ಮೀಟೂ ಪ್ರಕರಣ: ಪಟ್ಟು ಬಿಡದ ಸರ್ಜಾ- ಶೃತಿ, ಅಂಬಿ ಸಂಧಾನ ವಿಫಲ

ಡಿಜಿಟಲ್ ಕನ್ನಡ ಟೀಮ್:

ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿರುವ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಗುರುವಾರ ಕರೆಯಲಾಗಿದ್ದ ಸಂಧಾನ ಸಭೆ ವಿಫಲವಾಗಿದೆ. ತಮ್ಮ ವಿರುದ್ಧ ಆರೋಪ ಮಾಡಿರುವುದಕ್ಕೆ ಕ್ಷಮೆ ಕೇಳಬೇಕು ಎಂದು ಅರ್ಜುನ್ ಸರ್ಜಾ ಪಟ್ಟು ಹಿಡಿದರೆ, ತಾನು ಯಾವುದೇ ತಪ್ಪು ಮಾಡಿಲ್ಲ ಕ್ಷಮೆ ಏಕೆ ಕೇಳಬೇಕು ಎಂದು ಶ್ರುತಿ ಹರಿಹರ ತಮ್ಮ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ. ಹೀಗಾಗಿ ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

ಗುರುವಾರ ಸಂಜೆ ನಡೆದ ಸಂಧಾನ ಸಭೆಯ ನಟ ಅಂಬರೀಶ್ ಅವರು ಇಬ್ಬರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು ಇಬ್ಬರ ವಾದವನ್ನು ಆಲಿಸಿದರು. ನಂತರ ಈ ಪ್ರಕರಣವನ್ನು ಇಲ್ಲಿಗೆ ಕೈಬಿಟ್ಟು ರಾಜಿಯಾಗಲು ಸಲಹೆ ನೀಡಿದರು. ಆದರೆ ಶ್ರುತಿ ಹರಿಹರನ್ ಕ್ಷಮೆ ಕೇಳಿದ ಹೊರತು ರಾಜಿಗೆ ಮುಂದಾಗುವುದಿಲ್ಲ ಎಂದು ಅರ್ಜುನ್ ಸರ್ಜಾ ತಮ್ಮ ನಿರ್ಧಾರವನ್ನು ತಿಳಿಸಿದರು ಶೃತಿ ಹರಿಹರನ್ ಕೂಡ ಕ್ಷಮೆ ಕೇಳಲು ನಿರಾಕರಿಸಿದರು.

ಸಂಧಾನ ಸಭೆ ನಂತರ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಅವರ ಹೇಳಿಕೆಗಳು ಹೀಗಿವೆ…

‘ಫಿಲಂ ಚೇಂಬರ್ ಸದಸ್ಯರ ಮೇಲೆ ಕಳೆದ 35ರಿಂದ 38 ವರ್ಷಗಳಿಂದ ನಾನು ಅಪಾರ ಗೌರವವನ್ನು ಹೊಂದಿದ್ದೇನೆ ಇಂದು ಅವರು ನನಗೆ ಕರೆ ನೀಡಿದರು ಹೀಗಾಗಿ ಬಂದಿದ್ದೇನೆ. ನನಗೆ ನೋವು ಆಗಿದ್ದರೆ ನಾನು ಸುಮ್ಮನಿರುತ್ತಿದ್ದೆ. ಆದರೆ ನನ್ನ ಮೇಲಿನ ಆರೋಪದ ಮೂಲಕ ನನ್ನನ್ನು ನಂಬಿ ದವರಿಗೆ ಕುಟುಂಬ ಸದಸ್ಯರಿಗೆ ಕರ್ನಾಟಕ ತಮಿಳುನಾಡು ಆಂಧ್ರಪ್ರದೇಶ ಕೇರಳ ರಾಜ್ಯಗಳ ಅಭಿಮಾನಿಗಳಿಗೆ ನೋವು ಉಂಟಾಗಿದೆ. ಹೀಗಾಗಿ ನಾನು ನ್ಯಾಯಾಲಯದ ಮೊರೆ ಹೋಗಿದ್ದೇನೆ. ನನ್ನ ತೇಜೋವಧೆಗೆ ಕೆಲವರು ಪ್ರಯತ್ನಿಸುತ್ತಿದ್ದಾರೆ. ಅದು ಯಾರು ಎಂಬುದು ಶೀಘ್ರದಲ್ಲೇ ನಿಮಗೆ ತಿಳಿಯಲಿದೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಮಾಧ್ಯಮಗಳ ಮುಂದೆ ಹೆಚ್ಚಾಗಿ ಏನು ಹೇಳಬಾರದು ಎಂದು ಹಿರಿಯರು ಸಲಹೆ ನೀಡಿದ್ದಾರೆ. ಹೀಗಾಗಿ ಇಲ್ಲಿ ನಾನು ಹೆಚ್ಚಾಗಿ ಮಾತನಾಡುವುದಿಲ್ಲ. ನನ್ನ ಮೇಲಿನ ಆರೋಪಕ್ಕೆ ಕ್ಷಮೆ ಕೇಳದಿದ್ದರೆ ಚಂದನ ಎಂಬ ಪದಕ್ಕೆ ಆಸ್ಪದವೇ ಇರುವುದಿಲ್ಲ.’
– ಅರ್ಜುನ್ ಸರ್ಜಾ

‘ನಾನು ಮಾಡಿರುವ ಆರೋಪಗಳಿಗೆ ಬದ್ಧನಾಗಿದ್ದೇನೆ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದಾರೆ ನಾನು ಕೂಡ ಕೋರ್ಟ್ ನಲ್ಲಿಯೇ ನನ್ನ ಬಳಿ ಇರುವ ಸಾಕ್ಷಾಧಾರಗಳನ್ನು ಸಲ್ಲಿಸುತ್ತೇನೆ.’
– ಶೃತಿ ಹರಿಹರನ್

ಮಾನನಷ್ಟ ಮೊಕದ್ದಮೆ ದಾಖಲು!

ಗುರುವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿದ್ಯಮಾನಗಳು ನಡೆದಿದ್ದು, ನಟಿ ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಅವರು 5 ಕೋಟಿ ಬೇಡಿಕೆ ಇಟ್ಟು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಈ ಮಧ್ಯೆ ಶೃತಿ ಹರಿಹರನ್ ಅವರ ಪ್ರಕರಣವನ್ನು ಮುಚ್ಚಿಹಾಕಲು ಒಂದೂವರೆ ಕೋಟಿ ರೂಪಾಯಿ ನೀಡಬೇಕೆಂದು ಅರ್ಜುನ್ ಸರ್ಜಾ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ ಎಂದು ಸರ್ಜಾ ಅವರ ಮ್ಯಾನೇಜರ್ ಶಿವರ್ಜುನ್ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶೃತಿ ಹರಿಹರನ್ ನಾನು ಯಾವ ದುಡ್ಡಿಗೂ ಬೇಡಿಕೆ ಇಟ್ಟಿಲ್ಲ ನನ್ನ ಆಪ್ತರು ಯಾರಿಗೂ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

1 COMMENT

Leave a Reply