ಬಿಗ್ ಬಿಯನ್ನು ಕಾಡಲಿದೆಯಾ ಮಿ ಟೂ ಆರೋಪ! ಸಪ್ನಾ ಭವ್ನನಿ ಟ್ವಿಟರ್ ನಲ್ಲಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಲೈಂಗಿಕ ದೌರ್ಜನ್ಯ ವಿರುದ್ಧ ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ ಮಿ ಟೂ ಅಭಿಯಾನ ಈಗಾಗಲೇ ಅಲೋಕ್ ನಾಥ್, ವಿಕಾಸ್ ಬಾಲ್, ನಾನಾ ಪಾಟೇಕರ್, ಸಾಜಿದ್ ಖಾನ್, ಅನು ಮಲಿಕ್, ಕೈಲಾಶ್ ಖೇರ್ ಸೇರಿದಂತೆ ಮನರಂಜನಾ ಕ್ಷೇತ್ರದ ಘಟಾನುಘಟಿಗಳ ಹೆಸರಿಗೆ ಮಸಿ ಬಳೆದಿದೆ. ಈಗ ಬಿಗ್ ಬಿ ಎಂದೇ ಕರೆಸಿಕೊಳ್ಳುವ ಅಮಿತಾಬ್ ಬಚ್ಚನ್ ಅವರನ್ನು ಕಾಡುವ ಸೂಚನೆಗಳು ವ್ಯಕ್ತವಾಗಿವೆ.

ಇದಕ್ಕೆ ಕಾರಣ ಖ್ಯಾತ ಕೇಶ ವಿನ್ಯಾಸಕಿ ಸಪ್ನಾ ಭವ್ನನಿ ಅವರ್ ಟ್ವೀಟರ್ ಸಂದೇಶ. ಹೌದು, ಮಿ ಟೂ ಅಭಿಯಾನಕ್ಕೆ ಅಮಿತಾಬ್ ಬಚ್ಚನ್ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಸಪ್ನಾ, ‘ಇದೊಂದು ದೊಡ್ಡ ಸುಳ್ಳು. ಸರ್ ಈಗಾಗಲೇ ಪಿಂಕ್ ಸಿನಿಮಾ ಬಿಡುಗಡೆಯಾಯಿತು ಹಾಗೇ ಹೋಯ್ತು. ಮತ್ತು ಸಾಮಾಜಿಕ ಕಳಕಳಿಯ ಹೋರಾಟಗಾರನಾಗಿ ಗುರುತಿಸಿಕೊಂಡಿರುವ ನಿಮ್ಮ ಮುಖವಾಡ ಶೀಘ್ರವೇ ಕಳಚಿ ಬೀಳಲಿದೆ. ಅತೀ ಶೀಘ್ರದಲ್ಲಿಯೇ ನಿಮ್ಮ ಕುರಿತ ಸತ್ಯ ಬಹಿರಂಗವಾಗಲಿದೆ’ ಎಂದು ತಿಳಿಸಿದ್ದಾರೆ.

‘ಬಚ್ಚನ್ ಅವರ ಅಸಭ್ಯ ವರ್ತನೆ ಕುರಿತು ನಾನು(ಸಪ್ನಾ) ವೈಯಕ್ತಿವಾಗಿ ಹಲವು ವಿಷಯಗಳನ್ನು ಕೇಳಿದ್ದೇನೆ. ಹೀಗಾಗಿ ಧೈರ್ಯವಂತ ಮಹಿಳೆಯರು ಹೊರಗೆ ಬಂದು ಸತ್ಯವನ್ನು ಬಹಿರಂಗ ಪಡಿಸಬೇಕು’ ಎಂದು ಸಪ್ನಾ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

Leave a Reply