ಮಹಿಳೆಯರಿಗೆ ಪ್ರವೇಶ; ಶಬರಿಮಲೈ ಸಮೀಪ ಹಿಂಸಾಚಾರ, ಲಾಠಿಚಾರ್ಜ್!

ಡಿಜಿಟಲ್ ಕನ್ನಡ ಟೀಮ್:

ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳಾ ಭಕ್ತರ ಪ್ರವೇಶಕ್ಕೆ ಪ್ರತಿಭಟನಾಕಾರರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಶಬರಿಮಲೈನ ನೀಲಕ್ಕಲ್ನಲ್ಲಿ ಹಿಂಸಾಚಾರ ಆರಂಭವಾಗಿದೆ.

ಶಬರಿಮಲೈ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಬುಧವಾರ ಸಂಜೆ 5 ಗಂಟೆಯಿಂದ ಪ್ರವೇಶಾವಕಾಶ ನಿಗದಿಗೊಳಿಸಲಾಗಿದ್ದು, ಅದಕ್ಕೆ ಒಂದು ಗಂಟೆ ಮೊದಲೇ ನೀಲಕಲ್ನಲ್ಲಿ ಪ್ರತಿಭಟನಾಕಾರರು ಇದ್ದಕ್ಕಿದ್ದಂತೆ ಪೊಲೀಸ್ ಶಿಬಿರದ ಮೇಲೆ ಕಲ್ಲುತೂರಾಟ ನಡೆಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಲಾಠಿಜಾರ್ಜ್ ಆರಂಭಿಸಿದ್ದರಿಂದ ಪ್ರತಿಭಟನಾಕಾರರು ದಿಕ್ಕಾಪಾಲಾಗಿ ಓಡಿದರು. ಪೊಲೀಸರು ಅವರನ್ನು ಆಟ್ಟಿಸಿಕೊಂಡು ಹೋಗಿ ಬಡಿದರು.

ಇದರಿಂದ ದೇಗುಲದ ಸುತ್ತಮುತ್ತ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಈ ಮಧ್ಯೆ, ಮಹಿಳಾ ಭಕ್ತಾಧಿಗಳು ದೇಗುಲದತ್ತ ತೆರಳುತ್ತಿದ್ದಾರೆ. ಅವರಿಗೆ ಭಯ ಹುಟ್ಟಿಸಲೆಂದೇ ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿದಿದ್ದಾರೆ.ಸ್ಥಳದಲ್ಲಿ ಪೊಲೀಸ್ ಪಹರೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

Leave a Reply