ಶಬರಿಮಲೈ ದೇಗುಲ ಮಹಿಳೆಯರ ಪ್ರವೇಶಕ್ಕೆ ಆರೆಸ್ಸೆಸ್ ಆಕ್ಷೇಪ

ಡಿಜಿಟಲ್ ಕನ್ನಡ ಟೀಮ್

ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಆರೆಸ್ಸೆಸ್ ಆಕ್ಷೇಪ ವ್ಯಕ್ತಪಡಿಸಿದೆ.

ಮಹಿಳೆಯರ ಪ್ರವೇಶ ನಿಷೇಧದ ಹಿಂದೆ ತಲೆತಲಾಂತರಗಳ ಹಿಂದೂ ಧರ್ಮದ ನಂಬಿಕೆ ಮತ್ತು ಭಾವನೆ ಅಡಕವಾಗಿದೆ. ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮಹಾರಾಷ್ಟ್ರದ ನಾಗ್ಪುರದಲ್ಲಿ ಗುರುವಾರ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಯಾರಿಂದಲೂ ಅಭ್ಯಂತರವಿಲ್ಲ. ರಾಮ ಮರ್ಯಾದಾ ಪುರುಷೋತ್ತಮ. ಆತನ ದೇಗುಲ ಆಗಬೇಕೆಂಬಂದು ನಾಡಿನ ಜನರ ಭಾವನೆ. ಅವರ ಭಾವನೆಗಳಿಗೆ ಬೆಲೆ ಕೊಡಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

Leave a Reply