ಸ್ನೇಹಿತನ ಜೊತೆಗೆ ಪ್ರಯಾಣ ಬೆಳೆಸಿದ ಅನಂತ ಕುಮಾರ್

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ 59 ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸತತ 6 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅನಂತ್ ಕುಮಾರ್, 1996 ರಿಂದ ಸೋಲನ್ನೇ ಅರಿಯದ ಸರದಾರ ಆಗಿದ್ದರು. ಅನಂತ್ ಕುಮಾರ್ ಆರ್‌ಎಸ್‌ಎಸ್‌ ನಿಂದ ಬಂದವರಾಗಿದ್ದು, ಎಲ್ಲಾ ತೀರ್ಮಾನಗಳನ್ನು ಕೇಶವಕೃಪಾ ಮೂಲದಿಂದಲೇ ತೆಗೆದುಕೊಳ್ಳುತ್ತಿದ್ದರು. ಇವರ ಹಾದಿಯಲ್ಲೇ‌ ಸಾಗಿ ಬಂದವರು ಎಂದರೆ ಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿವಂಗತ ವಿಜಯ್ ಕುಮಾರ್. ಸಜ್ಜನ, ಪ್ರಾಮಾಣಿಕತೆ ಮೂಲಕವೇ ಹೆಸರುವಾಸಿಯಾಗಿದ್ದ ವಿಜಯ್ ಕುಮಾರ್ ಕಳೆದ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕವಷ್ಟೇ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಇದೀಗ ನಮ್ಮನ್ನು ಅಗಲಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೂ 59 ವರ್ಷ ವಯಸ್ಸು.

ಜಯನಗರ ವಿಧಾನಸಭಾ ಕ್ಷೇತ್ರ ಅಂದರೆ ಅನಂತ್ ಕುಮಾರ್ ಅವರಿಗೂ ಲೋಕಸಭಾ ಕ್ಷೇತ್ರ. ಹಾಗಾಗಿ ಎಲ್ಲಾ ಕಾರ್ಯಗಳನ್ನು ಒಟ್ಟೊಟ್ಟಿಗೆ ಮಾಡುತ್ತಾ, ಒಂದೇ ಹಾದಿಯಲ್ಲಿ ಸಾಗುತ್ತಿದ್ದವರು ವಿಜಯ್ ಕುಮಾರ್ ಮತ್ತು ಅನಂತ್ ಕುಮಾರ್. ಕ್ಷೇತ್ರದಲ್ಲಿ ಯಾವುದೇ ಒಂದು ಕಾರ್ಯಕ್ರಮ ನಡೆದರೂ ಇಬ್ಬರೂ ಹಾಜರಿ ಹಾಕುತ್ತಿದ್ರು. ಅದೇ ರೀತಿ ಖಾಸಗಿ ಕಾರ್ಯಕ್ರಮವಾದರೂ ಸರಿ, ಒಬ್ಬರು ಒಂದು ಡೇಟ್‌ಗೆ ಒಪ್ಪಿಕೊಂಡಿದ್ದಾರೆ ಎಂದ ಮೇಲೆ ಇನ್ನೊಬ್ಬರು ಪ್ರತಿ ಮಾತನಾಡದೆ ಒಪ್ಪಿಕೊಳ್ಳುತ್ತಿದ್ದರು. ಇದೇ ರೀತಿ‌ ಇಬ್ಬರು ನಾಯಕರಲ್ಲೂ‌ ಸಾಕಷ್ಟು‌ ಸಾಮ್ಯತೆಗಳಿದ್ದವು. ಇದೀಗ ಸಾವಿನಲ್ಲೂ ಈ ಇಬ್ಬರು ಮೇರು ನಾಯಕರು ಸಾಮ್ಯತೆ ಉಳಿಸಿಕೊಂಡಿದ್ದಾರೆ. ಒಬ್ಬರು ಸಾವನ್ನಪ್ಪಿದ ಕೆಲವೇ ತಿಂಗಳುಗಳಲ್ಲಿ ಮತ್ತೊಬ್ಬರು ತಮ್ಮ ಬಾಳ ಪಯಣವನ್ನು ಮೊಟಕು ಮಾಡಿ ಸ್ನೇಹಿತನ ಸಂಗಡ ಹೊರಟಿದ್ದಾರೆ. ಎಲ್ಲಕ್ಕಿಂತಲೂ ನಮ್ಮ ಸ್ನೇಹವೇ ಮುಖ್ಯ ಎಂದಿದ್ದಾರೆ.

