ಕೆಜಿಎಫ್ ಫ್ಯಾನ್ಸ್ ಈ ಕಹಿ ಸುದ್ದಿ ಕೇಳಿಸಿಕೊಳ್ಳೋಕೆ ರೆಡಿಯಿಲ್ಲ..!

ಡಿಜಿಟಲ್ ಕನ್ನಡ ಟೀಮ್:

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಸೌತ್ ಸಿನುದುನಿಯಾದಲ್ಲಿ ಇನ್ನಿಲ್ಲದ ಕುತೂಹಲ ಕೆರಳಿಸಿದೆ. ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರೋ ಈ ಹೈವೋಲ್ಟೇಜ್ ಆ್ಯಕ್ಷನ್ ಸಿನಿಮಾ ಇದೇ ನವೆಂಬರ್ 16ಕ್ಕೆ ತೆರೆಗಪ್ಪಳಿಸಲಿದೆ. ರಾಕಿಂಗ್ ಸ್ಟಾರ್ ಫ್ಯಾನ್ಸ್ ಕೆಜಿಎಫ್ ರಾಕಿ ದರ್ಬಾರ್ ನೋಡೋಕೆ ಕಾತರದಿಂದ ಕಾಯ್ತಿದ್ದಾರೆ. ಹೀಗೆ ಕಾಯ್ತಿರೋ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಸಿಕ್ಕಿದೆ.

ಇತ್ತೀಚೆಗಷ್ಟೇ ಅಕ್ಟೋಬರ್ 14ಕ್ಕೆ ಕೆಜಿಎಫ್ ಟ್ರೈಲರ್ ಮತ್ತು ನವೆಂಬರ್ 16ಕ್ಕೆ ಸಿನಿಮಾ ರಿಲೀಸ್ ಮಾಡೋದಾಗಿ ಚಿತ್ರತಂಡ ಅನೌನ್ಸ್ ಮಾಡಿತ್ತು. ಆದ್ರೆ ಇದ್ದಕ್ಕಿದ್ದಂತೆ ಟ್ರೈಲರ್ ಮತ್ತು ಸಿನಿಮಾ‌ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಹರಿದಾಡ್ತಿದೆ. ಈ ಬಗ್ಗೆ ಚಿತ್ರತಂಡ ಸ್ಪಷ್ಟನೆ ಕೊಡ್ತಿಲ್ಲ. ಹಾಗಾಗಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕೆಜಿಎಫ್ ಟೀಂ ಸೈಲೆಂಟಾಗಿ ಇರೋದು ನೋಡಿ ಆ ಸುದ್ದಿ ನಿಜ ಅಂತ ಭಾವಿಸುತ್ತಿದ್ದಾರೆ.

ಹೊಸ ಸುದ್ದಿ ಪ್ರಕಾರ ಡಿಸೆಂಬರ್ ಮೂರನೇ ವಾರ ಸಿನಿಮಾ ರಿಲೀಸ್ ಆಗಲಿದೆಯಂತೆ. ಹಾಗಾಗಿ ಟ್ರೈಲರ್ ರಿಲೀಸ್ ಡೇಟ್ ಸಹ ಮುಂದಕ್ಕೆ ಹೋಗಿದೆ ಅನ್ನಲಾಗ್ತಿದೆ. ಕಳೆದ ಎರಡು ವರ್ಷಗಳಿಂದ ಕೆಜಿಎಫ್ ಸಿನಿಮಾಗಾಗಿ ಕಾಯ್ತಿರೋ ಅಭಿಮಾನಿಗಳಿಗೆ ಮತ್ತೆ ಸಿನಿಮಾ ತಡವಾಗುತ್ತೆ ಅನ್ನೋ ಸುದ್ದಿ ಆತಂಕ ತಂದಿದೆ. ಶೀಘ್ರದಲ್ಲೇ ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಕೆಜಿಎಫ್ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಮ್ಯಾಕೃಷ್ಣರಂತಹ ಘಟಾನುಘಟಿ ಕಲಾವಿದರು ಬಣ್ಷ ಹಚ್ಚಿದ್ದಾರೆ. 80ಕೋಟಿ ಬಂಡವಾಳದಲ್ಲಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡ್ತಿದೆ.

Leave a Reply