ಮೋದಿಗೆ ಸಿಕ್ತು ಪ್ರತಿಷ್ಠಿತ ಸಿಯೋಲ್‌ ಶಾಂತಿ ಪ್ರಶಸ್ತಿ!

ಡಿಜಿಟಲ್ ಕನ್ನಡ ಟೀಮ್:

ಜಾಗತಿಕ ಶಾಂತಿ ಸ್ಥಾಪನೆ, ರಾಜತಾಂತ್ರಿಕ ನೀತಿ, ವಿಶ್ವದ ಹಲವು ದೇಶಗಳ ಜತೆಗೆ ಸಂಬಂಧ ಸುಧಾರಣೆ, ಜಾಗತಿಕ ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ಮುಂದಾಳತ್ವ ವಹಿಸಿದ ಭಾರತ ಪ್ರಧಾನಿ ನರೇಂದ್ರ ಮೋದಿ ಅವರಗೆ ಪ್ರತಿಷ್ಠಿತ ಸಿಯೋಲ್‌ ಶಾಂತಿ ಪ್ರಶಸ್ತಿ ದೊರೆತಿದೆ. ಅಲ್ಲದೆ ಈ ಪ್ರಶಸ್ತಿಗೆ ಭಾಜನರಾದ 14ನೇ ಜಾಗತಿಕ ನಾಯಕರಾಗಿದ್ದಾರೆ.

ಸಿಯೋಲ್‌ನ ಜಂಗ್‌-ಗು ನಲ್ಲಿ ಸಿಯೋಲ್ ಶಾಂತಿ ಪ್ರಶಸ್ತಿ ಸಾಂಸ್ಕೃತಿಕ ಪ್ರತಿಷ್ಠಾನ (ಸಿಯೋಲ್ ಪೀಸ್‌ ಪ್ರೈಜ್‌ ಕಲ್ಚರಲ್ ಫೌಂಡೇಶನ್‌) ಈ ಪ್ರಶಸ್ತಿ ಆಯ್ಕೆಗಾಗಿ ಕಳೆದ ಗುರುವಾರ ಅಂತಿಮ ಸಭೆ ನಡೆಸಿತ್ತು. ಈ ಸಭೆಯಲ್ಲಿ ಈ ಪ್ರಶಸ್ತಿಗೆ ಮೋದಿ ಅವರೇ ಸೂಕ್ತ ಎಂದು ನಿರ್ಧರಿಸಲಾಗಿತ್ತಾದರೂ ಸಂಸ್ಥೆಯ ಅಧ್ಯಕ್ಷ ಕ್ವೋನ್ ಇ-ಹ್ಯೋಕ್ ಈ ಪ್ರಶಸ್ತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಆಯ್ಕೆಯಾಗಿದ್ದಾರೆ ಎಂದು ಬುಧವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಆಯ್ಕೆ ಸಮಿತಿ ಅಧ್ಯಕ್ಷ ಚೋ ಚಂಗ್‌ ಹೋ ನೇತೃತ್ವದ 12 ಸದಸ್ಯರ ತಂಡವು ದೇಶಗಳ ಮುಖ್ಯಸ್ಥರು, ರಾಜಕಾರಣಿಗಳು, ಧಾರ್ಮಿಕ ಮುಖಂಡರು, ವಿದ್ವಾಂಸರು, ಪತ್ರಕರ್ತರು, ಸಾಂಸ್ಕೃತಿಕ ವ್ಯಕ್ತಿಗಳು, ಕಲಾವಿದರು, ಕ್ರೀಡಾಪಟುಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಹಾಲಿ ಮತ್ತು ಮಾಜಿ ಮುಖ್ಯಸ್ಥರು ಸೇರಿದಂತೆ ಜಗತ್ತಿನ 100 ಮಂದಿ ಅಭ್ಯರ್ಥಿಗಳ ಪಟ್ಟಿಯಿಂದ ಸಮಗ್ರ ಅಧ್ಯಯನ ನಡೆಸಿತ್ತು.

ಈ ವೇಳೆ ಮೋದಿ ನೇತೃತ್ವದ ಸರ್ಕಾರದ ನಿರ್ಧಾರಗಳನ್ನು ಹೊಗಳಿದ ಸಮಿತಿ,
ನೋಟು ಅಮಾನ್ಯಾ, ಗುರಿ ನಿರ್ದಿಷ್ಟ ದಾಳಿ, ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಶ್ಲಾಘಿಸಿದೆ.

Leave a Reply