ರಾತ್ರಿ ಪೂರ್ತಿ ರೆಡ್ಡಿ ವಿಚಾರಣೆ, CCB ಅಧಿಕಾರಿಗಳು ಕೇಳಿದ ಪ್ರಶ್ನೆಗಳು ಯಾವುವು?

ಡಿಜಿಟಲ್ ಕನ್ನಡ ಟೀಮ್:

ಆ್ಯಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ರಾತ್ರಿ ಇಡೀ ಗಣಿ ಧಣಿ ಜನಾರ್ದನ ರೆಡ್ಡಿ ಅವರ ವಿಚಾರಣೆ ನಡೆಸಿದ್ದಾರೆ. ಜನಾರ್ದನ ರೆಡ್ಡಿ ಅವರು ಸಿಸಿಬಿ ಕಚೇರಿಗೆ ಆಗಮಿಸ್ತಾರೆ ಅನ್ನೋ ವಿಚಾರ ಗೊತ್ತಾಗ್ತಿದ್ದ ಹಾಗೆ ಸಿಸಿಬಿ ಅಧಿಕಾರಿಗಳ ತಂಡ ಪ್ರಶ್ನೆಗಳನ್ನು ರೆಡಿ ಮಾಡಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಇಲ್ಲೀವರೆಗೂ ಫರೀದ್ ಹಾಗೂ ಅಲಿಖಾನ್ ಹೇಳಿರುವ ಮಾತುಗಳ ಮೇಲೆ ಪ್ರಶ್ನೆಗಳನ್ನು ಮೊದಲಿನ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆ ಪ್ರಶ್ನಾವಳಿ ಡಿಜಿಟಲ್ ಕನ್ನಡಕ್ಕೂ ಸಿಕ್ಕಿದ್ದು, ಮೂವತ್ತಕ್ಕೂ ಹೆಚ್ಚು ಪ್ರಶ್ನೆಗಳ ಪಟ್ಟಿ ಇಲ್ಲಿದೆ. ಈ‌ ಪ್ರಶ್ನೆಗಳಲ್ಲಿ ಪ್ರಕರಣ ಸಂಬಂಧ ಎಲ್ಲಾ ಆಯಾಮಗಳಲ್ಲೂ ಉತ್ತರ ಪಡೆಯಬಹುದಾಗಿದೆ. ಈ ಪ್ರಶ್ನೆಗಳ ಜೊತೆಗೆ ಜನಾರ್ದನ ರೆಡ್ಡಿ ಕೊಡಬಹುದಾದ ಪ್ರಶ್ನೆಗಳಿಗೆ ಮರುಪ್ರಶ್ನೆಗಳನ್ನೂ ಕೇಳಲಾಗಿದೆ.

