾಂ:
ನ.7: ನಾಮಪತ್ರ ಸಲ್ಲಿಕೆ.
ನ.14: ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ.
ನ.28: ಮತದಾನ

Leave a Reply