ಶೃತಿ ಹರಿಹರನ್ ವಿರುದ್ಧ ಕಿಡಿ ಕಾರಿದ ಹರ್ಷಿಕಾ ಪೂಣಚ್ಚ ಸಿಡಿಸಿದರು ಹೊಸ ಬಾಂಬ್!

ಡಿಜಿಟಲ್ ಕನ್ನಡ ಟೀಮ್:

‘ನಟಿ ಶ್ರುತಿ ಹರಿಹರನ್ ಚಿತ್ರರಂಗವನ್ನು ಬಿಟ್ಟು ಹೋಗಲಿ. ಆದರೆ ಪ್ರಚಾರಕ್ಕಾಗಿ ಯಾರ ಹೆಸರನ್ನು ಹಾಳು ಮಾಡಬಾರದು…’ ಇದು ಮೀಟೂ ವಿವಾದಕ್ಕೆ ಸಂಬಂಧಿಸಿದಂತೆ ನಟಿ ಹರ್ಷಿಕಾ ಪೂಣಚ್ಚ ಅವರು ಶೃತಿ ಹರಿಹರನ್ ವಿರುದ್ಧ ಮಾಡಿರುವ ಟೀಕೆ.

ಹಿರಿಯ ನಟ ಹಾಗೂ ನಿರ್ದೇಶಕ ಅರ್ಜುನ್ ಸರ್ಜಾ ಅವರ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರು ಸರ್ಜಾ ಅವರ ಬೆನ್ನಿಗೆ ನಿಂತಿದ್ದು ಆ ಪೈಕಿ ಹರ್ಷಿಕಾ ಪೂಣಚ್ಚ ಕೂಡ ಒಬ್ಬರು. ಈಗಾಗಲೇ ಈಗಾಗಲೇ ಅರ್ಜುನ್ ಸರ್ಜಾ ಅವರ ಪರ ಬ್ಯಾಟಿಂಗ್ ಮಾಡಿದ್ದ ಹರ್ಷಿಕಾ ಪೂಣಚ್ಚ ಅವರು ಶುಕ್ರವಾರ ಮತ್ತೊಮ್ಮೆ ಶೃತಿ ಹರಿಹರನ್ ವಿರುದ್ಧ ಹರಿಹಾಯ್ದಿದ್ದಾರೆ. ಮಾಧ್ಯಮಗಳ ಮುಂದೆ ಅವರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದು ಹೀಗೆ…

‘ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ. ಒಂದು ಕೈಯಿಂದ ಚಪ್ಪಾಳೆ ಹೊಡಿಯೋಕೆ ಅಗಲ್ಲ. ಹಲವು ನಾಯಕಿಯರು ದೊಡ್ಡ ವ್ಯಕ್ತಿಗಳ ಜೊತೆಗೆ ವಿದೇಶಕ್ಕೆ ತೆರಳಿ ಅವರನ್ನು ಬಳಸಿಕೊಳ್ಳುತ್ತಾರೆ. ನಟಿ ಶ್ರುತಿ ಹರಿಹರನ್ ಅವರು ಬೇಕಾದರೆ ಚಿತ್ರರಂಗವನ್ನು ಬಿಟ್ಟು ಹೋಗಲಿ ಆದರೆ ಪ್ರಚಾರ ಪಡೆಯುವುದಕ್ಕೆ ಬೇರೆಯವರ ಹೆಸರು ಹಾಳು ಮಾಡುವುದು ಸರಿಯಲ್ಲ.’

Leave a Reply