ಯಡಿಯೂರಪ್ಪಗೆ ಯಡ್ಡಿ ಖಾನ್​ ಎಂದು ಕರೆಯಬೇಕಾ? ‘ಸಿದ್ದು ಖಾನ್’ ಎಂದ ಬಿಜೆಪಿ ವಿರುದ್ಧ ಸಿದ್ರಾಮಯ್ಯ ಗುಡುಗು!

ಡಿಜಿಟಲ್ ಕನ್ನಡ ಟೀಮ್:

ವಿವಾದಿತ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಬೆಂಬಲ ನೀಡುತ್ತಿರುವ ಸಿದ್ದರಾಮಯ್ಯ ಅವರನ್ನು ಟೀಕೆ ಮಾಡುತ್ತಾ ‘ಸಿದ್ದು ಖಾನ್’ ಎಂದು ಕರೆದಿರುವ ಬಿಜೆಪಿ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ.

ತಮ್ಮ ವಿರುದ್ಧದ ಟೀಕೆಯ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಹೇಳಿದ್ದಿಷ್ಟು…

ಟಿಪ್ಪು ಟೋಪಿ ಧರಿಸಿದ್ದ ಯಡಿಯೂರಪ್ಪನವರನ್ನು ಯಡ್ಡಿ ಖಾನ್​ ಎಂದು ಕರೆಯಬೇಕಾ? ಜಗದೀಶ್​ ಶೆಟ್ಟರ್​ ಅವರು ಯಾವ ಖಾನ್​? ಈ ಹಿಂದೆ ಇವರೇ ಟಿಪ್ಪು ಸುಲ್ತಾನ್​ ಟೋಪಿ ಧರಿಸಿ ಕಾರ್ಯಕ್ರಮದಲ್ಲಿ ಮೆರೆದಿದ್ದಾರೆ. ಈಗ ನನ್ನನ್ನು ಸಿದ್ದು ಖಾನ್​ ಎಂದು ಹೇಳುತ್ತಿದ್ದಾರೆ. ಇಂತಹ ಎರಡು ನಾಲಿಗೆಯವರಿಗೆ ನಾನು ಏನು ಹೆಸರಿಡಬೇಕು? ಬಿಜೆಪಿಯವರು ಗೋಮುಖ ವ್ಯಾಘ್ರಗಳು. ಬಿಜೆಪಿ ಪಕ್ಷದವರಿಗೆ ಎರಡೆರಡು ನಾಲಿಗೆಯಿದೆ.

ಸಂವಿಧಾನದ ಪರವಾಗಿರುವುದು ಮತಾಂಧತನವಾ? ನಾನು ಜಾತ್ಯತೀತನಾದ್ದರಿಂದ ಬಿಜೆಪಿಗೆ ಟಾರ್ಗೆಟ್ ಆಗಿದ್ದೇನೆ. ಇನ್ನು ಸಿಎಂ, ಡಿಸಿಎಂ ಗೈರು ಪೂರ್ವನಿರ್ಧರಿತವಾಗಿದೆ. ಅದಕ್ಕೆಲ್ಲ ವಿಶೇಷ ಅರ್ಥ ಕಲ್ಪಿಸುವುದು ಬೇಡ.’

Leave a Reply