ದಿ ವಿಲನ್ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತ..?

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ದಿ ವಿಲನ್ ಪ್ರಪಂಚದಾದ್ಯಂತ ತೆರೆಗಪ್ಪಳಿಸಿ ಬಾಕ್ಸಾಫೀಸ್ ಶೇಕ್ ಮಾಡಿದೆ. ದಿ ವಿಲನ್ ಫಸ್ಟ್ ಡೇ ಕಲೆಕ್ಷನ್ ಎಲ್ಲರ ಹುಬ್ಬೇರಿಸಿದೆ.‌‌ ಕನ್ನಡ ಸಿನಿಮಾವೊಂದು ಮೊದಲ ಇಷ್ಟು ಕೋಟಿ ಬಾಚಬಹುದಾ ಅನ್ನೋ ಪ್ರಶ್ನೆ ಹುಟ್ಟಾಕಿದೆ.‌ ಪ್ರೇಮ್ ಟೇಕಿಂಗ್, ಶಿವಣ್ಣ – ಸುದೀಪ್ ಜುಗಲ್ಬಂದಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮಿಶ್ರಪ್ರತಿಕ್ರಿಯಡ ನಡುವೆಯೂ ಚಿತ್ರ 20.5 ಕೋಟಿ ದೋಚಿದೆ.

ವಿಶ್ವದಾದ್ಯಂತ 600 ಸ್ಕ್ರೀನ್ ಮೇಲೆ‌ ವಿಲನ್ಸ್ ಅಬ್ಬರ ಶುರುವಾಗಿದೆ. ನಿರ್ದೇಶಕ ಪ್ರೇಮ್ ಹೇಳುವಂತೆ ಚಿತ್ರ ಫಸ್ಟ್ 20 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಟಿಕೆಟ್ ದರ ಹೆಚ್ಚಿಸಿದ್ದು, ಕೆಲವೆಡೆ 5 ಶೋಗಳನ್ನ ಹಾಕಿದ್ದು, ದಿ ವಿಲನ್ ಗಳಿಕೆಗೆ ಪ್ಲಸ್ ಆಗಿದೆ.

ದಿ ವಿಲನ್ ಸಿನಿಮಾ‌ ಅಬ್ಬರ ನೋಡ್ತಿದ್ರೆ, ಮೊದಲ ವಾರಾಂತ್ಯಕ್ಕೆ‌ 50 ಕೋಟಿ ಕೊಳ್ಳೆ ಹೊಡೆಯೋ ಸುಳಿವು ಸಿಕ್ಕಿದೆ. ದಸರಾ ರಜೆ ಸಿನಿಮಾ ಕಲೆಕ್ಷನ್ ಹೆಚ್ಚಿಸೋದ್ರಲ್ಲಿ ಸಂದೇಹವಿಲ್ಲ. ಮೊದಲ ‌ದಿನ‌ 20 ಕೋಟಿ ಬಾಚಿ ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ‌‌ ಮಾಡಿರೋ ದಿ ವಿಲನ್, ಮುಂದೆ ಏನೆಲ್ಲಾ ದಾಖಲೆ ಬರೆಯುತ್ತೆ ಕಾದು ನೋಡ್ಬೇಕು.

Leave a Reply