ಮೈಸೂರು ಜಂಬೂಸವಾರಿಗೆ ಸೂತಕ..!?

ಡಿಜಿಟಲ್ ಕನ್ನಡ ಟೀಮ್:

ಮೈಸೂರು ಯದುವಂಶದ ರಾಜಮಾತೆ ಪ್ರಮೋದಾದೇವಿ ಅವರಿಗೆ ಮಾತೃವಿಯೋಗವಾಗಿದ್ದು, ದಸರಾ ಜಂಬೂಸವಾರಿಗೆ ಸೂತಕದ ಛಾಯೆ ಆವರಿಸಲಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ.

98 ವರ್ಷದ ಪುಟ್ಟರತ್ನಚಿನ್ನಮ್ಮಣ್ಣಿ ವಯೋಸಹಜ ಅನಾರೋಗ್ಯದಿಂದ ಬಲಳುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು.‌ ಚಿಕಿತ್ಸೆ‌ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇಂದು ಅರಮನೆಯಲ್ಲಿ ವಿಜಯದಶಮಿ ಕೊನೇ ದಿನದ ಕಾರ್ಯಕ್ರಮಗಳು ನಡೆಯುತ್ತಿದ್ದು, ಸಾಂಪ್ರದಾಯಿಕ ಆಚರಣೆಗಳ ಮೇಲೆ ಕರಿನೆರಳು ಆವರಿಸುವ ಸಾಧ್ಯತೆ ದಟ್ಟವಾಗಿದೆ.

ಆದ್ರೆ ಧರ್ಮಶಾಸ್ತ್ರ ಪಂಡಿತರ ಪ್ರಕಾರ ಮೈಸೂರು ದಸರಾ ಜಂಬೂಸವಾರಿಗೂ ಪ್ರಮೋದಾದೇವಿ ಅವರ ಮಾತೃವಿಯೋಗಕ್ಕೂ‌ ಯಾವುದೇ ಸಂಬಂಧವಿಲ್ಲ. ಹಾಗಾಗಿ ಯಾವುದೇ ಪ್ರಭಾವ ಬೀರುವುದಿಲ್ಲ, ಸೂತಕ ಆವರಿಸುವುದಿಲ್ಲ ಎಂದಿದ್ದಾರೆ. ಜೊತೆಗೆ ಅರಮನೆಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳು ಬನ್ನಿ ಕತ್ತರಿಸುವ ಮೂಲಕ ಮುಕ್ತಾಯವಾಗಿದ್ದು, ಇಂದಿನ ಜಂಬೂಸವಾರಿ ಕೇವಲ ಸರ್ಕಾರದ ಕಾರ್ಯಕ್ರಮ ಮಾತ್ರ. ಹೀಗಾಗಿ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಒಂದು ವೇಳೆ ಬದಲಾವಣೆ ಅನ್ನೋದು ಏನಾದ್ರೂ ಆದ್ರೆ, ಜಂಬೂಸವಾರಿ ಹೊರಡುವ ವೇಳೆ ರಾಜಮಾತೆ ಸೇರಿದಂತೆ ಇಡೀ ಕುಟುಂಬ ಸಂಭ್ರಮದಿಂದ ಹಾಜರು ಇರುತ್ತಿತ್ತು. ಈ ಬಾರಿ ಕುಟುಂಬಸ್ಥರ ನಿಧನದಿಂದ ಅವರು ಪಾಲ್ಗೊಳ್ಳದೇ ಇರಬಹುದು ಅಷ್ಟೆ.

Leave a Reply