ಅನಂತ್ ಕುಮಾರ್ ಓರ್ವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ನಾಯಕ. ಹುಟ್ಟು ಹೋರಾಟದ ಮೂಲಕ ಪ್ರಚಲಿತಕ್ಕೆ ಬಂದ ಅನಂತ್ ಕುಮಾರ್ ಹಣಬಲ, ತೋಳ್ಬಲ ಪ್ರದರ್ಶನ ಮಾಡಿ ರಾಜಕಾರಣ ಮಾಡಿದವರಲ್ಲ. ಹಣ ಹೆಂಡ ಹಂಚುವ ಮೂಲಕ ಮತಗಳನ್ನುಬಕೊಂಡು ಕೊಂಡವರೂ ಅಲ್ಲ. ರಾಜಕಾರಣದಲ್ಲಿ ತಮ್ಮದೇ ಹಾದಿಯಲ್ಲಿ ಸಾಗಿದ ಇವರಿಗೆ ಮತದಾರರ ಶ್ರೀರಕ್ಷೆ ಸದಾ ಇತ್ತು ಅನ್ನೋದೇ ಆಶ್ಚರ್ಯ. ಇದೇ ರೀತಿ ಮಾಜಿ ಶಾಸಕ ದಿವಂಗತ ವಿಜಯ್ ಕುಮಾರ್ ಅವರ ಹಾದಿಯೂ ತುಂಬಾ ಭಿನ್ನವಾಗಿಯೇನೂ ಇಲ್ಲ. ಸದಾ ಲವಲವಿಕೆಯಿಂದ ಇರುತ್ತಿದ್ದ ವಿಜಯ್ ಕುಮಾರ್ ಜನರ ಪ್ರೀತಿಗಿಂತ ಹೆಚ್ಚಿನದೇನು ಸಂಪಾದಿಸಿರಲಿಲ್ಲ. ಈಗಿನ ರಾಜಕಾರಣಿಗಳ ನಡುವೆ ಭಿನ್ಮತೆ ಉಳಿಸಿಕೊಂಡಿದ್ದರು ಎಂದು ಹೇಳಬಹುದು. ಅನಂತ್ ಕುಮಾರ್ ಹಾಗೂ ವಿಜಯ್ ಕುಮಾರ್ ನಡುವೆ ಒಂದೇ ಒಂದು ಭಿನ್ನವಾದ ಅಂಶ ಎಂದರೆ ವಿಜಯ್ ಕುಮಾರ್ ಮದುವೆ ಆಗಿರಲಿಲ್ಲ, ಅನಂತ್ ಕುಮಾರ್ ಮದುವೆಯಾಗಿದ್ದು, ಮಕ್ಕಳಿದ್ದಾರೆ. ಇವರಿಬ್ಬರ ಅಸಲಿ ಸ್ನೇಹ ಎಲ್ಲಡೆಯೂ ಕಾಣುತ್ತಿತ್ತು. ಇದೀಗ ಸಾವನಲ್ಲೂ ಒಂದಾಗಿದ್ದು, ಒಂದೇ ವರ್ಷ ಒಂದೇ ವಯಸ್ಸು ಎನ್ನುವಂತಾಗಿರುವುದು ಕಾಕತಾಳಿಯವೋ.‌.? ಸ್ನೇಹವೋ ಆ ಭಗವಂತನೇ ಬಲ್ಲ..

Leave a Reply