ಕೆಜಿಎಫ್: ನವೆಂಬರ್ ನಲ್ಲಿ ಟ್ರೇಲರ್, ಡಿಸೆಂಬರ್ 21ಕ್ಕೆ ರಿಲೀಸ್!

ಡಿಜಿಟಲ್ ಕನ್ನಡ ಟೀಮ್:

ನವೆಂಬರ್ 16ಕ್ಕೆ ತೆರೆ ಕಾಣಬೇಕಿದ್ದ ಬಹು ನಿರೀಕ್ಷಿತ ಕೆಜಿಎಫ್ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

ಭಾರತದ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲು ಹೊರಟಿರುವ ಹಿನ್ನೆಲೆಯಲ್ಲಿ ಚಿತ್ರ ಇನ್ನಷ್ಟು ಕೆಲಸಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಚಿತ್ರ ತಂಡ ಕಾಲಾವಕಾಶ ತೆಗೆದುಕೊಳ್ಳಲು ನಿರ್ಧರಿಸಿದೆ. ಈ ಕುರಿತು ಗಾಂಧಿ ನಗರದಲ್ಲಿ ಸುದ್ದಿ ಹಬ್ಬಿತ್ತಾದರು, ಚಿತ್ರ ತಂಡ ಈ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದರೆ ಈಗ ನವೆಂಬರ್ ನಲ್ಲಿ ಟ್ರೇಲರ್ ನೀಡಿ ಡಿಸೆಂಬರ್ 21ಕ್ಕೆ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಚಿತ್ರ ತಂಡ ತಿಳಿಸಿದೆ.

ಒಟ್ಟಿನಲ್ಲಿ ಭಾರತೀಯ ಚಿತ್ರರಂಗ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡುವ ವಿಶ್ವಾಸದಲ್ಲಿರುವ ಚಿತ್ರ ತಂಡ ಆತುರ ಪಡದೇ ಹೆಚ್ಚಿನ ಸಮಯ ತೆಗೆದುಕೊಂಡು ಉತ್ತಮ ಗುಣಮಟ್ಟ ನೀಡುವ ಪ್ರಯತ್ನದಲ್ಲಿದೆ.

Leave a Reply