ಸಿಬಿಐ ದುಸ್ಥಿತಿಗೆ ಮೋದಿ ಕಾರಣ: ಸಿದ್ದರಾಮಯ್ಯ ಟೀಕೆ

ಡಿಜಿಟಲ್ ಕನ್ನಡ ಟೀಮ್:

ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐನಲ್ಲಿ ಸದ್ಯ ಉದ್ಭವಿಸಿರುವ ಗೊಂದಲಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಆರೋಪ ಮಾಡಿದ್ದಾರೆ.

ಶಿವಮೊಗ್ಗ ಲೋಕಸಭೆ ಉಪ ಚುನಾವಣೆ ಪ್ರಚಾರ ಸಂದರ್ಭ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಪರಿಸ್ಥಿತಿ ಕುರಿತ ಪ್ರಶ್ನೆಗೆ ಹೀಗೆ ಉತ್ತರಿಸಿದರು. ಮೋದಿ ವಿರುದ್ಧ ಅವರು ಮಾಡಿದ ಟೀಕೆ ಹೀಗಿದೆ:

“ನರೇಂದ್ರ ಮೋದಿ ಅವರ ತಪ್ಪಿನಿಂದ ಸಿಬಿಐ ಕೆಟ್ಟ ಹೆಸರು ಹೊರುವಂತಾಗಿದೆ. ಸಿಬಿಐ ಒಂದು ಅತ್ಯುನ್ನತ ಸಂಸ್ಥೆ. ಹಿರಿಯ ಅಧಿಕಾರಿ ಈ ಸಂಸ್ಥೆ ನಿರ್ದೇಶಕರಾಗಿರಬೇಕು. ದೇಶದಲ್ಲಿರುವ ಎಲ್ಲಾ ತನಿಖಾ ಸಂಸ್ಥೆಗಳ ಪೈಕಿ ಸಿಬಿಐ ಬಗ್ಗೆ ಜನರಲ್ಲಿ ಹೆಚ್ಚು ನಂಬಿಕೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು ಚೋರ ಬಚಾವೋ ಸಂಸ್ಥೆ ಎಂದು ಟೀಕಿಸುತ್ತಿತ್ತು. ಆದರೆ ಈಗ ಅದೇ ಬಿಜೆಪಿ ಮಾತೆತ್ತಿದರೆ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ಕೊಡಿ ಎಂದು ಹೇಳುತ್ತಿದೆ.

ನಾನು ಮುಖ್ಯಮಂತ್ರಿ ಆಗಿದ್ದಾಗ ಆರೇಳು ಪ್ರಕರಣಗಳನ್ನು ಸಿಬಿಐಗೆ ನೀಡಿದೆ. ಕಾರಣ ನನಗೆ ಈ ತನಿಖಾ ಸಂಸ್ಥೆ ಮೇಲೆ ಸಂಪೂರ್ಣ ಭರವಸೆ ಇತ್ತು. ಇಂತಹ ಸಂಸ್ಥೆಯಲ್ಲಿ ಈಗ ನರೇಂದ್ರ ಮೋದಿ ಅವರು ಆಸ್ತಾನಾ ಎಂಬುವರನ್ನು ಕರೆದುಕೊಂಡು ಬಂದು ವಿಶೇಷ ನಿರ್ದೇಶಕರನ್ನಾಗಿ ನೇಮಿಸಿದ್ದಾರೆ. ಇದರುಂದ ಸಂಸ್ಥೆಯ ಹಿರಿಯ ಅಧಿಕಾರಿಗಳಲ್ಲಿ ಅಸಮಾಧಾನ, ಜಗಳ ಶುರುವಾಗಿದೆ. ಯಾವುದೇ ಸ್ವತಂತ್ರ ತನಿಖಾ ಸಂಸ್ಥೆಯನ್ನು ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಿದರೆ ಇಂತಹ ಬೆಳವಣಿಗೆಗಳು ನಡೆಯುತ್ತವೆ. ಮೋದಿ ಅವರು ಈ ದುರ್ಬಳಕೆಗೆ ಮುಂದಾಗಿರುವುದರಿಂದಲೃ ಈ ಪರಿಸ್ಥಿತಿ ನಿರ್ಮಾಣವಾಗಿದೆ.”

1 COMMENT

  1. deshada yella agu hogugalige pradhaniyavare honegararu. avaru adalita pakshada mukhandaru. adaralli yava sandewhagalilla. UTTARA DAYITVAVU AVARADDU IRUTTADE<allave.

Leave a Reply