ಅರೆಸ್ಟ್​ ಆಗ್ತಾರಾ ನಟ ಅರ್ಜುನ್​ ಸರ್ಜಾ..?

ಡಿಜಿಟಲ್ ಕನ್ನಡ ಟೀಮ್:

ನಟ ಅರ್ಜುನ್​ ಸರ್ಜಾ ವಿರುದ್ಧ #MeToo ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್​ ಅವರನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ಕರೆದು ಸಂಧಾನ ಮಾಡುವ ಯತ್ನ ಮಾಡಿತ್ತು. ಸ್ಯಾಂಡಲ್​ವುಡ್​ನ ಹಿರಿಯ ನಟ ಅಂಬರೀಶ್​ ಕೂಡ ಮಧ್ಯಪ್ರವೇಶ ಮಾಡಿ ಪ್ರಕರಣವನ್ನು ಸುಖಾಂತ್ಯ ಮಾಡುವ ಮನಸ್ಸು ಮಾಡಿದ್ರು. ಆದ್ರೆ ಎರಡೂ ಕಡೆಯಿಂದಲೂ ಸೂಕ್ತ ಸ್ಪಂದನೆ ದೊರೆಯದ ಕಾರಣ ಸಂಧಾನ ಸಭೆಯನ್ನು ಮೊಟಕು ಮಾಡಲಾಗಿತ್ತು. ಆ ಬಳಿಕ ಇಬ್ಬರೂ ಠಾಣೆ ಮೆಟ್ಟಿಲೇರಿದ್ದು, ದೇಶದ ಬೇರೆ ಬೇರೆ ಭಾಗದಲ್ಲಿ ದೂರು ಸಲ್ಲಿಸುವ ಚಾಳಿ ಮುಂದುವರಿಸಿದ್ದು, ಇವತ್ತು ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ..

ಅರ್ಜುನ್​ ಸರ್ಜಾ ಮೇಲೆ ನಟಿ ಶೃತಿ ಹರಿಹರನ್​ ಮಾಡಿರುವ ಆರೋಪಗಳನ್ನು ನೋಡೋದಾದ್ರೆ.. 2015ರಲ್ಲಿ ವಿಸ್ಮಯ ಚಿತ್ರೀಕರಣ ನಡೆಯುವ ವೇಳೆ ನಟ ಅರ್ಜುನ್ ಸರ್ಜಾ ಅಸಭ್ಯ ವರ್ತನೆ ತೋರಿ, ಲೈಂಗಿಕ ಕಿರುಕುಳ ನೀಡಿದ್ರು.. ದೇವನಹಳ್ಳಿ ಬಳಿ ಆಸ್ಪತ್ರೆಯಲ್ಲಿ ಚಿತ್ರೀಕರಣ ನಡೆಯುವಾಗ ಶೂಟಿಂಗ್ ನಂತ್ರ ಖಾಸಗಿ ಸ್ಥಳದಲ್ಲಿ ಸಿಗಲು ಪೀಡಿಸಿದ್ರು, ಈ ಮೂಲಕ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನ ಮಾಡಿದ್ರು.. ದೇವನಹಳ್ಳಿ ಸಿಗ್ನಲ್ ಬಳಿ ಕಾರನ್ನು ತಡೆದು ರೆಸಾರ್ಟ್‌ಗೆ ಕರೆದ್ರು, ಒಟ್ಟಿಗೆ ಕಾಲ ಕಳೆಯೋಣ ಎಂದು ಕರೆದಿದ್ದರು.. ನನ್ನ ರೆಸಾರ್ಟ್‌ನಲ್ಲಿ ಯಾರೂ ಇಲ್ಲ ಬಾ ಎಂದು ಪೀಡಿಸಿದ್ರು.. ಈ ವೇಳೆ ಸರ್ಜಾ ಮಾತು ಕೇಳಿ ಕಣ್ಣೀರಿಟ್ಟೆ.. ಅವ್ರು ಹೊರಟು ಹೋದ್ರು ಎಂದಿರುವ ನಟಿ ಸೆಕ್ಷನ್ 354, 354ಎ, 509 ಅಡಿ ಪ್ರಕರಣ ದಾಖಲು ಮಾಡಿದ್ದಾರೆ.

