ಮದಕರಿ ‘ನಾಯಕ’ನಾಗೋಕು ಮುನ್ನ ಬ್ರಿಟಿಷರೆದುರು ತೊಡೆ ತಟ್ಟಿದ ಕಿಚ್ಚ..!

ಡಿಜಿಟಲ್ ಕನ್ನಡ ಟೀಮ್:

ಅಭಿನಯ ಚಕ್ರವರ್ತಿ ಸುದೀಪ್ ದುರ್ಗದ ಪಾಳೇಗಾರ ಮದಕರಿ ನಾಯಕನ ಪಾತ್ರ ಮಾಡೋಕೆ ಬಹಳ ಉತ್ಸುಕರಾಗಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿದ ಮದಕರಿ ನಾಯಕನ ಪರಾಕ್ರಮವನ್ನ ಚಿತ್ರರಸಿಕರ ಮುಂದಿಡಲು ಕಸರತ್ತು ಪ್ರಾರಂಭಿಸಿದ್ದಾರೆ. ಮದರಿ ನಾಯಕ ಚಿತ್ರಕ್ಕೂ ಮೊದ್ಲೆ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಬ್ರಿಟಿಷರ ವಿರುದ್ಧ ಕಾದಾಟಕ್ಕಿಳಿದಿದ್ದಾರೆ ಸುದೀಪ್.

ಸದ್ಯ ಜಾರ್ಜಿಯಾದಲ್ಲಿ ಸೈರಾ ನರಸಿಂಹ ರೆಡ್ಡಿ ಶೂಟಿಂಗ್ ನಡೀತಿದೆ. ಚಿರಂಜೀವಿ, ವಿಜಯ್ ಸೇತುಪತಿ ಸೇರಿದಂತೆ ಇಡೀ ಚಿತ್ರತಂಡ ಅಲ್ಲಿ ಬೀಡು ಬಿಟ್ಟಿದೆ.‌ ಅಲ್ಲಿನ ಸಹಕಲಾವಿದರಲ್ಲಿ ಬಳಸಿಕೊಂಡು ನರಸಿಂಹ ರೆಡ್ಡಿ ಮತ್ತು ಬ್ರಿಟಿಷರ ನಡುವಿನ ಯುದ್ಧದ ಸನ್ನಿವೇಶ ಸೆರೆಹಿಡಿಯಲಾಗ್ತಿದೆ. ನರಸಿಂಹ ರೆಡ್ಡಿಯ ಸ್ನೇಹಿತ ಮತ್ತು ಸಹಾಯಕ ಅವುಕು ರಾಜನ ಪಾತ್ರದಲ್ಲಿ ಕಿಚ್ಚ ನಟಿಸಿದ್ದು, ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಸೈರಾ ಜಾರ್ಜಿಯಾ ಸೆಟ್ನಿಂದ ಒಂದೊಂದೇ ಸ್ಟಿಲ್ ಹೊರ ಬರ್ತಿದೆ ಸುದೀಪ್- ವಿಜಯ್ ಸೇತುಪತಿ ಸೆಲ್ಫಿ ವೈರಲ್ಲಾದ ಬೆನ್ನಲೇ ಕಿಚ್ಚನ ಮತ್ತೊಂದಿಷ್ಟು ಸ್ಟಿಲ್ಸ್ ರಿವೀಲ್ ಆಗಿದೆ. ಕತ್ತಿ ಹಿಡಿದು, ಮೀಸೆ ತಿರುವಿರೋ ಅವುಕು ರಾಜ ಕಿಚ್ಚನ ಖಡಕ್ ಸ್ಟಿಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿವೆ.

Leave a Reply