ಡಾ.ಬಿ.ರಮೇಶ್
ಮೇಲಿಂದ ಮೇಲೆ ಆಗುವ ಗರ್ಭಪಾತವನ್ನು ವೈದ್ಯಭಾಷೆಯಲ್ಲಿ ‘ರಿಕ್ಕರೆಂಟ್ಮಿಸ್ಕ್ಯಾರೇಜ್’ ಅಥವಾ ‘ಹ್ಯಾಬಿಚುಲ್ಮಿಸ್ಕ್ಯಾರೇಜ್’ ಎಂದು ಕರೆಯಲಾಗುತ್ತದೆ. ಸತತ 3 ಸಲ ಗರ್ಭಪಾತ ಆದರೆ ಮಾತ್ರ ಅದನ್ನು ‘ರಿಕ್ಕರೆಂಟ್ಆಬಾರ್ಷನ್’ ಎಂದು ಹೇಳಲಾಗುತ್ತದೆ. ಶೇ.1ರಷ್ಟು ಮಹಿಳೆಯರು ಈ ಸಮಸ್ಯೆಯಿಂದ ತೊಂದರೆ ಪಡುತ್ತಿರುತ್ತಾರೆ.
ಹಾಗೆ ನೋಡಿದರೆ ಪದೇ ಪದೇ ಗರ್ಭಪಾತ ಸಮಸ್ಯೆ ಬಂಜೆತನದ ಸಮಸ್ಯೆಯಲ್ಲ. ಬಂಜೆತನದ ಸಮಸ್ಯೆ ಇರುವವರು ಗರ್ಭಧರಿಸಲು ಸಮಸ್ಯೆ ಎದುರಿಸುತ್ತಿರುತ್ತಾರೆ. ಆದರೆ ಮೇಲಿಂದ ಮೇಲೆ ಗರ್ಭಪಾತದ ಸಮಸ್ಯೆ ಎದುರಿಸುತ್ತಿರುವವರು ಗರ್ಭವೇನೋ ಧರಿಸುತ್ತಾರೆ. ಆದರೆ ಗರ್ಭ ಹಿಡಿದಿಟ್ಟುಕೊಳ್ಳಲು ಅಸಮರ್ಥರಾಗಿರುತ್ತಾರೆ.
ಕಾರಣಗಳು:
ದೈಹಿಕ ರಚನೆಯಲ್ಲಿ ಬದಲಾವಣೆ:
ಕೆಲವು ಮಹಿಳೆಯರ ದೇಹದಲ್ಲಿ ಇರುವ ಲೋಪದಿಂದ ಗರ್ಭಕೋಶದಲ್ಲಿ ಸಮಸ್ಯೆ ಉಂಟಾಗುತ್ತದೆ. ಗರ್ಭಕೋಶದಲ್ಲಿ ಉಂಟಾಗುವ ಪೊರೆ ಅಥವಾ ಪದರು ಕೂಡ ಗರ್ಭವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆ ಮಾಡುತ್ತದೆ.
ಗರ್ಭಕೋಶದ ಗಾತ್ರಕೂಡ ಗರ್ಭಧಾರಣೆಯಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಗರ್ಭಕೋಶ ವಾಸ್ತವ ಗಾತ್ರಕ್ಕಿಂತ ಕಡಿಮೆ ಗಾತ್ರದ್ದಾಗಿದ್ದರೂ, ಗರ್ಭಧಾರಣೆಯೇನೋ ಆಗುತ್ತದೆ. ಆದರೆ ಒಂದು ಅವಧಿಯ ಬಳಿಕ ಗರ್ಭಪಾತವಾಗುತ್ತದೆ. ಇದಕ್ಕೆ ಮುಖ್ಯಕಾರಣ 2ನೇ ತ್ರೈಮಾಸಿಕದಲ್ಲಿ ಮಗುವಿನ ಬೆಳವಣಿಗೆ ತುಂಬಾವೇಗ ಪಡೆದುಕೊಳ್ಳುತ್ತದೆ. ಗರ್ಭಕೋಶಕ್ಕೆ ಭ್ರೂಣವನ್ನು ಹಿಡಿದುಕೊಳ್ಳುವ ಶಕ್ತಿ ಇರದೇ ಇದ್ದಾಗ ಅದು ಓಪನ್ ಆಗಲು ಶುರುವಾಗುತ್ತದೆ. ಈ ರೀತಿಯಾಗಿ ಬೆಳೆಯುತ್ತಿದ್ದ ಭ್ರೂಣ ಗರ್ಭಪಾತವಾಗಿ ಬಿಡುತ್ತದೆ.
