ಸತ್ತ ಕುದುರೆ, ಊರುಗೋಲಿನ ಆಸರೆ; ಪುಟ್ಟರಾಜು, ಚಲುವಣ್ಣನ ಬೈದಾಟ ನೋಡಿರೇ.!

ಡಿಜಿಟಲ್ ಕನ್ನಡ ಟೀಮ್:

ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರ ನಡುವಣ ತಿಕ್ಕಾಟ ತಾರಕಕ್ಕೇರಿದ್ದು, ಹಾಲಿ ಮತ್ತು ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಮತ್ತು ಚಲುವರಾಯಸ್ವಾಮಿ ಪರಸ್ಪರ ವಾಗ್ಬಾಣಗಳಿಂದ ಚುಚ್ಚಿಕೊಂಡಿದ್ದಾರೆ.

ಮರುಚುನಾವಣೆಯಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಜೆಡಿಎಸ್ಗೆ ಬಿಟ್ಟುಕೊಡಬಾರದು. ಚುನಾವಣೆ ಮೈತ್ರಿ ಬೇಕಿಲ್ಲ ಎಂದು ಪಟ್ಟು ಹಿಡಿದಿರುವ ಚಲುವರಾಯಸ್ವಾಮಿ ಅವರನ್ನು ಸಚಿವ ಸಿ.ಎಸ್. ಪುಟ್ಟರಾಜು ಅವರು ‘ಸತ್ತ ಕುದುರೆ’ಗೆ ಹೋಲಿಸಿದ್ದಾರೆ. ‘ಮೈತ್ರಿ ಬೇಕು ಎಂದು ಇಲ್ಲಿ ಯಾರೂ ಗೋಗರೆಯುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 52 ಸಾವಿರ ಮತಗಳಿಂದ ಹೀನಾಯ ಸೋಲುಂಡಿರುವ ಚಲುವರಾಯಸ್ವಾಮಿ ಸ್ವಲ್ಪ ಬಾಯಿ ಮುಚ್ಚಿಕೊಂಡು ಇರೋದು ಒಳ್ಳೇದು’ ಎಂದು ತಿರುಗೇಟು ನೀಡಿದ್ದಾರೆ.

ಇದರಿಂದ ಕೆರಳಿ, ಕೆಂಡಮಂಡಲರಾಗಿರುವ ಚಲುವರಾಯಸ್ವಾಮಿ ಅವರು ಪುಟ್ಟರಾಜು ಅವರನ್ನು ಏಕವಚನದಲ್ಲಿ ಜಾಡಿಸಿದ್ದಾರೆ. ‘ಪುಟ್ಟರಾಜು ತಲೇಲಿ ಮಿದುಳಿಟ್ಟುಕೊಂಡು ಮಾತಾಡಬೇಕು. ಸ್ವಲ್ವ ಕಾಮನ್ಸೆನ್ಸ್ ಬಳಸಬೇಕು. ಅವರ ಸಿಎಂ (ಕುಮಾರಸ್ವಾಮಿ) ಹಿಂದೆ ಚಿಕ್ಕಬಳ್ಳಾಪುರದಲ್ಲಿ ಎಷ್ಟು ಮತಗಳ ಅಂತರದಿಂದ ಸೋತಿದ್ರು ಅನ್ನೋದನ್ನ ಇವನು ನೆನಪಿಸಿಕೊಳ್ಳಬೇಕು. ಇವರು (ಜೆಡಿಎಸ್) ಊರುಗೋಲು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇವರ ಮೈತ್ರಿ ಸರಕಾರಕ್ಕೆ ಕಾಂಗ್ರೆಸ್ ಹೆಗಲು ಬೇಕು. ಅದನ್ನು ಪುಟ್ಟರಾಜು ಮರೆತಿದ್ದಾನೆ. ಪಾಪ, ಅವನು ಯಾವತ್ತೂ ಸೋಲನ್ನೇ ಕಂಡಿಲ್ಲ ಅಲ್ಲವೇ. ಇವನು ಯಾರನ್ನು ನಂಬಿದ್ದಾರೋ (ದೇವೇಗೌಡರ ಕುಟುಂಬ) ಅವರಿಂದಲೇ ಮುಂದೊಂದು ದಿನ ಪಾಠ ಕಲಿಯುತ್ತಾನೆ. ಅಲ್ಲೀಗಂಟ ಅವನು ಸ್ವಲ್ವ ಕಾಯಬೇಕು’ ಅಂತ ಪ್ರತ್ಯಸ್ತ್ರ ಬಿಟ್ಟಿದ್ದಾರೆ.

Leave a Reply