ಜುಲೈ 2016ರಲ್ಲಿ ಚಿತ್ರದ ಚಿತ್ರೀಕರಣಕ್ಕೆ ಯುಬಿ ಸಿಟಿಗೆ ಹೋಗಿದ್ದೆ, ಈ ವೇಳೆ ಅರ್ಜುನ್ ಸರ್ಜಾ ನನ್ನ ಹಿಪ್ ಟಚ್ ಮಾಡಿ ಅಸಭ್ಯ ವರ್ತನೆ ತೋರಿಸಿದ್ರು.. ಯಾಕೆ ಒಬ್ಬಳೇ ಕಾಯುತ್ತಿದ್ದೀಯಾ ಎಂದು ಪ್ರಶ್ನಿಸಿದ ಅವ್ರು, ನಾನು ಒಬ್ಬನೇ ಇದ್ದೇನೆ.. ಒಂದಷ್ಟು ಕಾಲ ಸಂತೋಷವಾಗಿ ಕಾಲಕಳೆಯೋಣ ಅಂದ್ರು.. ಅರ್ಜುನ್ ಮಾತು ಕೇಳಿ ನಾನು ಗಾಬರಿ ಬಿದ್ದೆ, ಭಯಗೊಂಡೆ.. ಇವರ ಮಾತುಗಳಿಂದ ನನಗೆ ಅವರ ಲೈಂಗಿಕ ಉದ್ದೇಶ ಗೊತ್ತಾಯ್ತು ಎಂದಿದ್ದಾರೆ.. ಹಾಗಾಗಿ ನಾನು ಅವರ ರೂಮ್‌ಗೆ ತೆರಳಲು ನಿರಾಕರಿಸಿದೆ ಎಂದಿದ್ದಾರೆ.

ಹೆಬ್ಬಾಳದ ಬಂಗಲೆಯಲ್ಲಿ ತಬ್ಬಿಕೊಂಡು ಡೈಲಾಗ್ ಹೇಳುವ ಸೀನ್ ಇತ್ತು, ಈ ಸೀನ್‌ಗಾಗಿ ನಿರ್ದೇಶಕರು ರಿಹಾರ್ಸಲ್ ಮಾಡಲು ಸೂಚಿಸಿದ್ರು.. ಈ ವೇಳೆ ಅವ್ರು ನನ್ನ ಹಿಪ್ ಹಿಡಿದ್ರು, ದೇಹದ ಅಂಗಾಂಗ ಮುಟ್ಟಿದ್ರು.. ನನ್ನ ಹಿಪ್ ಹಾಗೂ ತೊಡೆ ಭಾಗದಲ್ಲಿ ಕೈಯಾಡಿಸಿದ್ರು.. ಕಥೆಯಲ್ಲಿ ಇರುವುದಕ್ಕಿಂತ ಬೇರೆಯಾಗಿ ಅರ್ಜುನ್ ಸರ್ಜಾ ವರ್ತಿಸಿದ್ರು.. ನಾನು ಕನ್ನಡ ಇಂಡಸ್ಟ್ರಿಗೆ ಹೊಸಬಳಾಗಿದ್ದೆ.. ಹಾಗಾಗಿ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ.. ಅವ್ರು ಕನ್ನಡ ಇಂಡಸ್ಟ್ರಿಯಲ್ಲಿ ಬಹಳ ದೊಡ್ಡ ಹಾಗೂ ಹಿರಿಯ ನಟ. ಹಾಗಾಗಿ, ಆ ವೇಳೆ ನನಗೆ ಪ್ರತಿಕ್ರಿಯಿಸಲು ಧೈರ್ಯ ಬರಲಿಲ್ಲ.. ನಾನು ಪ್ರತಿಕ್ರಿಯೆ ನೀಡುವ ವೇಳೆಗೆ ಮತ್ತೊಮ್ಮೆ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ರು.. ಈ ಸೀನ್‌ ಅನ್ನು ಇನ್ನೂ ಉತ್ತಮಗೊಳಿಸಬಹುದೇ ಎಂದು ಕೇಳಿದ್ರು.. ನಾನು ನಿರ್ದೇಶಕರ ಬಳಿ ತೆರಳಿ ಈ ರೀತಿಯ ಸೀನ್ ಮಾಡಲು ಇಷ್ಟವಿಲ್ಲ ಎಂದಿದ್ದೆ.. ಈ ಬೆಳವಣಿಗಗಳನ್ನು ಸಹಿಸಿಕೊಳ್ಳಲಾಗದೆ ನಾನು ಕಣ್ಣೀರಿಟ್ಟೆ.. ನನ್ನ ಸಹಾಯಕರಾದ ಬೋರೇಗೌಡ ಮತ್ತು ಕಿರಣ್ ನನ್ನನ್ನು ಸಮಾಧಾನಪಡಿಸಿದ್ರು.. ಚಿತ್ರದಲ್ಲಿ ಹಾಸಿಗೆ ಮೇಲೆ ಒಟ್ಟಿಗೆ ಮಲಗುವ ದೃಶ್ಯ ಇತ್ತು.. ಇದನ್ನು ದುರುಪಯೋಗಪಡಿಸಿಕೊಂಡ್ರು.. ನನ್ನ ಕೈ ಹಿಡಿದು ಎಳೆದು, ಹತ್ತಿರ ಬರುವಂತೆ, ತಬ್ಬಿಕೊಳ್ಳುವಂತೆ ಒತ್ತಾಯಿಸಿದ್ರು ಎಂದಿದ್ದಾರೆ.

