ಚುನಾವಣೆ ಎಫೆಕ್ಟ್: ಟಿವಿ ಜಾಹೀರಾತು ನೀಡುವುದರಲ್ಲಿ ದೈತ್ಯ ಕಂಪೆನಿಗಳನ್ನೇ ಮೀರಿಸಿದ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್:

ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ನಿರ್ಧರಿಸಿರುವ ಬಿಜೆಪಿ ಮತದಾರರನ್ನು ಸೆಳೆಯಲು ಜಾಹೀರಾತಿನ ಹೊಳೆ ಹರಿಸುತ್ತಿದೆ. ಪರಿಣಾಮ ಟಿವಿ ವಾಹಿನಿಗಳಲ್ಲಿ ಖ್ಯಾತ ಸೋಪು, ಟೂತ್ ಪೇಸ್ಟ್ ಕಂಪೆನಿಗಳ ಜಾಹೀರಾತಿಗಿಂತ ಬಿಜೆಪಿ ಜಾಹೀರಾತು ಹೆಚ್ಚಾಗಿವೆ.

ಹೌದು, ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ನವೆಂಬರ್ 10ರಿಂದ 16ರವರಿಗೆ ಟಿವಿಯಲ್ಲಿ ಪ್ರಸಾರವಾದ ಜಾಹೀರಾತುಗಳ ಬಗ್ಗೆ ಬಾರ್ಕ್ ಸಂಸ್ಥೆ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ನೆಟ್ ಫ್ಲಿಕ್ಸ್, ಸಂತೂರ್, ಡೆಟಾಲ್, ಕೋಲ್ ಗೇಟ್ ಜಾಹೀರಾತುಗಳಿಗಿಂತ ಬಿಜೆಪಿ ಜಾಹೀರಾತುಗಳು ಹೆಚ್ಚಾಗಿದೆ.

ಈಗಾಗಲೇ ಮೋದಿ ಸರಕಾರ ತನ್ನ ನಾಲ್ಕುವರೆ ವರ್ಷಗಳ ಆಡಳಿತದ ವೇಳೆ ಮಾಧ್ಯಮಗಳ ಜಾಹೀರಾತು ಪ್ರಚಾರಕ್ಕಾಗಿಯೇ 4300 ಕೋಟಿ ವ್ಯಯಿಸಿರುವುದನ್ನು ವಿರೋಧ ಪಕ್ಷಗಳು ಟೀಕಿಸುತ್ತಿವೆ.

ಯಾರಿಂದ ಎಷ್ಟು ಜಾಹೀರಾತು?

ಬಾರ್ಕ್ ವರದಿಯ ಪ್ರಕಾರ, ನ.10 ರಿಂದ 16ರ ಅವಧಿಯಲ್ಲಿ ಬಿಜೆಪಿ 22,099 ಜಾಹೀರಾತು ನೀಡಿ ಅಗ್ರ ಸ್ಥಾನ ಪಡೆದರೆ, ನೆಟ್‌ಫ್ಲಿಕ್ಸ್‌ (12,951), ಟ್ರಿವಾಗೊ (12,795), ಸಂತೂರ್ (11,222), ಡೆಟಾಲ್ ಲಿಕ್ವಿಡ್ (9487), ವೈಪ್ (9082), ಕೋಲ್ಗೆಟ್ (8930), ಡೆಟಾಲ್ ಟಾಯ್ಲೆಟ್ ಸೋಪ್ (8633), ಅಮೇಜಾನ್ ಪ್ರೈಮ್ (8031), ಆಯುರ್ ಫೇಸ್ ಕ್ರೀಂ (7692) ನಂತರದ ಸ್ಥಾನ ಪಡೆದಿವೆ.

Leave a Reply