ಗಂಗೆಯ ಸಂರಕ್ಷಣೆಗೆ 109 ದಿನ ಉಪವಾಸ ಮಾಡಿ ಪ್ರಾಣ ಬಿಟ್ಟ ಪರಿಸರವಾದಿ ಜಿಡಿ ಅಗರ್ವಾಲ್!

ಡಿಜಿಟಲ್ ಕನ್ನಡ ಟೀಮ್:

ಸತತ 109 ದಿನಗಳಿಂದ ಗಂಗಾ ನದಿ ಶುದ್ಧೀಕರಣಕ್ಕಾಗಿ ಹೋರಾಡುತ್ತಿದ್ದ ಪರಿಸರವಾದಿ ಹಾಗೂ ಐಐಟಿ ನಿವೃತ್ತ ಪ್ರೊಫೆಸರ್ ಜಿಡಿ ಅಗರ್ವಾಲ್​ ಅವರು ಗುರುವಾರ (87) ನಿಧನರಾಗಿದ್ದಾರೆ.

ಕಳೆದ ಜೂನ್ 22ರಿಂದ ಗಂಗಾ ನದಿ ಶುದ್ದೀಕರಣ, ನದಿಪಾತ್ರದ ಸಂರಕ್ಷಣೆಗಾಗಿ ಅಗರ್ವಾಲ್​ ಅವರು ಹರಿದ್ವಾರದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಉಪವಾಸದ ವೇಳೆ ಅವರು ಕೇವಲ ಜೇನುತುಪ್ಪ ಮಿಶ್ರಿತ ನೀರನ್ನು ಮಾತ್ರ ಸೇವಿಸುತ್ತಿದ್ದರು. ಕಳೆದು ಎರಡು ದಿನಗಳ ಹಿಂದೆ ನೀರನ್ನು ಕೂಡ ಅವರು ತ್ಯಜಿಸಿದ್ದರು.

ನಿರಂತರವಾಗಿ ಉಪವಾಸ ನಿರತರರಾಗಿದ್ದ ಇವರು ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣಕ್ಕೆ ಅವರನ್ನು ದೆಹಲಿಯ ಏಮ್ಸ್​ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಮಾಹಿತಿ ಬಂದಿದೆ.

ಗಂಗಾ ನದಿ ಶುದ್ಧೀಕರಣ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ 30 ವರ್ಷಗಳಿಂದ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಕೇವಲ ಗಂಗಾ ನದಿ ಶುದ್ಧೀಕರಣ ಮಾಡುತ್ತೇವೆ ಎಂದು ಹೇಳುತ್ತಿದೆ. ಆದರೆ ಯಾವುದೇ ಕಾರ್ಯ ನಡೆದಿಲ್ಲ ಎಂದು ಈ ಹಿಂದೆ ಅಗರ್ವಾಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

Leave a Reply