ಎಚ್ಚರದಿಂದ ಇರು ನಿನ್ನ ಕೆರಿಯರ್ ಹಾಳು ಮಾಡುತ್ತೇನೆ ಎಂದು ಬೆದರಿಸಿದ್ರು.. ಈ ಬಗ್ಗೆ ಯಾರಲ್ಲಾದ್ರೂ ಮಾತನಾಡಿದ್ರೆ ಕೆರಿಯರ್ ಹಾಳು ಮಾಡ್ತೇನೆ ಎಂದು ಬೆದರಿಕೆ ಹಾಕಿದ್ರು ಎಂದು ಬೆದರಿಕೆ ಹಾಕಿದ್ರು ಎಂದು ದೂರು ಸಲ್ಲಿಸಿದ್ದಾರೆ. ಈ ಸೆಕ್ಷನ್​ಗಳ ಅಡಿಯಲ್ಲಿ ದೂರು ದಾಖಲು ಮಾಡಿದ್ದು, ಜಾಮೀನು ರಹಿತ ಪ್ರಕರಣಗಳಾಗಿವೆ. ಹೀಗಾಗಿ ಪೊಲೀಸ್ರು ಕಾನೂನು ಮೊರೆ ಹೋಗಿದ್ದು, ಅರ್ಜುನ್​ ಸರ್ಜಾ ಅವರನ್ನು ಅರೆಸ್ಟ್​ ಮಾಡಿ ವಿಚಾರನೆ ಮಾಡಬೇಕಾ..? ಅಥವಾ ಶೃತಿ ಹರಿಹರನ್​ ಅವರನ್ನು ವಿಚಾರಣೆ ಮಾಡಿ ಸ್ಥಳ ಮಹಜರುಯ ಮಾಡಿದ ಬಳಿಕ ಅರ್ಜುನ್​ ಸರ್ಜಾ ಅವರನ್ನು ವಿಚಾರಣೆಗೆ ಕರೆಯಬೇಕಾ ಅನ್ನೋ ಚಿಂತನೆಯಲ್ಲಿದ್ದಾರೆ. ಒಟ್ಟಾರೆ, ಅರೆಸ್ಟ್​ ಮಾಡಿ ವಿಚಾರಣೆ ಮಾಡುವುದೇ ಸೂಕ್ತ ಅನ್ನೋ ಲೆಕ್ಕಾಚಾರಕ್ಕೆ ಪಪೊಲೀಸ್ರು ಫಿಕ್ಸ್​ ಆದ್ರೆ ಬಹುಭಾಷಾ ನಟ ಅರ್ಜುನ್​ ಸರ್ಜಾ ಅರೆಸ್ಟ್​ ಆಗೋದು ಗ್ಯಾರಂಟಿ ಆಗಿದೆ.

Leave a Reply