ಸುದೀಪ್ “ಮದಕರಿ ನಾಯಕ” ಪೋಸ್ಟರ್ಸ್ ನೋಡಿದ್ರಾ..?

ಡಿಜಿಟಲ್ ಕನ್ನಡ ಟೀಮ್:

ಅಭಿನಯ ಚಕ್ರವರ್ತಿ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮದಕರಿ ನಾಯಕರ ಕುರಿತು ಸಿನಿಮಾ ಮಾಡೋಕೆ ಮುಂದಾಗಿರೋದು ಗೊತ್ತೇಯಿದೆ. ಕಿಚ್ಚ ಸುದೀಪ್ ಅವ್ರೇ ಈ ಸಿನಿಮಾ‌ ಮಾಡ್ಬೇಕು ಅಂತ ಅಭಿಮಾನಿಗಳು ಪಟ್ಟು ಹಿಡಿದಿರೋದು ಎಲ್ಲರಿಗೂ ಗೊತ್ತು. ಅದಕ್ಕಿಂತ ಮುಖ್ಯವಾಗಿ ನಾನೂ ಮದಕರಿ, ಈ ಸಿನಿಮಾ ಮಾಡಿ ಮಡಿಯುವುದೇ ಲೇಸು..! ಅಂತ ಸುದೀಪ್ ಟ್ಟೀಟ್ ಮಾಡಿರೋದು ದೊಡ್ಡಮಟ್ಟಿಗೆ ಸುದ್ದಿಯಾಗಿದೆ. ಇದ್ರ ಬೆನ್ನಲ್ಲೇ ಫ್ಯಾನ್ ಮೇಡ್ ಸುದೀಪ್ ಮದಕರಿ ನಾಯಕ ಪೋಸ್ಟರ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.

ತಮ್ಮ ನೆಚ್ಚಿನ ನಟ ಮದಕರಿ ನಾಯಕ ಸಿನಿಮಾ ಮಡ್ಬೇಕು ಅಂತ ಕೇಳಿಕೊಳ್ತಿರೋ ಫ್ಯಾನ್ಸ್, ಮದಕರಿ ನಾಯಕನ ಪಾತ್ರದಲ್ಲಿ ಸುದೀಪ್ ಹೇಗಿರ್ತಾರೆ..? ಹೇಗೆ ಕಾಣಬಹುದು ಅಂತ ಕಲ್ಪಿಸಿಕೊಂಡು ಪೋಸ್ಟರ್ಸ್ ಡಿಸೈನದ ಮಾಡಿ ಹರಿ ಬಿಟ್ಟಿದ್ದಾರೆ. ದುರ್ಗದ ಹುಲಿ ಮದಕರಿ ಹೆಸರಿನಲ್ಲಿ ಖಡಕ್ ಲುಕ್ನಲ್ಲಿ ಸುದೀಪ್ ಪೋಸ್ಟರ್ಸ್ ಡಿಸೈನ್ ಮಾಡಿದ್ದಾರೆ.

ಇನ್ನೂ ಮದಕರಿ ನಾಯಕ ಚಿತ್ರಕ್ಕಾಗಿ ಸ್ಕ್ರಿಪ್ಟ್ ವರ್ಕ್ ನಡೀತಿದ್ದು, ಮುಂದಿನ ವರ್ಷ ಸಿನಿಮಾ ಸೆಟ್ಟೇರಲಿದೆ. ಸಿನಿಮಾ ಟೈಟಲ್ ಏನು..? ಯಾರೆಲ್ಲಾ ನಟಿಸ್ತಾರೆ ಅನ್ನೋದ್ರ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಆದ್ರೆ ಅಭಿಮಾನಿಗಳು ತಮ್ಮದೇ ಕಲ್ಪನೆಯಲ್ಲಿ ಗಂಡುಗಲಿ ಮದಕರಿ ನಾಯಕ ಪೋಸ್ಟರ್ಸ್ ಮಾಡಿ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ಸ್ ನೋಡಿ ಕಿಚ್ಚ ಸುದೀಪ್ ಥ್ರಿಲ್ಲಾಗಿದ್ದಾರೆ.

Leave a Reply