ದಸರಾ ಉದ್ಘಾಟನೆ ಬಳಿಕ ಯಾರು ಏನಂದ್ರು?

ಡಿಜಿಟಲ್ ಕನ್ನಡ ಟೀಮ್:

ನಾಡಹಬ್ಬ ದಸರಾಗೆ ಮಹಿಳಾ ಸಾಧಕಿ ಸುಧಾಮೂರ್ತಿ ಚಾಲನೆ ನೀಡಿದ್ರು. ಬೆಳ್ಳಿರಥದಲ್ಲಿ ವಿರಾಜಮಾನವಾಗಿದ್ದ ತಾಯಿ ಚಾಮುಂಡೇಶ್ವರಿ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಹಬ್ಬಕ್ಕೆ ವಿದ್ಯುಕ್ತ ಚಾಲನೆ ಸಿಕ್ತು. ಕುಟುಂಬ ಸಮೇತ ಆಗಮಿಸಿ ದಸರಾ ಉದ್ಘಾಟನೆ ಮಾಡಿದ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ, ಕರುನಾಡಿಗೆ ಕೊಡುಗೆ ನೀಡಿದ್ರು. ಭಾಷಣದಲ್ಲಿ ಅವರು ಹೇಳಿದ್ದೇನು ಅಂತ ನೋಡೋದಾದ್ರೆ..

ಕನ್ನಡ ಜನತೆಗೆ ನನ್ನ‌ ನಮಸ್ಕಾರಗಳು. ದಸರಾ ಉದ್ಘಾಟಕಿಯಾಗಿ ಆಯ್ಕೆ ಮಾಡಿದ್ದಕ್ಕೆ ಮೊದಲು ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಧನ್ಯವಾದ. ಅದರಲ್ಲೂ ಅವಿರೋಧ ಆಯ್ಕೆ ವಿಷಯ ಕೇಳಿ ಆತ್ಯಂತ ಸಂತಸವಾಯಿತು. ದಸರಾ ಇಂದಿನ ಆಚರಣೆಯಲ್ಲ ಅದಕ್ಕೆ ತನ್ನದೆ ಆದ ಇತಿಹಾಸ ಇದೆ ಎಂದರು. ಬಳಿಕ ಪ್ರವಾಹದಿಂದ ತತ್ತರಿಸಿದ್ದ ಕೊಡಗಿಗೆ 25 ಕೋಟಿ ನೆರವು ಘೋಷಿಸಿದ ಅವರು ಕೊಡಗಿಗೆ ಹಣ ನೀಡೋದು ದಾನವಲ್ಲ ಅದು ನನ್ನ ಕರ್ತವ್ಯ. ಇನ್ಫೋಸಿಸ್ ನಿಂದ ಕೊಡಗಿಗೆ ನಮ್ಮ ಸೇವೆ ಅಷ್ಟೆ ಅಂದ್ರು. ನಾವು ನಿಂತ ಜಾಗವೇ ನಮ್ಮ‌ ನೆಲೆ. ನಾವು ಎಲ್ಲೇ ಇದ್ದರು ಅವರು ಪಕ್ಕದ ಮನೆ ಆಂಟಿ ಅಷ್ಟೆ ನಮ್ಮ ತಾಯಿ ಆಗೋಲ್ಲ. ಎಂದಿದಿಗೂ ಕನ್ನಡವೇ ನನ್ನ ತಾಯಿ. ನೀವು ಕೊಡಗಿಗೆ ವಿದ್ಯುತ್, ರಸ್ತೆ ಕಲ್ಪಿಸಿಕೊಟ್ಟರೆ ನಾವು 25 ಕೋಟಿ ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಸರ್ಕಾರಕ್ಕೆ ತಿಳಿಸಿದ್ರು.

ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಕುಮಾರಸ್ವಾಮಿ ಮಾತನಾಡಿ,  ಸುಧಾಮೂರ್ತಿಯವರನ್ನು ಹಾಡಿ ಹೊಗಳಿದ್ರು. ‘ತಾಯಿ ಹೃದಯವನ್ನು ಹೊಂದಿರುವ ಸುಧಾಮೂರ್ತಿ ಅವರು ನಾಡದೇವತೆಗೆ ಅಗ್ರಪೂಜೆ ಸಲ್ಲಿಸಿದರೆ ನಾಡಿನ ಎಲ್ಲಾ ಸಮಸ್ಯೆಗಳು ಬಗೆಹರಿದು ಚಾಮುಂಡೇಶ್ವರಿ ರಕ್ಷಣೆ ನೀಡುವ ವಿಶ್ವಾಸ ಇದೆ, ಅದರಿಂದಲೇ ಅವರನ್ನು ಆಯ್ಕೆ ಮಾಡಿದೆವು. ಕೊಡಗಿನ ಜನರ ಸಮಸ್ಯೆಗೆ ಸ್ಪಂದಿಸಿದ ಸುಧಾಮೂರ್ತಿಯವರಿಗೆ ಕೃತಜ್ಞತೆ ಸಲ್ಲಿಸಿದರು.