- ಶೇ.15ರಷ್ಟು ಪ್ರಕರಣಗಳಲ್ಲಿ ಕ್ರೊಮೊಸೋಮಲ್ಡಿಸಾರ್ಡ ಕೂಡ ಗರ್ಭಪಾತಕ್ಕೆ ಕಾರಣವಾಗುತ್ತದೆ.
- ಭ್ರೂಣದ ಬೆಳವಣಿಗೆಯಲ್ಲಿನ ಅಸಾಮಾನ್ಯ ತೊಂದರೆಗಳು ಗರ್ಭಪಾತಕ್ಕೆ ಕಾರಣವಾಗುತ್ತದೆ.
- ಎಂಡೋಕ್ರೈನ್ಡಿಸಾರ್ಡ ಅಂದರೆ ಥೈರಾಡ್’ಗೆ ಸಂಬಂಧಪಟ್ಟಂತೆ ತೊಂದರೆಗಳು ಇದ್ದಾಗಲೂ ಗರ್ಭಪಾತವಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಹೈಪರ್ಥೈರಾಯಿಡಿಸಂ ಗಿಂತ ಹೈಪೊಥೈರಾಯಿಡಿಸಂ ಹೆಚ್ಚು ಅಪಾಯಕಾರಿ.
- ಅನಿಯಂತ್ರಿತ ಮಧುಮೇಹ, ಪಾಲಿಸಿಸ್ಟಿಕ್ ಓವೇರಿಯನ್ಸಿಂಡ್ರೋಮ್ ಇರುವವರಲ್ಲಿ ಗರ್ಭಪಾತವಾಗುವ ಸಾಧ್ಯತೆಹೆಚ್ಚು.
- ಪುರುಷ ಹಾರ್ಮೋನು ಎಂಡ್ರೋಜೆನ್ಯಾವ ಮಹಿಳೆಯಲ್ಲಿ ಅತಿಯಾದ ಪ್ರಮಾಣದಲ್ಲಿ ಇರುತ್ತೊ ಅವರಲ್ಲೂ ಗರ್ಭಪಾತದ ಸಾಧ್ಯತೆಹೆಚ್ಚು.
- ಥ್ರಾಂಬೊಫೀಲಿಯಾ ಅಂದರೆ ರಕ್ತದಲ್ಲಿ ಜೀನ್ಮ್ಯೂಟೇಶನ್ಬೇರೆ ಬೇರೆ ಇರುತ್ತವೆ. ಹೀಗಾಗಿ ಶೇ.15ರಷ್ಟು ಮಹಿಳೆಯಲ್ಲಿ ಗರ್ಭಪಾತವಾಗಬಹುದು. ಈ. ಸ್ಥಿತಿಯಲ್ಲಿ ಗರ್ಭಕೋಶವು ಭ್ರೂಣವನ್ನು ತಿರಸ್ಕರಿಸಿ ಬಿಡುತ್ತದೆ.
- ಅಂಡಾಣು ಸರಿಯಾಗಿ ಬಿಡುಗಡೆ ಆಗದೇ ಇರುವುದರಿಂದ ಪ್ರೊಜೆಸ್ಟ್ರಾನ್ಹಾರ್ಮೋನು ಇರುವುದಿಲ್ಲ. ಈ ಕಾರಣದಿಂದ ಗರ್ಭವನ್ನು ಸಮರ್ಪಕವಾಗಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಗರ್ಭಕೋಶಕ್ಕೆ ಇರುವುದಿಲ್ಲ.
