ಭವಿಷ್ಯ ಪಣಕ್ಕಿಟ್ಟು ಕಮಲ ಹಿಡಿತರಾ ಚಲುವರಾಯಸ್ವಾಮಿ?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಬಿಜೆಪಿ ಸೇರ್ತಾರಾ..! ಎನ್ನುವ ಅನುಮಾನಗಳು ದಟ್ಟವಾಗುತ್ತಿವೆ. ಇದಕ್ಕೆ ಕಾರಣ ಇತ್ತೀಚಿನ ರಾಜಕೀಯ ಬೆಳವಣಿಗೆಗಳು.

ಹೌದು, ಜೆಡಿಎಸ್‌ನಲ್ಲಿ ಶಾಸಕರಾಗಿ, ಸಚಿವರಾಗಿ ಅಧಿಕಾರ ನಡೆಸಿದ್ದ ಚಲುವರಾಯಸ್ವಾಮಿ, ಕಳೆದ ರಾಜ್ಯಸಭಾ ಚುನಾವಣೆ ವೇಳೆ ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿದರು. ಬಳಿಕ ಜೆಡಿಎಸ್‌ನಿಂದ ಉಚ್ಛಾಟನೆಯಾಗಿ, ಕಾಂಗ್ರೆಸ್ ಪಕ್ಷ ಸೇರಿದರು. ಅದ್ರೆ ನಾಗಮಂಗಲದ ಜನ ಜೆಡಿಎಸ್ ಬೆಂಬಲಿಸಿ, ಕಾಂಗ್ರೆಸ್ ತಿರಸ್ಕರಿಸಿದ ಕಾರಣ ಸೋತು ಮನೆಯಲ್ಲಿ ಇರುವಂತಾಗಿದೆ. ಆದ್ರೀಗ ಬಿಜೆಪಿ ಸೇರ್ತಾರಾ ಅನ್ನೋ ಮಾತು ನಾಗಮಂಗಲದಲ್ಲಿ ಕೇಳಿ ಬರುತ್ತಿದೆ. ಈ ಮಾತು ಹುಟ್ಟಿಕೊಳ್ಳಲು ಕಾರಣಗಳಿವೆ. ಅವುಗಳೆಂದರೆ…

ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಎಲ್.ಆರ್ ಶಿವರಾಮೇಗೌಡ ಅವರನ್ನು ಬೆಂಬಲಿಸುವಂತೆ ಕರೆ ನೀಡಲು ನಿನ್ನೆ ಕಾರ್ಯಕರ್ತರ, ನಾಯಕರ ಸಭೆ ಕರೆಯಲಾಗಿತ್ತು. ಈ ವೇಳೆ ರಾಜ್ಯ ಸರ್ಕಾರ ನಾಗಮಂಗಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದೆ, ಕಾಂಗ್ರೆಸ್ ಬೆಂಬಲದಿಂದಲೇ ಅಧಿಕಾರ ನಡೆಸುತ್ತಿದ್ದರೂ ಎ.ಪಿ.ಎಂ.ಸಿ.ಯಲ್ಲಿ ನಾಮಿನೇಷನ್ ಕೊಡದೆ ವಂಚಿಸಿದರು ಎಂದು ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಯ್ತು. ಇದಕ್ಕೆ ಉತ್ತರಿಸಿದ ಚಲುವರಾಯಸ್ವಾಮಿ, ‘ಈಗ ಕಾಂಗ್ರೆಸ್ ಪಕ್ಷ ರಾಜ್ಯ ಹಾಗೂ ರಾಷ್ಟ್ರಮಟ್ಟದ ರಾಜಕಾರಣಕ್ಕಾಗಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ಹೀಗಾಗಿ ಮೈತ್ರಿ ಅಭ್ಯರ್ಥಿಯಾಗಿರುವ ಶಿವರಾಮೇಗೌಡರನ್ನು ಗೆಲ್ಲಿಸೋಣ, ಯಾವುದೇ ಕಾರಣಕ್ಕೂ ಗೊಂದಲ ಮಾಡಿಕೊಳ್ಳಬೇಡಿ’ ಅಂದ್ರು. ‘ಈ ಉಪಚುನಾವಣೆ ಬಳಿಕ ಹಳೇ ಮೈಸೂರು ಭಾಗದ ನಾಯಕರ ಸಭೆಯನ್ನು ಸಿದ್ಧರಾಮಯ್ಯ ಕರೆದಿದ್ದಾರೆ. ಆ ಬಳಿಕವೂ ಜೆಡಿಎಸ್ ನಿಂದ ದಬ್ಬಾಳಿಕೆ ಹೀಗೆ ಮುಂದುವರಿದರೆ, ನಿಮ್ಮ ನಿರ್ಧಾರಕ್ಕೆ ನಾನು ಬದ್ಧ, ನೀವು ಹೇಗೆ ಹೇಳ್ತಿರೊ ಹಾಗೆ ಕೇಳ್ತೆನೆ. ಇನ್ನೈದು ತಿಂಗಳಲ್ಲಿ ಲೋಕಸಭಾ ಚುನಾವಣಾ ಬರಲಿದೆ’ ಎಂದು ಮಾರ್ಮಿಕವಾಗಿ ಉತ್ತರಿಸಿದ್ರು.