ಈಗ 25 ಕೋಟಿ ನೀಡುವುದಾಗಿ ಘೋಷಣೆ ಮಾಡುತ್ತಿರೋದು ಮೊದಲೇನಲ್ಲ, ಈ ಮೊದಲು ಮೆಟ್ರೋ ಯೋಜನೆಗೆ 200 ಕೋಟಿ, ಸೈಬರ್ ಕ್ರೈಂ ಮೇಲ್ದರ್ಜೆಗೆ ಏರಿಸಲು 22 ಕೋಟಿ, ಹೆಬ್ಬಾಳದ ಕೆರೆ ಅಭಿವೃದ್ಧಿಗೆ 15 ಕೋಟಿ ಹಣ ನೀಡಿದ್ದಾರೆ ಎಂದು ಸ್ಮರಿಸಿಕೊಂಡ್ರು. ನಾರಾಯಣ ಮೂರ್ತಿ ದಂಪತಿ‌ ಇಂದು ತಮ್ಮ ಸಂಸ್ಥೆಗಾಗಿ ತಾಯಿ ಚಾಮುಂಡಿ ಬಳಿ ಬೇಡಲಿಲ್ಲ. ಬದಲಿಗೆ ನಾಡಿನ ಜನರು ಸುಭೀಕ್ಷವಾಗಿ ಜೀವನ ನಡೆಸುವಂತೆ ಬೇಡಿದ್ದಾರೆ. ಸುಧಾಮೂರ್ತಿ ಅವರ ಆಯ್ಕೆ ನಾಡಿನ ಮಹಿಳೆಯರಿಗೆ ಗೌರವ ಅನ್ನೋ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲಾಯ್ತು ಎಂದರು. ಕೊನೆಯದಾಗಿ ರಾಜ್ಯದ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ, ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ನೆರವಾಗಲಿ. ತಾಯಿ ಚಾಮುಂಡೇಶ್ವರಿ ಎದುರು ಭರವಸೆ ನೀಡ್ತಿದ್ದೇನೆ. ನಿಮ್ಮ ಸಂಸಾರವನ್ನು ಬೀದಿ ಪಾಲು ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

ಇನ್ನು ದಸರಾ ವೇದಿಕೆಯಲ್ಲಿ ಟಿಪ್ಪು ಜಯಂತಿ ಕೂಡ ಸದ್ದು ಮಾಡ್ತು. ದಸರಾ ಉದ್ಘಾಟನಾ ವೇದಿಕೆಯಲ್ಲಿ ಟಿಪ್ಪು ಜಯಂತಿ‌ ಕುರಿತು ಮಾತನಾಡಿದ ಸಂಸದ ಪ್ರತಾಪ್‌ಸಿಂಹ, ಟಿಪ್ಪು ಜಯಂತಿಯನ್ನ ಬಂದ್ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ರು. ಇಂದು ದಸರಾ ಆಚರಣೆ ಮಾಡುತ್ತಿದ್ದೇವೆ ಎಂದರೆ ಅದು ಮೈಸೂರು ಅರಸರ ಕೊಡುಗೆ, ಅಂತಹ ಕುಟುಂಬದ ರಕ್ತಪಾತಕ್ಕೆ ಕಾರಣವಾಗಿದ್ದು ಟಿಪ್ಪು ಸುಲ್ತಾನ್, ಈ ಹೊತ್ತಿನಲ್ಲಾದರೂ ಮೈಸೂರು ಅರಸರಿಗೆ ಗೌರವ ನೀಡಿ, ನಿಮ್ಮ ಕಾಲದಲ್ಲಾದರೂ ಟಿಪ್ಪು ಜಯಂತಿ ಬಂದ್ ಮಾಡಿ ಎಂದು ಮನವಿ ಮಾಡಿಕೊಂಡರು.

Leave a Reply