ಮತ ಎಣಿಕೆ ಎಲ್ಲಿ ನಡೆಯುತ್ತೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

2019ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ವಾರ್ ಎಂದೇ ಪೈಪೋಟಿಗೆ ಕಾರಣವಾಗಿದ್ದ ಪಂಚ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ. ಒಂದೆಡೆ ದೋಸ್ತಿ ಸರ್ಕಾರದ ವಿಶ್ವಾರ್ಹತೆ ಜೊತೆಗೆ ರಾಷ್ಟ್ರೀಯ ಪಕ್ಷ ಬಿಜೆಪಿಯ ಜನ ಭವಿಷ್ಯ ಗೊತ್ತಾಗುತ್ತದೆ. ಇನ್ಮೇನು ಕೆಲವೇ ಗಂಟೆಗಳಲ್ಲಿ ಎಲ್ಲಾ ರಾಜಕೀಯ ಲೆಕ್ಕಾಚಾರಗಳು ಹೊರಬೀಳುತ್ತದೆ..

ತೀವ್ರ ಕುತೂಹಲ ಕೆರಳಿಸಿರೋ ಸಚಿವ ಡಿಕೆಶಿ ಹಾಗು ಶ್ರೀರಾಮುಲು ನಡುವಿನ ಜಿದ್ದಾಜಿದ್ದಿಗೆ ಅಖಾಡವಾಗಿದ್ದ ಬಳ್ಳಾರಿ ಸೇರಿದಂತೆ ಶಿವಮೊಗ್ಗ, ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ.

*ಬಳ್ಳಾರಿ*

ಮತಎಣಿಕೆ ಕೇಂದ್ರ
ರಾವ್‌ ಬಹದ್ದೂರ್ ಮಹಾವಿದ್ಯಾಲಯ, ವೀರಶೈವ ವಿದ್ಯಾವರ್ಧಕ ಸಂಘ
ಒಟ್ಟು ಕೊಠಡಿ – 08
ಒಟ್ಟು ಟೇಬಲ್ – 120
ಮತಎಣಿಕೆ – 17 ಸುತ್ತು

*ಶಿವಮೊಗ್ಗ*

ಮತಎಣಿಕೆ ಕೇಂದ್ರ –
ಸಹ್ಯಾದ್ರಿ ಕಲಾ ಕಾಲೇಜು
ಒಟ್ಟು ಕೊಠಡಿ – 02
ಒಟ್ಟು ಟೇಬಲ್ – 14
ಮತಎಣಿಕೆ – 17 ಸುತ್ತು

*ಮಂಡ್ಯ*

ಮತಎಣಿಕೆ ಕೇಂದ್ರ –
ಬಾಲಕರ ಮಹಾ ವಿದ್ಯಾಲಯ
ಒಟ್ಟು ಕೊಠಡಿ – 16
ಒಟ್ಟು ಟೇಬಲ್ – 112
ಮತಎಣಿಕೆ ಸುತ್ತು – 18 ರಿಂದ 22

*ರಾಮನಗರ*

ಮತಎಣಿಕೆ ಕೇಂದ್ರ –
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಒಟ್ಟು ಕೊಠಡಿ – 02
ಒಟ್ಟು ಟೇಬಲ್ – 14
ಮತಎಣಿಕೆ – 20 ಸುತ್ತು

*ಜಮಖಂಡಿ*

ಮತಎಣಿಕೆ ಕೇಂದ್ರ –
ಜಮಖಂಡಿ ಮಿನಿ ವಿಧಾನಸೌಧ
ಒಟ್ಟು ಕೊಠಡಿ – 01
ಒಟ್ಟು ಟೇಬಲ್ – 14
ಮತಎಣಿಕೆ – 17 ಸುತ್ತು

ಮತ ಎಣಿಕಾ ಕೇಂದ್ರದಲ್ಲಿ ಸಿಸಿಟಿವಿ ಸೇರಿದಂತೆ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಮಂಡ್ಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದ್ದು, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡದಂತೆ ಸೂಚನೆ ಕೊಡಲಾಗಿದೆ..

Leave a Reply