ಟಿಪ್ಪು ಜಯಂತಿಗೆ ತಡೆ ಇಲ್ಲ: ಹೈ ಕೋರ್ಟ್

ಡಿಜಿಟಲ್ ಕನ್ನಡ ಟೀಮ್:

ವಿವಾದಿತ ಟಿಪ್ಪು ಜಯಂತಿ ಆಚರಣೆಗೆ ಎರಡು ದಿನ ಬಾಕಿ ಇರುವಾಗ ಈ ಆಚರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಕೊಡಗು ಮೂಲದ ಮಂಜುನಾಥ್ ಚಿನ್ನಪ್ಪ ಎಂಬುವವರು ಟಿಪ್ಪು ಜಯಂತಿ ಆಚರಣೆಗೆ ತಡೆ ನೀಡುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಶುಕ್ರವಾರ ವಿಚಾರಣೆಗೆ ತೆಗೆದುಕೊಂಡಿತು. ಆದರೆ ಟಿಪ್ಪು ಜಯಂತಿ ಆಚರಣೆಗೆ ಕೇವಲ ಎರಡು ದಿನ ಬಾಕಿ ಇರುವಾಗ ಈ ಅರ್ಜಿ ಸಲ್ಲಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ ತಡೆಯಾಜ್ಞೆ ನೀಡಲು ನಿರಾಕರಿಸಿದೆ.

‘ಟಿಪ್ಪು ಜಯಂತಿಗೆ ಎರಡು ದಿನ ಮೊದಲು ಅರ್ಜಿ ಸಲ್ಲಿಸಿದ್ದೀರ. ಆದರೆ ಅರ್ಜಿಯಲ್ಲಿ ಸರ್ಕಾರದ ನಿರ್ಧಾರವನ್ನೇ ಪ್ರಶ್ನಿಸಿಲ್ಲ. 2016 ರಲ್ಲೇ ಸರ್ಕಾರಕ್ಕೆ ಮನವಿ ಸಲ್ಲಿಸಲು ಸೂಚಿಸಿದ್ದೆವು. ಆದರೆ ಸರ್ಕಾರ ನ.8 2016ರಂದು ನಿಮ್ಮ ಮನವಿ ತಿರಸ್ಕರಿಸಿದೆ. ಅದರೂ ನೀವು ಸರ್ಕಾರದ ನಿರ್ಧಾರವನ್ನೇ ಇಲ್ಲಿಯವರೆಗೂ ಪ್ರಶ್ನಿಸಿಲ್ಲ. ಈ ಹಿಂದೆಯೂ ಹೈಕೋರ್ಟ್ ತಡೆ ನೀಡಿರಲಿಲ್ಲ. ಅದನ್ನು ಪ್ರಶ್ನಿಸದೇ ಈಗ ತಡೆ ಕೇಳುವುದು ಸರಿಯಲ್ಲ’ ಎಂದು ಪೀಠ ತಿಳಿಸಿದೆ.

Leave a Reply