ಕೆಜಿಎಫ್ ಚಿಂದಿ ಟ್ರೈಲರ್.. ದೀಪಾವಳಿಗೆ ಪರ್ಫೆಕ್ಟ್ ಗಿಫ್ಟ್..!

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಕೆಜಿಎಫ್ ಫಸ್ಟ್ ಚಾಪ್ಟರ್ ಟ್ರೈಲರ್ ಲಾಂಚ್ ಆಗಿದೆ.. ಏಕಕಾಲಕ್ಕೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ನಿರ್ಮಾಣವಾಗಿರೋ ಕೆಜಿಎಫ್ ಸಿನಿಮಾ ಟ್ರೈಲರ್ನ 5 ಭಾಷೆಗಳಲ್ಲಿ ರಿಲೀಸ್ ಮಾಡಿರೋ ವಿಶೇಷ. ಕೆಜಿಎಫ್ ರಾಕಿ ಖದರ್ಗೆ ಅಕ್ಷರಶ: ಪರಭಾಷಾ ಫಿಲ್ಮ್ ಮೇಕರ್ಸ್ ಶಾಕ್ ಆಗಿದ್ದಾರೆ. ತೆಲುಗು ಮಂದಿ ಹೇಳುವಂತೆ ಬಾಹುಬಲಿ ಸಿನಿಮಾ ರೇಂಜ್ಗೆ ಕೆಜಿಎಫ್ ಮಣ್ಣಿಕ ಕಥೆ ಮೂಡಿ ಬಂದಿದೆ.

ರಾಕಿ ಹುಟ್ಟು, ಕೆಜಿಎಫ್ನಲ್ಲಿ ಚಿನ್ನದ ನಿಕ್ಷೇಪ ಸಿಗೋದು ಒಂದೇ ಸಮಯಕ್ಕೆ ಆಗುತ್ತೆ. ಕಾರಣಾಂತರಗಳಿಂದ ಮುಂದೆ ರಾಕಿ ಮುಂಬೈನ ಬೀದಿಗಳಲ್ಲಿ ಬೆಳೀತಾನೆ. ಆತ ಮತ್ತೆ ಕೆಜಿಎಫ್ ಬರಬೇಕಾಗುತ್ತೆ. ರಕ್ತಸಿಕ್ತ ಚಿನ್ನದ ಮಣ್ಣಿಗೆ ವಾಪಸ್ ಬರೋ ರಾಕಿ ಅಪಾಯಕ್ಕೆ ಸಿಲುಕಿದ ತನ್ನ ಜನರನ್ನ ಹೇಗೆ ಕಾಪಾಡ್ತಾನೆ ಅನ್ನೋದೇ ಕೆಜಿಎಫ್ ಸಿನಿಮಾದ ಒನ್ಲೈನ್ ಸ್ಟೋರಿ ಅನ್ನೋದು ಗೊತ್ತಾಗಿದೆ. ಪ್ರಶಾಂತ್ ನೀಲ್ ಟೇಕಿಂಗ್, ರಾಕಿಂಗ್ ಸ್ಟಾರ್ ಯಶ್ ಪರ್ಫಾರ್ಮೆನ್ಸ್ ವಾಹ್ ಅನ್ನುವಂತಿದೆ.

ರವಿ ಬಸ್ರೂರ್ ಮ್ಯೂಸಿಕ್ ಟ್ರೈಲರ್ನ ಮತ್ತೊಂದು ಹೈಲೆಟ್. ಕೆಜಿಎಫ್ ಧೂಳಿನಲ್ಲಿ ಶೂಟ್ ಮಾಡಿರೋ ವಿಷ್ಯುವಲ್ಸ್ ಸಿಂಪ್ಲಿ ಸೂಪರ್. ಯಶ್ ಲುಕ್, ಬಾಡಿ ಲಾಂಗ್ವೇಜ್, ಆ್ಯಕ್ಷನ್, ಸ್ಕ್ರೀನ್ ಪ್ರಸೆನ್ಸ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. ವಸಿಷ್ಠ ಎನ್ ಸಿಂಹ, ಅತ್ಯುತ್ ಕುಮಾರ್, ನಾಯಕಿ ಶ್ರೀನಿಧಿ ಶೆಟ್ಟಿ ಹೀಗೆ ಬಂದು ಹಾಗೆ ಹೋಗ್ತಾರೆ. ಯೂಟ್ಯೂಬ್ಗೆ ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ಸಾವಿರಾರು ವೀವ್ಸ್ ಸಾಧಿಸಿ, ಕೆಜಿಎಪ್ ಟ್ರೈಲರ್ ಟ್ರೆಂಡಿಂಗ್ನಲ್ಲಿದೆ. ಡಿಸೆಂಬರ್ 21ಕ್ಕೆ ವಿಶ್ವದಾದ್ಯಂತ ಏಕಕಾಲಕ್ಕೆ ಕೆಜಿಎಫ್ ಸಿನಿಮಾ ತೆರೆಗಪ್ಪಳಿಸಲಿದೆ.

Leave a Reply