ದುನಿಯಾ ವಿಜಿ ನಸೀಬು ಖರಾಬು, ಎರಡನೇ ಪತ್ನಿಗೆ ಮೊದಲನೆಯವರ ಚಪ್ಪಲಿ ಸೇವೆ!

ಡಿಜಿಟಲ್ ಕನ್ನಡ ಟೀಮ್:

ನಟ ದುನಿಯಾ ವಿಜಯ್ ಸಂಸಾರದ ಗಲಾಟೆ, ಹಾದಿ ಬೀದಿ ರಂಪ ಸೃಷ್ಟಿಸಿದೆ. ದುನಿಯಾ ವಿಜಿ ಹಲ್ಲೆ ಕೇಸ್ನಲ್ಲಿ ಜೈಲಲ್ಲಿದ್ದಾಗ ಮೊದಲ ಪತ್ನಿ ನಾಗರತ್ನ 2ನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಮಾಡಿದ್ದಾರೆ. ಸೆಪ್ಟೆಂಬರ್ 23 ರಂದು ಮಗ ಸಾಮ್ರಾಟ್ನನ್ನ ನೋಡಲು ಹೋಗಿದ್ದಾಗ ಕೀರ್ತಿಗೌಡ ತಮ್ಮ ಮೇಲೆ ಹಲ್ಲೆ ಮಾಡಿದ್ರು ಅಂತ ಆರೋಪಿಸಿ ಗಿರಿನಗರ ಠಾಣೆಯಲ್ಲಿ ಕೀರ್ತಿಗೌಡ ವಿರುದ್ಧ ದೂರು ದಾಖಲಿಸಿದ್ರು. ಆದ್ರೀಗ ನಾಗರತ್ನ ನೀಡಿದ್ದ ದೂರಿಗೆ ಹೊಸ ಟ್ವಿಸ್ಟ್​ ಸಿಕ್ಕಿದ್ದು, ಹಲ್ಲೆ ಮಾಡಿರೋದು ಕೀರ್ತಿಗೌಡ ಅಲ್ಲ, ನಾಗರತ್ನ ಅನ್ನೋದು ಕನ್ಫರ್ಮ್​ ಆಗಿದೆ. ಏಕಾಏಕಿ ಮನೆಗೆ ಎಂಟ್ರಿ ಕೊಟ್ಟಿರುವ ನಾಗರತ್ನ ಬಾಗಿಲಲ್ಲಿ ಚಪ್ಪಲಿ ಬಿಟ್ಟು, ಒಂದು ಚಪ್ಪಲಿಯನ್ನು ಒಳಕ್ಕೆ ತಂದು ಹಿಗ್ಗಾಮುಗ್ಗಾ ಬಾರಿಸಿದ್ದಾರೆ.

ಸಿಸಿಟಿವಿ ದೃಶ್ಯಗಳು ಕೀರ್ತಿಗೌಡ ವಿರುದ್ಧ ನಾಗರತ್ನ ಸುಳ್ಳು ದೂರು ಕೊಟ್ಟಿದ್ದಾರೆ ಅನ್ನೋದನ್ನು ಗ್ಯಾರಂಟಿ ಮಾಡಿವೆ. ತಾಯಿ ನಾಗರತ್ನ ಜೊತೆ ಸೇರಿ ಮಕ್ಕಳೂ ಸಂಚು ರೂಪಿಸಿದ್ದಾರೆ ಅನ್ನೋದು ಗೊತ್ತಾಗ್ತಿದೆ. ಮಗಳು ಮೋನಿಕಾ ವಿಜಯ್​ ಮನೆಯಲ್ಲೇ ಇದ್ದುಕೊಂಡು ತಾಯಿ ಬರುವುದು ಗೊತ್ತಾಗ್ತಿದ್ದ ಹಾಗೆ ಮನೆಯ ಗೇಟ್​ ಓಪನ್​ ಮಾಡಿ ಬಂದು ಕೂರುವುದು, ಗಲಾಟೆ ನಡೆಯುವಾಗ ನಾಗರತ್ನರನ್ನು ಹಿಡಿದುಕೊಳ್ಳಲು ಯತ್ನಿಸುತ್ತಿದ್ದವರನ್ನು ಬಿಡಿಸಲು ಮುಂದಾಗಿದ್ದು ಸ್ಪಷ್ಟವಾಗಿ ಕಾಣಿಸುತ್ತಿದೆ. ಶನಿವಾರ ಕೀರ್ತಿಗೌಡ ನೀಡಿದ್ದ ದೂರು ಆಧರಿಸಿ ನಾಗರತ್ನ ವಿರುದ್ಧ ಐಪಿಸಿ ಸೆಕ್ಷನ್ 326 ರಡಿ ಎಫ್‌ಐಆರ್ ದಾಖಲಿಸಿದ್ರು. ಎಫ್‌ಐಆರ್ ದಾಖಲಾಗ್ತಿದ್ದಂತೆ ನಾಗರತ್ನ ನಾಪತ್ತೆಯಾಗಿದ್ರು. ಪೊಲೀಸರ ಫೋನಿಗೂ ಸಿಗಲಿಲ್ಲ. ಮಗಳು ಮೋನಿಕಾ ಮನೆಯಲ್ಲಿದ್ರೂ ಬಾಗಿಲು ತೆಗೀಲಿಲ್ಲ.

