ಪ್ರೇಮ್ ಇನ್ಮುಂದೆ ಯಾವ್ದೆ ಸಿನಿಮಾ ಡೈರೆಕ್ಟ್ ಮಾಡ್ಬೇಡಿ ಪ್ಲೀಸ್..!

ಶೀರ್ಷಿಕೆ ನೋಡಿ ಕನ್ಫೂಸ್ ಆಗ್ಬೇಡಿ. ಇದು ನೆಟ್ಟಿಗರು ನಿರ್ದೇಶಕ ಪ್ರೇಮ್ ಅವರಲ್ಲಿ ಮಾಡಿಕೊಳ್ತಿರೋ ಮನವಿ. ದಸರಾ ಸಂಭ್ರಮದಲ್ಲಿ ಬಂದ ದಿ ವಿಲನ್ ಸಿನಿಮಾ ಮಾಡಿದ ಸದ್ದು ಗದ್ದಲ ಗೊತ್ತೇಯಿದೆ. ಸುದೀಪ್, ಶಿವಣ್ಣ ಅಭಿನಯದ ಈ ಮಲ್ಟಿಸ್ಟಾರರ್ ಸಿನಿಮಾ ಹುಟ್ಟಿಸಿದ ನಿರೀಕ್ಷೆ, ಬಿಡುಗಡೆ ನಂತ್ರ ನಿರೀಕ್ಷೆ ತಲುಪದೇ ಇದ್ದಿದ್ದು, ಎಲ್ಲವೂ ಕಣ್ಣ ಮುಂದಿದೆ. 25 ದಿನ ಪೂರೈಸಿದ ದಿ ವಿಲನ್ ಸಿನಿಮಾ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಇಂತಹ ಹೊತ್ತಲ್ಲಿ ಪ್ರೇಮ್ ಮಾಡಿರೋ ಟ್ವೀಟ್ ಗೆ ನೆಟ್ಟಿಗರ ರಿಪ್ಲೇ ನೋಡಿದ್ರೆ ಅಚ್ಚರಿಯಾಗುತ್ತದೆ.

ಇತ್ತೀಚೆಗೆ ಸುದೀಪ್, ದಿ ವಿಲನ್ ಚಿತ್ರತಂಡದ ಮೇಲೆ ಮುನಿಸಿಕೊಂಡು ಟ್ವೀಟ್ ಮಾಡಿದ್ದರು. ಅದರಿಂದ ಎಚ್ಚೆತ್ತ ಪ್ರೇಮ್, ದಿ ವಿಲನ್ ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ರು. ಸಿನಿಮಾ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ, ಐವತ್ತನೇ ದಿನದತ್ತ ಸಾಗಿದೆ, ಶೀಘ್ರದಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡೋದಾಗಿ ಪ್ರೇಮ್ ಬರೆದುಕೊಂಡಿದ್ದರು.

ಪ್ರೇಮ್, ಟ್ವೀಟ್ ಗೆ ಸಾಕಷ್ಟು ಪ್ರತಿಕ್ರಿಯೆ ಬಂದಿವೆ. ಅದರಲ್ಲಿ ಸಾಕಷ್ಟು ಜನ ದಿ ವಿಲನ್ ಸಿನಿಮಾ ಮತ್ತು ಪ್ರೇಮ್ ನಿರ್ದೇಶನದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಟಿಕೆಟ್ ದರ ಹೆಚ್ಚಿಸಿದ್ದು, ಸಿನಿಮಾ ಇಷ್ಟು ಕೋಟಿ ಗಳಿಸಿದೆ, ಅಷ್ಟು ಕೋಟಿ ಗಳಿಸಿದೆ ಅನ್ನೋ ಮಾತುಗಳಿಗೆ ತಿರುಗೇಟು ನೀಡಿದ್ದಾರೆ. ಬಹಿರಂಗವಾಗಿಯೇ ತಮ್ಮ ಬೇಸರ ತೋಡಿಕೊಂಡಿರೊ ಕೆಲ ಅಭಿಮಾನಿಗಳು ಇನ್ಮುಂದೆ ನೀವು ಸಿನಿಮಾ ಮಾಡಲೇಬೇಡಿ, ನಿಮ್ಮ ನಿರ್ದೇಶನಕ್ಕೆ ಒಂದು ನಮಸ್ಕಾರ, ಬಾಹುಬಲಿ, ಕೆಜಿಎಫ್ ರೀತಿಯ ಸಿನಿಮಾಗಳನ್ನ ನೋಡಿ ಕಲಿಯಿರಿ ಅಂತ ಉಪದೇಶವನ್ನೂ ಮಾಡಿದ್ದಾರೆ. ಇದಕ್ಕೆಲ್ಲಾ ಪ್ರೇಮ್ ಯಾವ ರೀತಿ ಉತ್ತರಿಸ್ತಾರೋ ನೋಡ್ಬೇಕು.

Leave a Reply