ಸದಾನಂದಗೌಡರಿಗೆ ಅನಂತ ಕುಮಾರ್ ಖಾತೆ!

ಡಿಜಿಟಲ್ ಕನ್ನಡ ಟೀಮ್:

ಅನಾರೋಗ್ಯದಿಂದ ಮೃತಪಟ್ಟ ಕೇಂದ್ರ ಸಚಿವ ಅನಂತ್​ ಕುಮಾರ್​ ಅವರು ನಿಭಾಯಿಸುತ್ತಿದ್ದ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವಾಲಯದ ಜವಾಬ್ದಾರಿಯನ್ನು ಡಿ.ವಿ.ಸದಾನಂದ ಗೌಡರ ಹೆಗಲಿಗೆ ನೀಡಲಾಗಿದೆ.

ಮಂಗಳವಾರ ಮಧ್ಯಾಹ್ನ ಅನಂತ್ ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದ ನಂತರ ಪ್ರಧಾನಿ ನರೇಂದ್ರ ಮೋದಿ ನಮ್ಮ ಸಂಪುಟದಲ್ಲಿ ಅನಂತ್​ ಕುಮಾರ್​ ಇ ವಹಿಸುತ್ತಿದ್ದ ಕಥೆಗಳನ್ನು ಇಬ್ಬರು ಸಚಿವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿದ್ದಾರೆ. ಆ ಪೈಕಿ ಕರ್ನಾಟಕದವರೇ ಆದ ಯೋಜನೆ ಮತ್ತು ಸಾಂಖ್ಯಿಕ ಖಾತೆಯನ್ನು ನಿರ್ವಹಿಸುತ್ತಿದ್ದ ಡಿ ವಿ ಸದಾನಂದ ಗೌಡರಿಗೆ ರಾಸಾಯನಿಕ, ರಸಗೊಬ್ಬರ ಖಾತೆ ನೀಡಲಾಗಿದೆ.

ಇನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್​ ರಾಜ್​, ಗಣಿ ಖಾತೆಗಳನ್ನು ನಿರ್ವಹಿಸುತ್ತಿರುವ ನರೇಂದ್ರ ಸಿಂಗ್​ ತೋಮರ್‌ಗೆ ಸಂಸದೀಯ ವ್ಯವಹಾರಗಳ ಖಾತೆಯನ್ನು ನೀಡಲಾಗಿದೆ. ಈ ಖಾತೆ ಹಂಚಿಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಶಿಫಾರಸ್ಸಿಗೆ ರಾಷ್ಟಪತಿ ರಾಮನಾಥ್​ ಕೋವಿಂದ್​ ಸಹಿ ಹಾಕಿದ್ದಾರೆ.

Leave a Reply