#MeToo ಅಭಿಯಾನ: ಖುಷ್ಬು ಬಿಚ್ಚಿಟ್ರು ಕ್ರೇಜಿ ಸ್ಟಾರ್ ನಿಜ ಸ್ವರೂಪ..!

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲ ದೇಶದಲ್ಲೇ ಮೀ ಟೂ ಅಭಿಯಾನ ಬಿರುಗಾಳಿ ಎಬ್ಬಿಸಿದೆ. ದೊಡ್ಡ ಫಿಲ್ಮ್ ಮೇಕರ್ಸ್, ಸ್ಟಾರ್ಸ್, ಪೊಲಿಟಿಷಿಯನ್ಸ್ ಮೀ ಟೂ ಪದ ಕೇಳಿದ್ರೆ ಬೆಚ್ಚಿ ಬೀಳುವಂತಾಗಿದೆ. ಬಾಲಿವುಡ್ ಅಂಗಳದಲ್ಲಿ ನಟಿ‌ ತನುಶ್ರೀ ದತ್ತಾ ಶುರು ಮಾಡಿದ ಈ ಸೌತ್ ಸಿನಿದುನಿಯಾದಲ್ಲೂ ಸಂಚಲನ‌ ಸೃಷ್ಟಿಸಿದೆ. ಕಾಲಿವುಡ್, ಟಾಲಿವುಡ್ನಲ್ಲೂ ಇದು ಚರ್ಚೆ ಹುಟ್ಟಾಕಿದ್ದು, ಸ್ಯಾಂಡಲ್ವುಡ್ ಅಂಗಳಕ್ಕೂ ಎಂಟ್ರಿ ಕೊಟ್ಟಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ನಟಿ ಖುಷ್ಬು ಸುಂದರ್ ಮಾಡಿದ ಟ್ವೀಟ್, ವಿಚಿತ್ರ ತಿರುವು ಪಡ್ಕೊಂಡು ಚರ್ಚೆ ಹುಟ್ಟಾಕಿದೆ. ಅಚ್ಚರಿ ಏನಂದ್ರೆ, ಈ ಚರ್ಚೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹೆಸರು ಸೇರ್ಕೊಂಡಿದೆ.

ತಪ್ಪನ್ನ ಧೈರ್ಯವಾಗಿ ಪ್ರಶ್ನಿಸೋ ನಟಿ ಖುಷ್ಬು ಸುಂದರ್ ಸಿಕ್ಕಾಪಟ್ಟೆ ಬೋಲ್ಡ್. ರಣಧೀರ, ಅಂಜದ ಗಂಡು ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಮೀಟೂ ಬಗ್ಗೆ ಟ್ವೀಟ್ ಮಾಡಿದ ಖುಷ್ಬು, ‘ನನ್ನ ನಲವತ್ತು ವರ್ಷಗಳ ಸಿನಿಜೀವನದಲ್ಲಿ ಅಂತಹ ಸಂದರ್ಭ ಎದುರಾಗಲೇಯಿಲ್ಲ’ ಅಂದ್ರು. ಕೂಡಲೇ ಒಂದಷ್ಟು ಮಂದಿ ಅವರ ಟ್ವೀಟ್ ಬೆಂಬಲಿಸಿ ಪ್ರತಿಕ್ರಿಯಿಸಿದ್ರು. ಆದ್ರೆ ಲಕ್ಷ್ಮೀ ಎಂಬಾಕೆ ಮಾತ್ರ ಕನ್ನಡದ ನಟ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಹೆಸರು ಪ್ರಸ್ತಾಪಿಸಿ, ಖುಷ್ಬು ಅವರನ್ನ ಕಿಚಾಯಿಸಿದ್ರು. ‘ನೀವು ಸುಳ್ಳು ಹೇಳ್ತಿದ್ದೀರಾ. ರವಿಚಂದ್ರನ್ ಅವ್ರ ಜೊತೆ ನಟಿಸಿದ್ದೀರಾ ಅವರು ಅಂದಿನ ಕಾಲದಲ್ಲಿ ಹೇಗಿದ್ರು, ಅವರ ರಸಿಕತೆ ಎಂಥಾದ್ದು ಅಂತ ಎಲ್ಲರಿಗೂ ಗೊತ್ತು’ ಅನ್ನೋ ಅರ್ಥದಲ್ಲಿ ಕುಹಕವಾಡಿದ್ರು.

ಕೂಡಲೇ ಅದಕ್ಕೆ ಪ್ರತಿಕ್ರಿಯಿಸಿದ ಖುಷ್ಬು, ಆಕೆಗೆ ಫುಲ್ ಕ್ಲಾಸ್ ತಗೊಂಡ್ರು. ‘ರವಿಚಂದ್ರನ್ ಎಂತಹ ವ್ಯಕ್ತಿ ಅನ್ನೋದು ಗೊತ್ತಿಲ್ಲದೇ ಪಬ್ಲಿಸಿಟಿಗಾಗಿ ಏನೇನೊ‌ ಮಾತಾಡಬೇಡ. ನೀವು ಸಂತ್ರಸ್ತೆ ಅಲ್ಲ, ನಿಮ್ಮ ಬಳಿ ಯಾವುದೇ ಸಾಕ್ಷಿ ಇಲ್ಲದೇ ಈ ರೀತಿ ಮಾತಾಡೋದು ತಪ್ಪು. ರವಿಚಂದ್ರನ್ ಎಂತಹವರು ಅಂತ ನನಗೆ ಗೊತ್ತು. ಇಂದು ನಮ್ಮ ತಾಯಿ ಬದುಕಿದ್ರೆ, ಅದಕ್ಕೆ ಅವರೇ ಕಾರಣ. ರವಿಚಂದ್ರನ್, ಅವರ ತಂದೆ  ಎನ್. ವೀರಾಸ್ವಾಮಿ ಬಗ್ಗೆ ನಿನಗೆ ಗೊತ್ತಾ..? ರವಿಚಂದ್ರನ್ ಬಹಳ ಒಳ್ಳೆ ಗುಣದವರು. ಎಲ್ಲರಿಗೂ ಒಳ್ಳೆ ಸ್ನೇಹಿತರಾಗಿದ್ರು. ಅಂತಹವರ  ಕುರಿತು ಬಾಯಿಗೆ ಬಂದಂತೆ ಮಾತಾಡಬೇಡ’ ಅಂತ ಖುಷ್ಬು ಗರಂ‌‌ ಆದ್ರು. ಒಂದಷ್ಟು ಹೊತ್ತು ಟ್ವೀಟ್ ಫೈಟ್ ನೆಟ್ಟಿಗರ ಗಮನ ಸೆಳೆಯಿತು.

ಅದೆಲ್ಲಾ ಏನೇ ಇದ್ರೂ ಕ್ರೇಜಿ ಸ್ಟಾರ್ ರವಿಚಂದ್ರನ್ ಗುಣ ಏನು ಅಂತ ಇಡೀ ಭಾರತೀಯ ಚಿತ್ರರಂಗಕ್ಕೆ ಗೊತ್ತು.‌ ಅವರ ಸಿನಿಮಾಗಳು, ಪಾತ್ರಗಳು, ಸಿನಿಮಾ ಮೇಕಿಂಗ್ ಸ್ಟೈಲ್, ಸಿನಿಮಾ ಫ್ಯಾಷನ್, ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಯನ್ನ ಯಾರೂ ಮರೆಯೋದಿಲ್ಲ.

Leave a Reply