ಶಾರುಖ್- ಸಲ್ಲುಗೆ ಲೋಕಲ್ ಸ್ಟಾರ್ ಯಶ್ ಚಾಲೆಂಜ್..!

ಡಿಜಿಟಲ್ ಕನ್ನಡ ಟೀಮ್:

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿರೋದು ಗೊತ್ತೇಯಿದೆ. ಸ್ವತಃ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ಸ್ಪಷ್ಟಪಡಿಸಿದ್ದು, ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಡಿಸೆಂಬರ್ 21ಕ್ಕೆ ಚಿತ್ರ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಪ್ಪಳಿಸ್ತಿದೆ. ವಿಶೇಷ ಅಂದ್ರೆ ಡಿಸೆಂಬರ್ 21ಕ್ಕೆ ಬಾಲಿವುಡ್ನ ಜೀರೋ ಸಿನಿಮಾ ಕೂಡ ತೆರೆಗೆ ಬರ್ತಿದೆ. ಕಿಂಗ್ ಖಾನ್ ಶಾರೂಖ್- ಸಲ್ಮಾನ್ ಖಾನ್ ನಟನೆಯ ಸಿನಿಮಾ ಜೀರೋ.

ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಕನ್ನಡ ಚಿತ್ರರಂಗದಲ್ಲಿ ಹಲವು ಮೊದಲುಗಳಿಗೆ ಸಾಕ್ಷಿ ಆಗ್ತಿದೆ. ಈಗಾಗಲೇ ಬಿಟೌನ್ ಖ್ಯಾತ ನಿರ್ಮಾಪಕರಾದ ಫರಾನ್ ಅಖ್ತರ್, ಅನಿಲ್ ತದಾನಿ ಚಿತ್ರವನ್ನ ವಿಶ್ವದಾದ್ಯಂತ ಬಿಡುಗಡೆ ಮಾಡೋಕೆ ಮುಂದಾಗಿದ್ದಾರೆ. ಹಾಗಾಗಿ ಕೆಜಿಎಫ್ ಬಾಲಿವುಡ್ ಸಿನಿಮಾಗಳ ರೇಂಜ್ನಲ್ಲಿ ತೆರೆಗಪ್ಪಳಿಸಲಿದೆ. ಜೀರೋ ಸಿನಿಮಾಗೆ ಬಾಕ್ಸಾಫೀಸ್ನಲ್ಲಿ ಟಫ್ ಫೈಟ್ ಕೊಡಲಿದೆ.

ಜೀರೋ ಸಿನಿಮಾದಲ್ಲಿ ಶಾರೂಖ್ ಖಾನ್ ಕುಬ್ಜನಾಗಿ ಬಹಳ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ.. ಮತ್ತೊಂದು ವಿಶೇಷ ಅಂದ್ರೆ ಬಾಕ್ಸಾಫೀಸ್ ಸುಲ್ತಾನ್ ಜೀರೋ ಸಿನಿಮಾದಲ್ಲಿ ಗೆಸ್ಟ್ ಅಪ್ಪಿಯರೆನ್ಸ್ ಮಾಡಿದ್ದಾರೆ. ಖಾನ್ ದ್ವಯರ ಸಿನಿಮಾ ಆಗಿರೋದ್ರಿಂದ ಭಾರೀ‌ ನಿರೀಕ್ಷೆ ಮೂಡಿಸಿದೆ. ಇದೀಗ ಬಾಲಿವುಡ್ ಸೂಪರ್ ಸ್ಟಾರ್ಗಳ ಚಿತ್ರಕ್ಕೆ ಲೋಕಲ್ ಸ್ಟಾರ್ ಯಶ್ ಚಾಲೆಂಜ್ ಮಾಡ್ತಿದ್ದಾರೆ. ನಿಜಕ್ಕೂ ಕನ್ನಡ ಚಿತ್ರರಂಗ ಬಹಳ ವರ್ಷಗಳಿಂದ ಕಾಯ್ತಿದ್ದ ಘಳಿಗೆ ಇದು.

Leave a Reply