ಬೆಳಗಾವಿ ಕಬ್ಬು ಬೆಳೆಗಾರರ ಮನವೊಲಿಸಿದ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್:

ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆ ಹರಿಸಲು ಸರಕಾರ ಬದ್ದವಾಗಿದೆ. ಸಕ್ಕರೆ ಕಾರ್ಖಾನೆ ಯಾರದ್ದೆ ಇದ್ದರು ಅವರಿಂದ ಬಾಕಿ ಉಳಿಸಿಕೊಂಡ ಹಣವನ್ನು ಜಿಲ್ಲಾಧಿಕಾರಿ ಕೊಡಿಸಬೇಕೆಂದು ಸರಕಾರ ಸೂಚಿಸಲಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಬ್ಬಿಗೆ ಬಾಕಿ‌ ಹಣ ನೀಡುವಂತೆ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ‘ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಯಾವುದೇ ಕಾರಣಕ್ಕೂ ಸುವರ್ಣ ವಿಧಾನಸೌಧ ಒಳಗಡೆ ಧರಣಿ ಮಾಡುವುದು ಸರಿಯಲ್ಲ. ಸಕ್ಕರೆ ಕಾರ್ಖಾನೆಯ ಮಾಲೀಕರು ಯಾರೇ ಇದ್ದರು.‌ಅವರಿಂದ ಬಾಕಿ ಹಣ ಕೊಡಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ನಾವು ರೈತ ಮಕ್ಕಳು, ಅಧಿಕಾರಿಗಳು ರೈತ ಮಕ್ಕಳು ಸಿಎಂ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ ಈ ಧರಣಿಯನ್ನು ಕೈ ಬಿಡಿ.

ವಿದ್ಯುತ್ ಹಾಗೂ ನೀರಿನ ಬಗ್ಗೆ ಸರಕಾರ ಅಧ್ಯಯನ ಮಾಡುತ್ತಿದ್ದಾರೆ. ಈ ಉದ್ದೇಶದಿಂದ ನಾನು ಬೆಳಗಾವಿಗೆ ಬಂದಿದ್ದೇ‌ನೆ. ನ. 15ರಿಂದ ರೈತರು ಧರಣಿ ನಡೆಸಿದ್ದಿರಿ. ಈ ಕುರಿತು ಸಿಎಂ ಕುಮಾರಸ್ವಾಮಿ ಸಭೆ ನಡೆಸಿದ್ದಾರೆ. ನಿಮಗೆ ನ್ಯಾಯ ಒದಗಿಸಿಕೊಡುವಲ್ಲಿ ಸರಕಾರ‌ ಬದ್ಧವಾಗಿದೆ’ ಎಂದರು.

ಸಚಿವ ಡಿ.ಕೆ.ಶಿವಕುಮಾರ ಮಾತಿಗೆ ಸಮ್ಮತಿ ಸೂಚಿಸಿದ ರೈತರು ಧರಣಿಯನ್ನು ಹಿಂಪಡೆದರು.

‘ರಮೇಶ್ ಜಾರಕಿಹೊಳಿ ಪ್ರಾಮಾಣಿಕರು’

ರಮೇಶ ಜಾರಕಿಹೊಳಿ‌ ಜತೆಗೆ ಮುನಿಸು ಇರುವುದರ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ಡಿ.ಕೆ.ಶಿವಕುಮಾರ ರಮೇಶ ಜಾರಕಿಹೊಳಿ ದೊಡ್ಡವರು ಅವರ ವಿಚಾರ ನಾನು ಪ್ರಸ್ತಾಪ ಮಾಡಲ್ಲ ಎಂದು ಸಚಿವ ರಮೇಶಗೆ ಟಾಂಗ್ ನೀಡಿದರು. ‘ರಮೇಶ್ ಜಾರಕಿಹೊಳಿ‌ ಕಾರ್ಖಾನೆಯಿಂದ ಕಬ್ಬಿನ್ ಬಿಲ್ಲ ಬಾಕಿ ಕೊಡುವ ವಿಚಾರವಾಗಿ ಉತ್ತರಿಸಿದ ಅವರು, ರಮೇಶ ಜಾರಕಿಹೊಳಿ ತುಂಬ ಪ್ರಮಾಣಿಕರಿದ್ದಾರೆ. ರೈತರ ಬಾಕಿ ಹಣ ಇದ್ದರೆ ಕೊಡುತ್ತಾರೆ’ ಎಂದರು.

‘ತೆಲಂಗಾಣದಲ್ಲಿ ಬಂಡಾಯ ಬಗೆಹರಿದಿದೆ’

ತೆಲಂಗಾಣ ಚುನಾವಣೆಯ ವಿಚಾರ ಕುರಿತಾಗಿ ಕೆಲವು ಜವಾಬ್ದಾರಿ ಹೈಕಮಾಂಡ್ ನೀಡಿದೆ. ಆದ್ದರಿಂದ ರೆಬಲ್ ಸ್ಪರ್ಧಿಗಳನ್ನು ವಾಪಸ್ ತೆಗೆಸಿದ್ದೇವೆ ಎಂದು ಸಚಿವ ಡಿ.ಕೆ.ಶಿವಕುಮಾರ ಹೇಳಿದರು.

ತೆಲಂಗಾಣದಲ್ಲಿ ಟಿ ಆರ್ ಎಸ್ ನುಡಿದಂತೆ ನಡೆದಿಲ್ಲ.
ಹಾಗಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಪರ ಉತ್ತಮ ವಾತಾವರಣವಿದೆ ಕೆಲ ರಾಜಕೀಯ ವಿರೋಧಿಗಳು ಕಾಂಗ್ರೆಸ್ ವಿರುದ್ದ ಮಾತನಾಡುತ್ತಿದ್ದಾರೆ. ಪಕ್ಷದ ಕೆಲಸಕ್ಕಾಗಿ ತೆಲಂಗಾಣಕ್ಕೆ ಹೋಗಿದ್ದೇವೆ ಎಂದರು.

Leave a Reply