ಇನ್ನು ಕೆಲ ದಿನಗಳ ಹಿಂದೆ ನಾಗಮಂಗಲದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ ಚಲುವರಾಯಸ್ವಾಮಿ ಯವರನ್ನು ಸೋಲಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳಿ ಎಂದಿದ್ದರು. ಜೊತೆಗೆ ಚೆಲುವರಾಯಸ್ವಾಮಿ ಉತ್ತಮ ನಾಯಕ ಮುಂದಿನ ದಿನಗಳಲ್ಲಿ ಒಳ್ಳೆ ಭವಿಷ್ಯವಿದೆ ಎಂದು ಹಾಡಿ ಹೋಗಳಿದ್ರು. ಇದರೊಂದಿಗೆ ಈ ಚುನಾವಣೆಯಲ್ಲಿ ಅಲ್ಲದಿದ್ದರೂ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಚಲುವರಾಯಸ್ವಾಮಿಯವರನ್ನು ಬಿಜೆಪಿಗೆ ಸೆಳೆಯುವ ಮುನ್ಸೂಚನೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದೀಗ ಚಲುವರಾಯಸ್ವಾಮಿ ಕೂಡ ಬಿ.ಎಸ್.ವೈ ಮಾತಿಗೆ ಪೂರಕವಾಗಿ ಮಾತಾನಾಡಿರುವುದು ಬಿಜೆಪಿ ಸೇರ್ತಾರಾ ಎನ್ನುವ ಅನುಮಾನ ಹುಟ್ಟುಹಾಕಿದೆ.

ಚೆಲುವರಾಯಸ್ವಾಮಿ ಬಿಜೆಪಿ ಸೇರ್ಪಡೆಯ ಕುರಿತು ಚರ್ಚೆ ಆರಂಭವಾಗುತ್ತಿರುವ ಹೊತ್ತಲ್ಲಿ ಮತ್ತೊಂದು ಚರ್ಚೆ ಹುಟ್ಟುಕೊಂಡಿದೆ. ಅದೇನೆಂದರೆ ಚೆಲುವರಾಯಸ್ವಾಮಿ ಬಿಜೆಪಿ ಸೇರ್ಪಡೆಯಾದರೆ ಅವರ ರಾಜಕೀಯ ಭವಿಷ್ಯ ಏನಾಗುತ್ತದೆ? ಎಂದು.

ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದ್ದು, ಚಲುವರಾಯಸ್ವಾಮಿ ಬಿಜೆಪಿಗೆ ಹೋಗಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಸ್ಪರ್ಧಿಸಿದರೆ ಗೆಲ್ತಾರಾ? ಅನ್ನೋ ಪ್ರಶ್ನೆ ಉದ್ಭವಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಬಿಜೆಪಿ ಚೆಲುವರಾಯಸ್ವಾಮಿಯ ಮೂಲಕ ಲಾಭವಾಗಿ ಪರಿವರ್ತಿಸಿಕೊಳ್ಳಲು ಬಿಜೆಪಿ ಲೆಕ್ಕಚಾರ ಹಾಕಿದರು ಇದು ಸುಲಭವಲ್ಲ. ಯಾಕಂದ್ರೆ ಮಂಡ್ಯದಲ್ಲಿ ಪ್ರಾಬಲ್ಯ ಇರೋದು ಒಕ್ಕಲಿಗರು,ಮುಸ್ಲಿಮರು, ದಲಿತರು. ಈ ಮೂರೂ ಜನಾಂಗಗಳು ಜ್ಯಾತ್ಯತೀತ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದು, ಬಿಜೆಪಿಗೆ ಜೈ ಅನ್ನೊದು ಅನುಮಾನ.
ಚೆಲುವರಾಯಸ್ವಾಮಿ ಬಿಜೆಪಿ ಸೇರ್ಪಡೆಯಾದರು ಮಂಡ್ಯದಲ್ಲಿ ಕಮಲ ಪಾಳಯಕ್ಕೆ ಒಂದಷ್ಟು ಮತಪ್ರಮಾಣ ಏರಿಕೆಯಾದರೂ ಗೆಲುವು ಸಾಧಿಸುವ ಸಾಧ್ಯತೆ ತೀರಾ ಕಡಿಮೆ. ಕಾರಣ ಈ ಭಾಗದ ಜನರು ವ್ಯಕ್ತಿಗಿಂತ ಪಕ್ಷದ ಮೇಲೆ ಹೆಚ್ಚು ನಿಷ್ಠಾವಂತರಾಗಿದ್ದಾರೆ. ಅದಕ್ಕೆ ಸಾಕ್ಷಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಚೆಲುವರಾಯಸ್ವಾಮಿ ಮುಖಭಂಗ ಅನುಭವಿಸಿದ್ದು.

ಶಾಸಕ ಹಾಗೂ ಸಚಿವರಾಗಿ ಚೆಲುವರಾಯಸ್ವಾಮಿ ನಾಗಮಂಗಲದಲ್ಲಿ ಅನೇಕ ಅಭಿವೃದ್ಧಿ ಮಾಡಿದರು ಜೆಡಿಎಸ್ ಗೆ ದ್ರೋಹ ಮಾಡಿದ್ದನ್ನು ಮತದಾರ ಕ್ಷಮಿಸಲಿಲ್ಲ.

ಹೇಳಿಕೇಳಿ ಮಂಡ್ಯದಲ್ಲಿ ಪ್ರಾಬಲ್ಯ ಇರೋದು ಒಕ್ಕಲಿಗರು,ಮುಸ್ಲಿಮರು, ದಲಿತರು. ಈ ಮೂರೂ ಜನಾಂಗಗಳು ಜ್ಯಾತ್ಯತೀತ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು ಗೆಲ್ಲಲು ಸಾಧ್ಯವಾಗದ ಚೆಲುವರಾಯಸ್ವಾಮಿ ಬಿಜೆಪಿ ಸೇರಿದರೆ ಜನ ಕೈ ಹಿಡಿಯುವುದು ಸದ್ಯದ ಮಟ್ಟಿಗೆ ನಂಬುವ ಮಾತಲ್ಲ. ಹೀಗಾಗಿ ಚೆಲುವರಾಯಸ್ವಾಮಿ ಬಿಜೆಪಿ ಗೆ ಸೇರಿದೆ ಆದರೆ ನಾಗಮಂಗಲ ಹಾಗೂ ಮಂಡ್ಯದಲ್ಲಿ ಅವರ ರಾಜಕೀಯ ಭವಿಷ್ಯ ಮತ್ತಷ್ಟು ದುರ್ಗಮವಾಗಲಿದೆ. ಇದು ಸ್ವತಃ ಚೆಲುವರಾಯಸ್ವಾಮಿ ಗೂ ತಿಳಿದಿದ್ದು, ಬಿಜೆಪಿಗೆ ಸೇರುವ ಧೈರ್ಯ ಮಾಡುವರೇ ಎಂಬುದನ್ನು ಕಾದು ನೋಡಬೇಕು.

Leave a Reply