 • ನಿಮಗೆ ಆ್ಯಂಬಿಡೆಂಟ್ ಕಂಪನಿ ಗೊತ್ತಿದೆಯಾ..?
 • ನಿಮಗೂ ಫರೀದ್‌ಗೂ ಯಾವ ರೀತಿಯ ಸಂಬಂಧ ಇದೆ..!?
 • ನೀವು ತಾಜ್ ವೆಸ್ಟ್ ಹೋಟೆಲ್‌ನಲ್ಲಿ ಇದ್ದದ್ದು ನಿಜನಾ?
 • ಹಾಗಾದ್ರೆ ನಿಮ್ಮ ಜೊತೆ ಯಾರ‌್ಯಾರು ಇದ್ದರು?
 • ಹೋಟೆಲ್‌ಗೆ ಹೋಗಿದ್ದರೆ ಯಾವ ವಿಷಯದ ಮೇಲೆ ಅಲ್ಲಿಗೆ ತೆರಳಿದ್ರಿ..!?
 • ಫರೀದ್ ಪಂಚನಾಮೆಯಲ್ಲಿ ಕೊಟ್ಟಿರುವ ಸ್ಟೇಟ್ ಮೆಂಟ್ ನಿಜನಾ..!?
 • ಹೋಟೆಲ್‌ನಲ್ಲಿ ನೀವು ನಡೆಸಿದ ಮಾತುಕತೆ ನಿಜನಾ..!?
 • ನಿಮಗೆ ಇಡಿ ಅಧಿಕಾರಿಗಳ ಪರಿಚಯ ಇದೆಯಾ..!?
 • ಪರಿಚಯ ಇದ್ದರೆ ಆ ಅಧಿಕಾರಿ ಯಾರು..!?
 • ಆ್ಯಂಬಿಡೆಂಟ್ ಕಂಪನಿ ಬಗ್ಗೆ ಸಂಪೂರ್ಣ ಮಾಹಿತಿ ಇದೆಯಾ..!?
 • ಫರೀದ್ ಎಷ್ಟು ವರ್ಷದಿಂದ ನಿಮಗೆ ಪರಿಚಯ..!?
 • ಆಲಿಖಾನ್‌ಗೂ ಫರೀದ್‌ಗೂ ಪರಿಚಯ ಇರುವುದರ ಬಗ್ಗೆ ನಿಮಗೆ ಮಾಹಿತಿ ಇತ್ತಾ..!?
 • ಆಲಿಖಾನ್ ನಡೆಸುವ ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ಇದೆಯಾ..!?
 • ಆ್ಯಂಬಿಡೆಂಟ್‌ ಪ್ರಕರಣದಲ್ಲಿ ಫರೀದ್‌ನನ್ನು ನೀವು ಬಚಾವ್ ಮಾಡಿದ್ದು ನಿಜನಾ..!?
 • ಕೋಟಿ ಕೋಟಿ ಹಣವನ್ನು ನೀವು ಡೀಲಿಂಗ್ ಮಾಡಿದ್ದು ನಿಜನಾ..!?
 • ಚಿನ್ನದ ವ್ಯಾಪಾರಿ ರಮೇಶ್ ಮೂಲಕ ಹಣ ಟ್ರಾನ್ಸ್‌ಫರ್ ಮಾಡು ಎಂದಿದ್ದು ಸತ್ಯನಾ..?
 • ರಮೇಶ್‌ಗೂ ನಿಮಗೂ ಯಾವ ರೀತಿಯ ಸಂಬಂಧ ಇದೆ.!?
 • ಜಾರಿ ನಿರ್ದೇಶನಾಲಯದ ಕೇಸ್ ಮುಚ್ಚಿ ಹಾಕುವ ಬಗ್ಗೆ ಮಾತನಾಡಿದ್ದು ನಿಜವೇ..?
 • ಈ ಡೀಲ್‌ನಲ್ಲಿ ನೀವು ಮೊದಲಿಗೆ ಎರಡು ಕೋಟಿ ತೆಗೆದುಕೊಂಡ್ರಾ..!?
 • ಈ ಪ್ರಕರಣದಲ್ಲಿ ಕೇಳಿಬಂದಿರುವ 57 ಕೆಜಿ ಚಿನ್ನದ ಗಟ್ಟಿ ವಿಚಾರ ಏನು..!?
 • 57 ಕೆಜಿ ಚಿನ್ನದ ಗಟ್ಟಿ ವಿಚಾರ ಯಾಕೆ ಬಂತು..?
 • ಚಿನ್ನವನ್ನ ಹೇಗೆ ಹಸ್ತಾತಂರ ಮಾಡಿಕೊಂಡ್ರಿ..?
 • ಬ್ರಿಜೇಶ್ ರೆಡ್ಡಿ ಹಾಗೂ ರಮೇಶ್ ನಿಮಗೆ ಹೇಗೆ ಪರಿಚಯ..?
 • ನಿಮ್ಮ ವ್ಯವಹಾರದಲ್ಲಿ ಬ್ರಿಜೇಶ್ ರೆಡ್ಡಿ ಪಾತ್ರ ಏನಿದೆ..?
 • ಸದ್ಯಕ್ಕೆ 57 ಕೆಜಿ ಚಿನ್ನವನ್ನು ಎಲ್ಲಿ ಅಡಗಿಸಿ ಇಟ್ಟಿದ್ದೀರಿ..?
 • ಮೊದಲಿಗೆ ನಿಮ್ಮನ್ನು ಭೇಟಿ ಮಾಡಿದ್ದ ಫರೀದ್ ನಿಮ್ಮ ಬಳಿ ಏನು ಹೇಳಿದ್ದ..?
 • ಫರೀದ್‌ಗೆ ನೀವು ಯಾವ ರೀತಿಯ ಆಫರ್ ಕೊಟ್ಟಿದ್ರಿ..?
 • ನಿಮಗೂ ಫರೀದ್‌ಗೂ ಲಿಂಕ್ ಬೆಳಿಸಿದ್ದು ಯಾರು..?
 • ಆಲಿಖಾನ್ ಬಳಿ ಸಿಕ್ಕಿರುವ ಜೀವಂತ ಗುಂಡಿನ ಬಗ್ಗೆ ನಿಮಗೇನಾದರು ಗೊತ್ತಾ..?
 • ಆಂಬಿಡೆಂಟ್ ಕಂಪನಿ ಜೊತೆಗೆ ಸದ್ಯಕ್ಕೆ ನೀವು ರೀತಿ ಲಿಂಕ್ ಇಟ್ಟುಕೊಂಡಿದ್ದೀರಾ..?

ಹೀಗೆ ಒಂದೇ ಸಮನೆ ಜನಾರ್ದನ ರೆಡ್ಡಿಗೆ ಪ್ರಶ್ನೆಗಳ ಸುರಿಮಳೆ ಸುರಿಸಲಾಗಿದೆ. ಈ ರೀತಿ‌ ಪ್ರಶ್ನೆಗಳು ಎದುರಾಗಲಿವೆ ಅನ್ನೋ ಬಗ್ಗೆ ಮೊದಲೇ ಅರಿತಿದ್ದ ಜನಾರ್ದನ ರೆಡ್ಡಿ ಕೂಡ ಸೂಕ್ತ & ಜಾಣ್ಮೆಯ ಉತ್ತರವನ್ನೇ ಕೊಟ್ಟಿದ್ದಾರೆ. ಆದ್ರೆ ಉತ್ತರಕ್ಕೆ ಎದುರಾಗುವ ಮರು ಪ್ರಶ್ನೆಗೆ ಉತ್ತರ ಕೊಡುವಲ್ಲಿ ಸ್ವಲ್ಪ ಎಡವಿದ್ದಾರೆ ಎನ್ನಲಾಗಿದೆ.

Leave a Reply