ಉಪ ಚುನಾವಣೆಯಲ್ಲಿ ದೋಸ್ತಿ ದರ್ಬಾರ್, ಕಮರಿದ ಕಮಲ!

ಡಿಜಿಟಲ್ ಕನ್ನಡ ಟೀಮ್:

ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರ ಸೋಲು ಹೊರತಾಗಿ, ಜಮಖಂಡಿ, ರಾಮನಗರ ವಿಧಾನಸಭೆ, ರಾಮನಗರ ಲೋಕಸಭೆ ಉಪಚುನಾವಣೆಯಲ್ಲಿ ನಿರೀಕ್ಷೆಯ ಜಯ, ಬಳ್ಳಾರಿಯಲ್ಲಿ ನಿರೀಕ್ಷೆಗೂ ಮೀರಿದ ಜಯ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿಗೆ ಮತದಾರ ಆಶೀರ್ವಾದ ಮಾಡಿರುವುದು ಸ್ಪಷ್ಟವಾಗಿದೆ. ಇದರೊಂದಿಗೆ ಈ ಫಲಿತಾಂಶ ಕಾಂಗ್ರೆಸ್ ಜೆಡಿಎಸ್ ಮೈತ್ರಿಯನ್ನು ಒಟ್ಟಾಗಿ ಎದುರಿಸಲು ಬಿಜೆಪಿ ಅಸಮರ್ಥ ಎಂಬುದನ್ನು ಸಾಬೀತುಪಡಿಸಿದೆ.

ಎಲ್ಲೆಲ್ಲಿ ಯಾರಿಗೆ ಜಯ

(ಲೋಕಸಭಾ ಫಲಿತಾಂಶ)
ಬಳ್ಳಾರಿ:
ವಿ.ಎಸ್ ಉಗ್ರಪ್ಪ (ಕಾಂಗ್ರೆಸ್): 5,88,863
ಶಾಂತಾ (ಬಿಜೆಪಿ): 3,60,608

ಮಂಡ್ಯ:
ಎಲ್.ಆರ್ ಶಿವರಾಮೇಗೌಡ (ಜೆಡಿಎಸ್): 4,94,728
ಡಾ.ಸಿದ್ದರಾಮಯ್ಯ (ಬಿಜೆಪಿ): 2,05,357

ಶಿವಮೊಗ್ಗ:
ಮಧು ಬಂಗಾರಪ್ಪ (ಜೆಡಿಎಸ್): 4,90,788
ಬಿ.ವೈ ರಾಘವೇಂದ್ರ (ಬಿಜೆಪಿ): 5,47,956

(ವಿಧಾನಸಭೆ ಫಲಿತಾಂಶ)
ರಾಮನಗರ:
ಅನಿತಾ ಕುಮಾರಸ್ವಾಮಿ (ಜೆಡಿಎಸ್): 1,25,043
ಎಲ್.ಚಂದ್ರಶೇಖರ್ (ಬಿಜೆಪಿ): 15,906

ಜಮಖಂಡಿ:
ಆನಂದ್ ನ್ಯಾಮಗೌಡ (ಕಾಂಗ್ರೆಸ್): 97,013
ಕುಲಕರ್ಣಿ: 57,529

Leave a Reply