- ಜೀವನ ಶೈಲಿಯಲ್ಲಿ ಬದಲಾವಣೆ ಕೂಡ ಗರ್ಭಪಾತಕ್ಕೆ ಕಾರಣ ವಾಗಬಹುದು. ಅಂದರೆ ಧೂಮಪಾನ, ಮಧ್ಯಪಾನ, ಡ್ರಗ್ಸ್ ಚಟ ಇದ್ದರೆ ಗರ್ಭಪಾತವಾಗುತ್ತದೆ.
- ಬಗೆ ಬಗೆಯ ಸೋಂಕುಗಳು ಅಂದರೆ ಹರ್ಪಿಸ್, ಬ್ರುಸಿಲೋಸಿಸ್, ಮಲೇರಿಯಾ, ಎಂಡ್ರೊಮೆಟ್ರಿಯೋಸಿಸ್, ಟಾಕ್ಸೋಫ್ಲಾಸ್ಮಾ ಇವು ಗರ್ಭದ ಬೆಳವಣಿಗೆ ಅಡ್ಡಿಯಾಗಿ ಪರಿಣಮಿಸುತ್ತವೆ.
ಪರೀಕ್ಷೆ:
ಟ್ರಾನ್ಸವೆಜೈನಲ್ಸಾಕ್ಷನ್ ಮಾಡುವುದರ ಮೂಲಕ ಸರ್ವಿಕ್ಸ್’ನ ಸಮಗ್ರ ಪರೀಕ್ಷೆ ಕೈಗೊಳ್ಳಲಾಗುತ್ತದೆ. ಸತತ 9 ತಿಂಗಳಕಾಲ ಮಗುವನ್ನು ಹೊರುವಂತಹ ಸಾಮರ್ಥ್ಯವನ್ನು ಗರ್ಭಕೋಶ ನಿರ್ವಹಿಸಲು ಏಕೆ ವಿಫಲ ಆಗುತ್ತದೆ ಎಂಬುದನ್ನು ಕಂಡು ಕೊಳ್ಳಲಾಗುತ್ತದೆ.
ಇದರ ಹೊರತಾಗಿ ಗಂಡಹೆಂಡತಿ ಇಬ್ಬರೂ ಕ್ಯಾರಿಯೊಟೈಪಿಂಗ್ ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಅಂಡಾಣು ಬಿಡುಗಡೆ ಹೇಗಿದೆ ಎಂಬುದರ ಜತೆ ಜತೆಗೆ ಥ್ರಾಬೊಪಿಲಿಯನ್ರಕ್ತ ಪರೀಕ್ಷೆ ಮಾಡಿಸಬೇಕು.
ಚಿಕಿತ್ಸೆ:
ಯಾವ ಕಾರಣದಿಂದ ಪದೇ ಪದೇ ಗರ್ಭಪಾತ ಆಗುತ್ತಿದೆ ಎಂಬುದನ್ನು ಕಂಡುಕೊಂಡು ಅದಕ್ಕೆ ನಿಖರ ಚಿಕಿತ್ಸೆ ಕೊಡಬೇಕಾಗುತ್ತದೆ. ಥೈರಾಯ್ಡ್ ಸಮಸ್ಯೆಯಿಂದ ಹೀಗಾಗುತ್ತಿದ್ದರೆ ಅದಕ್ಕೆ ಚಿಕಿತ್ಸೆ ಕೊಡಬೇಕಾಗುತ್ತದೆ.
ಸರ್ವೈಕಲ್’ನ ಭಾಗ 2 ಸೆಂಮಿ ಅಥವಾ ಆದಕ್ಕೂ ಕಡಿಮೆ ಇದ್ದರೆ ಅದರ ಗಾತ್ರ ಹೆಚ್ಚಿಸಲು ಕೊಡ ವೈದ್ಯರು ಕ್ರಮ ಕೈಗೊಳ್ಳುತ್ತಾರೆ.
ಹೆಚ್ಚಿನ ಮಾಹಿತಿಗೆ:
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್ಶಿ್ಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789
ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873
ಇಮೇಲ್ ವಿಳಾಸ: altiushospital@yahoo.com, www.altiushospital.com