ನಾಗರತ್ನ ಪರ ವಕೀಲೆ ಮೀರಾ ರಾಘವೇಂದ್ರ ಕತ್ರಿಗುಪ್ಪೆಯಲ್ಲಿರುವ ನಾಗರತ್ನ ಮನೆಗೆ ಬಂದಾಗ ಮೋನಿಕಾ ಬಾಗಿಲು ತೆಗೆದ ಬಳಿಕ ಮನೆಯಲ್ಲಿ ನಾಗರತ್ನ ಇಲ್ಲದೇ ಇರೋದನ್ನ ಪೊಲೀಸ್ರು ಖಚಿತಪಡಿಸಿಕೊಂಡ್ರು. ನಾಗರತ್ನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಎಸ್ಕೇಪ್ ಆಗಿರೋದು ಕನ್ಫರ್ಮ್ ಮಾಡಿಕೊಂಡ್ರು. ನಂತ್ರ ಮನೆಯಿಂದ ವಕೀಲರ ಜೊತೆ ಹೊರಬಂದ ಮೋನಿಕಾ ಹಾಗು ಮೋನಿಷಾ ಗಿರಿನಗರ ಠಾಣೆಗೆ ಬಂದ್ರು. ಮಕ್ಕಳು ಸ್ಟೇಷನ್‌ಗೆ ಬರ್ತಿದ್ದಂತೆ ವಿಜಯ್ ಕೂಡ ಗಿರಿನಗರ ಸ್ಟೇಷನ್‌ಗೆ ದೌಡಾಯಿಸಿದ್ರು. ಈ ವೇಳೆ ವಿಜಯ್ ಹಾಗು ಮೋನಿಕಾ ಮುಖಾಮುಖಿಯಾದ್ರು. ನಂತ್ರ ಮಕ್ಕಳನ್ನು ಬಿಟ್ಟು ಕಳಿಹಿಸುವಂತೆ ವಿಜಯ್​ ಮನವಿ ಮಾಡಿದ್ರು. ಪೊಲೀಸ್ರು ಕೂಡ ಮನವಿ ಪುರಸ್ಕರಿಸಿ ವಿಚಾರಣೆ ಬಳಿಕ ಬಿಟ್ಟು ಕಳುಹಿಸಿದ್ರು.

ಒಟ್ಟಾರೆ ಗಂಡ ಹೆಂಡ್ತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ ನಾಗರತ್ನ ಹಾಗೂ ದುನಿಯಾ ವಿಜಯ್​ ಗಲಾಟೆಯಲ್ಲಿ ಮಕ್ಕಳು ಕಂಗಾಲಾಗ್ತಿವೆ. ನಾಗರತ್ನ ಹಾಗೂ ವಿಜಯ್​ ಮಕ್ಕಳನ್ನು ಅಸ್ತ್ರಗಳನ್ನಾಗಿ ಬಳಸಿಕೊಳ್ತಿದ್ದಾರೆ. ಇದೀಗ ನಾಗರತ್ನ ಅರೆಸ್ಟ್​ ಆಗುವ ಭೀತಿಯಿಂದ ನಾಪತ್ತೆಯಾಗಿದ್ದು ವಯಸ್ಸಿಗೆ ಬಂದ ಮಕ್ಕಳು ಮನೆಯಲ್ಲಿ ಅನಾಥವಾಗಿದ್ದಾರೆ ಅನ್ನೋದು ವಿಪರ್ಯಾಸ.

Leave a Reply