ಶ್ರೀರಾಮುಲು ಜಡ್ಜ್ ಆಗಿದ್ದು ಯಾವಾಗ?: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

‘ಅಕ್ಕಾವ್ರನ್ನ (ಶಾಂತಾ) ಪಾರ್ಲಿಮೆಂಟ್ ಗೆ ಕಳಿಸಲಿ, ನನ್ನನ್ನು ಜೈಲಿಗೆ ಕಳಿಸಲಿ. ಅವರ ತಾಕತ್ತು ಪ್ರದರ್ಶಿಸಲಿ. ಅವರು ಚೆನ್ನಾಗಿರಲಿ. ಶ್ರೀರಾಮುಲು ಯಾವಾಗ ಜಡ್ಜ್ ಆಗಿ ಅಪಾಯಿಂಟ್ ಆಗಿದ್ದಾರೋ ಅದೂ ಗೊತ್ತಿಲ್ಲ…’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ನಾಯಕ ಶ್ರೀರಾಮುಲು ವಿರುದ್ಧ ಕಿಡಿ ಕಾರಿದ್ದಾರೆ.

ಗದಗದ ಲಕ್ಷ್ಮೇಶ್ವರದಲ್ಲಿ ಮಾತನಾಡಿರುವ ಡಿಕೆ ಶಿವಕುಮಾರ್ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದು ಹೀಗೆ…

ಬಳ್ಳಾರಿ ಬಿಜೆಪಿ ಅಭ್ಯರ್ಥಿ ಶಾಂತ ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿ. ನನ್ನನ್ನು ಜೈಲಿಗೆ ಕಳಿಸಿ ಅವರ ತಾಕತ್ತು ಪ್ರದರ್ಶಿಸಲಿ. ಜೈಲಿಗೆ ಕಳಿಸೋದು ಯಾರು ಜಡ್ಜ್ ಅಲ್ವಾ? ಶ್ರೀರಾಮುಲು ಯಾವಾಗ ಜಡ್ಜ್ ಆಗಿ ಅಪಾಯಿಂಟ್ ಆಗಿದ್ದಾರೋ ಅದೂ ಗೊತ್ತಿಲ್ಲ. ರಾಮುಲು ಹೇಳಿಕೆಗೆ ಯಡಿಯೂರಪ್ಪನವರು ಏನು ಉತ್ತರ ಕೊಡುತ್ತಾರಾರೋ ಗೊತ್ತಿಲ್ಲ. ಒಟ್ಟಿನಲ್ಲಿ ರಾಮುಲು ಜಡ್ಜ್ ಆಗೀರೋದಿಕ್ಕೆ ಕಂಗ್ರಾಟ್ಸ್.

ಅವರ ಹೇಳಿಕೆಯಿಂದ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಅವರ ಕೈಯಲ್ಲಿದೆ ಅಂತ ಆಯ್ತಲ್ಲಾ? ನನ್ನ ಜೈಲಿಗೆ ಕಳಿಸೋ ವಿಚಾರ ಮಾತಾಡ್ತಾರೆ ಅಂತಾದ್ರೆ ಅವರಿಗೆ ಆ ಅಧಿಕಾರ ಸಿಕ್ಕಿರಬೇಕಲ್ಲ?!

ಅವರು ಸಂಸದರಾಗಿದ್ದವರು, ಶಾಸಕರಾಗಿದ್ದವರು. ಈ ಮಾತಾಡಬೇಕಾದ್ರೆ ಬಹುಶಃ ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೀತಾ ಇದೆ ಅಂತಾಯ್ತು. ಈ ಹಿಂದೆ 10 ವರ್ಷ ಅಣ್ಣ ಅಕ್ಕ ಇಬ್ರೂ ಪಾರ್ಲಿಮೆಂಟ್ ಸದಸ್ಯರಾಗಿದ್ರು. ಆಗ ಅವರು ಜಿಲ್ಲೆ ಮತ್ತು ದೇಶದ ಒಳಿತಿಗೆ ಎಷ್ಟು ಪ್ರಶ್ನೆ ಕೇಳಿದ್ದಾರೆ? ಅದರ ಕುರಿತು ಒಂದು ದಾಖಲೆ ಬಿಡುಗಡೆ ಮಾಡಲಿ. ಶ್ರೀರಾಮುಲು ಅಣ್ಣಾವ್ರಿಗೆ ವಿಶ್ವಾಸ ಇದ್ದಿದ್ರೆ, ಜನರಿಗೆ ಕೊಡುಗೆ ಕೊಟ್ಟಿದ್ದೀನಿ ಅಂತಿದ್ರೆ, ಅವರು ಯಾಕೆ ಬಳ್ಳಾರಿ ಗ್ರಾಮೀಣ ಕ್ಷೇತ್ರ ಬಿಟ್ಟು ಓಡಿ ಹೋಗಬೇಕಿತ್ತು? ಅಲ್ಲೇ ಸ್ಫರ್ಧಿಸಬಹುದಿತ್ತಲ್ಲಾ?

ಬೆಳೆಸಿದ ಬಳ್ಳಾರಿ ಜಿಲ್ಲೆಯಿಂದ ಪಲಾಯನ ಮಾಡಿ ಈಗ ಬಾಯಿಗೆ ಬಂದಂತೆ ಮಾತನಾಡುತ್ತಿರೋ ರಾಮುಲು ಬಹಳ ದೊಡ್ಡವರು. ಅವರಿಗೆ ನನ್ನ ನಮಸ್ಕಾರ.’

Leave a Reply