ರಘುದೀಕ್ಷಿತ್ ಮುಖಕ್ಕೂ ಮೀಟು ಮಸಿ! ಕ್ಷಮೆ ಕೇಳಿ ಗಾಯಕ ನೀಡಿದ ವಿವರಣೆ ಏನು?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಟ್ವಿಟ್ಟರ್ ನಲ್ಲಿ ಲೈಂಗಿಕ ದೌರ್ಜನ್ಯ ವಿರುದ್ಧ ಆರಂಭವಾಗಿರುವ ಮೀಟು ಅಭಿಯಾನ ಖ್ಯಾತನಾಮರ ಮುಖಕ್ಕೆ ಮಸಿ ಬಳಿಯುತ್ತಿದೆ. ಬಾಲಿವುಡ್ ಟಾಲಿವುಡ್, ರಾಜಕೀಯದ ಪ್ರಭಾವಿಗಳ ವಿರುದ್ಧ ಕೇಳಿಬಂದ ಮೀಟು ಆರೋಪ ಈಗ ಕನ್ನಡದ ರಘುದೀಕ್ಷಿತ್ ಅವರಿಗೂ ತಟ್ಟಿದೆ.

ಹೆಸರು ಹೇಳಿಕೊಳ್ಳಲು ಇಚ್ಚಿಸದ ಗಾಯಕಿ ರಘು ದೀಕ್ಷಿತ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈಕೆಯ ಆರೋಪವನ್ನು ಗಾಯಕಿ ಚಿನಮ ಅವರು ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದು, ಆಕೆಯ ಆರೋಪ ಹೀಗಿದೆ…

“ರಘು ದೀಕ್ಷಿತ್ ಪರಭಕ್ಷಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ರೆಕಾರ್ಡಿಂಗ್‌ಗಾಗಿ ಅವರ ಸ್ಟುಡಿಯೋಗೆ ಆಹ್ವಾನಿಸಲಾಗಿತ್ತು. ಅವರ ಪತ್ನಿಗೆ ಹುಷಾರಿಲ್ಲ ಎಂದಿದ್ದರು. ಅವರ ಪತ್ನಿ ಒಳ್ಳೆಯರು. ಅವರು ಬಂದ ಕಾರಣ ರೆಕಾರ್ಡಿಂಗ್ ಕೆಲಸ ನಡೆಯಲಿಲ್ಲ. ಕೆಲಸಕ್ಕಾಗಿ ಬಂದಿದ್ದೇನೆ ಎಂದು ಪತ್ನಿ ಬಳಿ ನಟಿಸುವಂತೆ ತಿಳಿಸಿದರು. ಈ ಬಗ್ಗೆ ಅವರ ಜತೆ ವಾಗ್ವಾದ ನಡೆಯಿತು. ಬಳಿಕ ಅವರ ಪತ್ನಿ ಬಂದು ಚೆನ್ನಾಗಿಯೇ ಮಾತನಾಡಿಕೊಂಡು ಹೊರಟು ಹೋದರು. ರೆಕಾರ್ಡಿಂಗ್ ಮುಗಿದ ಬಳಿಕ ಚೆಕ್‌ಗೆ ಸಹಿ ಹಾಕುವ ಸಂದರ್ಭದಲ್ಲಿ ನನ್ನನ್ನು ಹತ್ತಿರಕ್ಕೆ ಬರಸೆಳೆದು ಚುಂಬಿಸುವಂತೆ ಕೇಳಿದರು. ಬಳಿಕ ಬಾಗಿಲ ಬಳಿ ನನ್ನನ್ನು ಎತ್ತಿಕೊಳ್ಳಲು ಪ್ರಯತ್ನಿಸಿದರು, ನಾನಾಗ ಕೂಗುತ್ತಾ ಕೆಳಗೆ ಓಡಿ ಹೋದೆ. ಬಹಳಷ್ಟು ಹೆಣ್ಣುಮಕ್ಕಳು ಅವರ ಕೈಯಲ್ಲಿ ಇದೇ ರೀತಿ ಅನುಭವಿಸಿರುತ್ತಾರೆ ಎಂದು ನನಗೆ ಗೊತ್ತು. ಹೇಸಿಗೆ ಆಗುತ್ತದೆ. ನನ್ನ ಹೆಸರನ್ನು ಬಹಿರಂಗಪಡಿಸಲು ಇಚ್ಚಿಸಲ್ಲ. ನಿಜವಾಗಿ ನನಗೆ ಆ ಗಟ್ಸ್ ಇಲ್ಲ, ನಾನಿನ್ನೂ ಸಂಗೀತದಲ್ಲಿ ನೆಲೆನಿಲ್ಲುತ್ತಿದ್ದೇನೆ.”

ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ರಘು ದೀಕ್ಷಿತ್ ಕ್ಷಮೆ ಕೋರಿ ನೀಡಿರುವ ಸ್ಪಷ್ಟನೆ ಹೀಗಿದೆ…,

‘ನನ್ನ ವಿರುದ್ಧದ ಆರೋಪ ಕೇಳಿಬಂದಿರುವುದಕ್ಕೆ ನಾನು ಸ್ಪಷ್ಟನೆ ಹಾಗೂ ಕ್ಷಮೆಯನ್ನು ಕೇಳಲು ಬಯಸುತ್ತೇನೆ. ಗಾಯಕಿ ಚಿನ್ಮಯಿ ಅವರು ಈ ವಿಚಾರದಲ್ಲಿ ಬೇರೆಯವರ ಧನಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆಕೆ ಉತ್ತಮ ವ್ಯಕ್ತಿ. ಒಂದೆರಡು ಬಾರಿ ನನ್ನನ್ನು ಭೇಟಿ ಮಾಡಿದಾಗ ನನ್ನೊಂದಿಗೆ ಉತ್ತಮವಾಗಿ ಮಾತನಾಡಿದ್ದಾರೆ. ಅವರು ಹೇಳಿರುವ ಆ ಸ್ನೇಹಿತೆ ಯಾರು ಎಂದು ನನಗೆ ಗೊತ್ತು. ಆ ಘಟನೆ ನಿಜ, ಆದರೆ ಆಕೆ ನೀಡಿರುವ ವಿವರಣೆ ಸರಿಯಲ್ಲ.
ಆ ಘಟನೆ ನಡೆದ ಸಂದರ್ಭದಲ್ಲಿ ನಾನು ಆಕೆಯನ್ನು ಆತ್ಮೀಯವಾಗಿ ಅಪ್ಪಿಕೊಂಡೆ. ನಂತರ ಆಕೆ ನನ್ನನ್ನು ತಡೆದು ಸ್ಟುಡಿಯೋದಿಂದ ಹೊರಟಳು. ನಂತರ ನನಗೆ ಮೆಸೇಜ್ ಕಳುಹಿಸಿ ನನ್ನ ವರ್ತನೆಯಿಂದ ಬೇಸರವಾಗಿದೆ ಎಂದು ತಿಳಿಸಿದರು. ಅದಕ್ಕೆ ನಾನು ವೈಯಕ್ತಿಕವಾಗಿ ಕ್ಷಮೆ ಕೇಳಿದ್ದೆ. ಈಗ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇನೆ.

ಆದರೆ ಚಿನ್ಮಯಿ ಅವರ ಟ್ವಿಟರ್ ನಲ್ಲಿ ಮಾಡಿರುವ ಆರೋಪಗಳು ಸುಳ್ಳು…
ನಾನು ಪರಭಕ್ಷನೇ? ಖಂಡಿತವಾಗಿಯೂ ಅಲ್ಲ.
ನನ್ನ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಲು ಈ ಗಾಯಕಿ ಅಥವಾ ಬೇರೆ ಗಾಯಕಿಯರನ್ನು ಲೈಂಗಿಕವಾಗಿ ಬಳಕೊಂಡಿದ್ದೀನೇ? ಇಲ್ಲವೇ ಇಲ್ಲ.
ನನ್ನ ಹೆಂಡತಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇನೆ? ಇಲ್ಲ. ನಾವು ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ ಎಂದಿದೆ ಅಷ್ಟೆ.
ನನ್ನ ಹೆಂಡತಿಗೆ ನಾನು ಉತ್ತಮ ಗಂಡನಾಗಿಲ್ಲ.

ನಾನು ಮತ್ತೇ ಆ ಗಾಯಕಿಗೆ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇನೆ. ನನ್ನ ಪತ್ನಿ ಅತ್ಯುತ್ತಮ ಮಹಿಳೆ ಆಕೆಗೂ ಕ್ಷಮೆ ಕೇಳುತ್ತೇನೆ. ಇನ್ನು ನನ್ನ ಸಂಗೀತ ಪ್ರೀತಿಸುವ ಅಭಿಮಾನಿಗಳಿಗೆ ಈ ನನ್ನ ಸಂದೇಶ ಓದಲು ಕಷ್ಟವಾಗಬಹುದು. ಆದರು ಅವರ ಬಳಿಯೂ ಕ್ಷಮೆ ಕೇಳುತ್ತೇನೆ.

#MeToo ಅಭಿಯಾನ ಅತ್ಯುತ್ತಮವಾಗಿದ್ದು ಇದಕ್ಕೆ ನನ್ನ ಬೆಂಬಲವಿದೆ. ನನ್ನ ಪ್ರಕರಣದಲ್ಲಿ ಕಾನೂನು ವಿಚಾರಣೆ ನಡೆಸಿದರೆ ಅದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ.

Leave a Reply