ಒಂದು ದಿನ ‘ಕುರುಕ್ಷೇತ್ರ’ ಉಚಿತ ಪ್ರದರ್ಶನ..!

ಡಿಜಿಟಲ್ ಕನ್ನಡ ಟೀಮ್:

ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ರಿಲೀಸ್‌ ಮಾಡೋದಕ್ಕೆ ಮುಹೂರ್ತ ಕೂಡಿಬಂದಿಲ್ಲ. ಆದ್ರೆ ನಿರ್ಮಾಪಕ ಕಂ ಶಾಸಕ ಮುನಿರತ್ನ ಒಂದು ದಿನ ಉಚಿತವಾಗಿ ಪ್ರದರ್ಶನ ಮಾಡುವ ವಾಗ್ದಾನ ಮಾಡಿದ್ದಾರೆ.

ಪತ್ರಕರ್ತ ಕಂ ನಿರ್ದೇಶಕ ಚಕ್ರವರ್ತಿ‌ ಚಂದ್ರಚೂಡ್ ನೇತೃತ್ವದಲ್ಲಿ ಪೀಪಲ್ಸ್ ಫಾರ್ ಪೀಪಲ್ ಅನ್ನೋ ಸ್ನೇಹಿತರ ಬಳಗ ನವೆಂಬರ್ 11 ರಿಂದ 16ರ ತನಕ ‘ಕೊಡಗಿಗಾಗಿ ರಂಗಸಪ್ತಾಹ’ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ರಂಗಸಪ್ತಾಹದಲ್ಲಿ ಸಂಗೀತ ಹಾಗೂ ನಾಟಕ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೊಡಗಿನಲ್ಲಿ ನಿರಾಶ್ರಿತರಾದ ಕುಟುಂಬಗಳು ತಮ್ಮ ನೋವನ್ನು ತೋಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಈ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಶಾಸಕ ಕಂ ಕುರುಕ್ಷೇತ್ರ ಚಿತ್ರದ ನಿರ್ಮಾಪಕ ಮುನಿರತ್ನ ಭಾಗಿಯಾಗಿದ್ರು. ಈ ವೇಳೆ ನಿರ್ಮಾಪಕ ಮುನಿರತ್ನ ಉಚಿತ ಪ್ರದರ್ಶನದ ಘೋಷಣೆ ಮಾಡಿದ್ರು.

ಕುರುಕ್ಷೇತ್ರ ಸಿನಿಮಾ ಯಾವತ್ತು ರಿಲೀಸ್ ಆಗುತ್ತೋ ಅವತ್ತಿನ ಹಿಂದಿನ ದಿನ ಒಂದು ಶೋ ಉಚಿತ ಪ್ರದರ್ಶನದ ಘೋಷಣೆ ಮಾಡಿದ್ರು. ಉಚಿತ ಪ್ರದರ್ಶನದ ಆಯೋಜನೆ ಅಂದ್ರೆ ಪೀಪಲ್ಸ್ ಫಾರ್ ಪೀಪಲ್ ಸಂಸ್ಥೆ ಕೊಡಗಿಗಾಗಿ ಮಿಡಿಯುತ್ತಿರೋ ಹಿನ್ನೆಲೆಯಲ್ಲಿ ಒಂದು ಶೋ ಪ್ರದರ್ಶನ ಮಾಡಿ ಅಲ್ಲಿ ಸಂಗ್ರಹವಾಗುವ ಹಣವನ್ನು ಕೊಡಗಿಗಾಗಿ ಬಳಸಲು ಅನುಕೂಲ ಮಾಡಿಕೊಡ್ತೇನೆ ಎಂದು ಘೋಷಣೆ ಮಾಡಿದ್ರು. ದರ್ಶನ್ ಅಭಿಮಾನಿಗಳು ಚಿತ್ರ ಬಿಡುಗಡೆ ಆಗುವ ಒಂದು ದಿನ ಮುಂಚಿತವಾಗಿ ಸಿನಿಮಾವನ್ನು‌ ಕಣ್ತುಂಬಿಕೊಳ್ಳಬಹುದು. ಆ ಸಿನಿಮಾ ಪ್ರದರ್ಶನದ ಟಿಕೆಟ್ ದರವನ್ನು ನಿಗದಿ ಮಾಡುವ ವಿವೇಚನೆಯನ್ನು ಪೀಪಲ್ಸ್ ಫಾರ್ ಪೀಪಲ್ ಸಂಸ್ಥೆಗೆ ಬಿಟ್ಟುಬಿಟ್ಟಿದ್ದಾರೆ. ಒಂದು ದಿನ ಸಿನಿಮಾವನ್ನು ಉಚಿತವಾಗಿ ಪ್ರದರ್ಶನ ಮಾಡ್ತಾರೆ. ಆದ್ರೆ ವೀಕ್ಷಕರು‌ ಮಾತ್ರ ಹಣ ಕೊಟ್ಟು ನೋಡಬೇಕು. ಆ ಹಣ ನಮ್ಮ ಕೊಡಗಿಗೆ ಸಹಾಯವಾಗಲಿದೆ. ನೀವೇನಾದ್ರು ಸಿನಿಮಾ ನೋಡಲು ಮನಸ್ಸಿದ್ರೆ ನೀವು ಕೊಡಗಿಗಾಗಿ ನೋಡಿದ್ರೆ ಉತ್ತಮ ಕೆಲಸಕ್ಕೆ ಕೈಜೋಡಿಸಿದ ತೃಪ್ತಿಯೂ ಸಿಗಲಿದೆ.

Leave a Reply