ಮಂಡ್ಯದಲ್ಲಿ ಅಮಾಯಕರ ಸಾವಿಗೆ ಹೊಣೆ ಯಾರು?

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ‌ಕನಗನಮರಡಿ ಬಳಿಯ ವಿಸಿ ನಾಲೆಗೆ ಖಾಸಗಿ ಬಸ್‌ವೊಂದು ಉರುಳಿಬಿದ್ದ ಪರಿಣಾಮ ಬರೋಬ್ಬರಿ 30 ಮಂದಿ ಅಮಾಯಕ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಗೆ ರಾಷ್ಟ್ರಾದ್ಯಂತ ಸಂತಾಪ ಸೂಚಿಸಲಾಗಿದ್ದರೂ ಹಳೇ ಕಾಲದ ನಾಲೆಗಳನ್ನು ಅಭಿವೃದ್ಧಿಪಡಿಸದೆ ನಿರ್ಲಕ್ಷ್ಯ ತೋರಿರುವುದು ಎಂದು ಹೇಳಲಾಗುತ್ತಿದೆ.

ಶನಿವಾರ ಆಗಿದ್ರಿಂದ ಶಾಲೆ ಮುಗಿಸಿಕೊಂಡು ಬರುತ್ತಿದ್ದ ಶಾಲಾ ಮಕ್ಕಳು ಕೂಡ ಸೇರಿದ್ದಾರೆ. ಮೃತರಲ್ಲಿ ಹೆಚ್ಚಿನವರು ವದೆಸಮುದ್ರ, ಕೊಪ್ಪಲು, ಕುರಟ್ಟಿ ಗ್ರಾಮದವರಾಗಿದ್ದಾರೆ.

ವಿಷಯ ಗೊತ್ತಾಗುತ್ತಿದ್ದ ಹಾಗೆ ಸ್ಥಳಕ್ಕೆ‌ ಭೇಟಿ ನೀಡಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ನೀರಿನಿಂದ ಮೇಲಕ್ಕೆತ್ತಿ ಮಲಗಿಸಿದ್ದ ಸಾಲು ಶವಗಳನ್ನು ಕಂಡು ಕಣ್ಣೀರು ಸುರಿಸಿದ್ರು. ಬಳಿಕ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ರು. ನಂತ್ರ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ರು. ಈ ಹಿಂದೆ ಕೂಡ ಇದೇ ತಾಲೂಕಿನ 20 ಜನ ಜಲ ಸಮಾಧಿ ಆಗಿದ್ರು. ಇದೀಗ ಮತ್ತೆ ದುರಂತ ನಡೆದಿರೋದು ವಿಷಾಧಕರ ಎಂದರು.

ಕನಗನಮರಡಿ ಭೀಕರ ಅಪಘಾತ ಪ್ರಕರಣದಲ್ಲಿ ಪೊಲೀಸರು ತನಿಖೆ ಶುರು ಮಾಡಿದ್ದು, ದಕ್ಷಿಣ ವಲಯ IGP ಶರತ್ ಚಂದ್ರ ಸ್ಥಳಕ್ಕೆ ಭೇಟಿ ನೀಡಿದ್ರು. ಈ ವೇಳೆ ಮಾತನಾಡಿದ ಅವರು, ತನಿಖೆ ನಡೆಸಲು ಒಂದು ವಿಶೇಷ ತನಿಖಾ ತಂಡ ರಚಿಸಿದ್ದೇವೆ. RTO ಅಧಿಕಾರಿಗಳನ್ನೂ ಸಹ ತನಿಖೆ ಮಾಡ್ತೇವೆ ಎಂದಿದ್ದಾರೆ.. ಸಾವನ್ನಪ್ಪಿದವರಲ್ಲಿ 6 ಮಂದಿ ಪುರುಷರು, 15 ಮಂದಿ ಮಹಿಳೆಯರು ಉಳಿದವರು ಮಕ್ಕಳು ಎಂದು ತಿಳಿದು ಬಂದಿದ್ದು‌, ಎಲ್ಲಾ 30 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಮೃತರ ಹೆಸರು ವಯಸ್ಸು ಸ್ಥಳ

ಚಂದ್ರು 35 ಚಿಕ್ಕಕೊಪ್ಪಲು
ಪವಿತ್ರ 11 ವದೇಸಮುದ್ರ
ಈರಯ್ಯ. 60 ಬೇಬಿ ಗ್ರಾಮ
ಕಲ್ಪನಾ 11 ಕೋಡಿಶೆಟ್ಟಿಪುರ ದೇವರಾಜು 40 ಕೋಡಿಶೆಟ್ಟಿಪುರ
ಕರಿಯಪ್ಪ 65 ವದೇಸಮುದ್ರ ಚಿಕ್ಕಯ್ಯ 60 ವದೇಸಮುದ್ರ
ಪ್ರೀತಿ 15 ಭುಜವಳ್ಳಿ
ಪಾಪಣ್ಣ 66 ಚಿಕ್ಕಕೊಪ್ಪಲು ಸಾವಿತ್ರಮ್ಮ 40 ಬೂಕನಕೆರೆ
ಮಂಜುಳ 60 ಡಾಮಡಹಳ್ಳಿ
ಅನುಷಾ 17 ಗಾಣದ ಹೊಸೂರು
ಕಮಲಮ್ಮ 55 ವದೇಸಮುದ್ರ ಸುಮತಿ 35 ಹುಲ್ಕೆರೆ
ಯಶೋಧ. 18 ಚಿಕ್ಕಕೊಪ್ಪಲು
ಸೌಮ್ಯ. 05 ಕೋಡಿಶೆಟ್ಟಿಪುರ
ಪ್ರಶಾಂತ್ 15 ವದೇಸಮುದ್ರ
ರತ್ನಮ್ಮ 60 ವದೇಸಮುದ್ರ ಶಶಿಕಲಾ 45 ವದೇಸಮುದ್ರ
ಪೂ.ಕೆಂಪಯ್ಯ 50 ಚಿಕ್ಕಕೊಪ್ಪಲು
ಸೌಮ್ಯ ಉಮೇಶ್ 30 ಚಿಕ್ಕಾಡೆ
ರತ್ಮಮ್ಮ‌ ರಾಮಕೃಷ್ಣ 50 ಕನಗನಮರಡಿ
ನಿಂಗಮ್ಮ 70 ಕನಗನಮರಡಿ
ರವಿಕುಮಾರ್ 12 ವದೇಸಮುದ್ರ
ಲಿಖಿತ 05 ವದೇಸಮುದ್ರ
ಮಣಿ 35 ಹುಲಿಕೆರೆಕೊಪ್ಪಲು
ಶಿವಮ್ಮ 50 ಕಟ್ಟೇರಿ
ಜಯಮ್ಮ 50 ದೊಡ್ಡಕೊಪ್ಪಲು
ದಿವ್ಯಾ ಚಿಕ್ಕಕೊಪ್ಪಲು
ಪ್ರೇಕ್ಷಾ 02 ಡಾಮಡಹಳ್ಳಿ

ಒಟ್ಟಾರೆ ಅಪಘಾತ ಅನ್ನೋದು ಆಕಸ್ಮಿಕವಾಗಿ ಜರುಗುವ ಘಟನೆ ಆದರೂ ತಡೆಗೋಡೆ ಇದ್ದಿದ್ದರೆ ಕೆಲವು ಜೀವಗಳಾದರೂ ಉಳಿಯುತ್ತಿದ್ದವು ಅನ್ನೋದು ನಿರೀಕ್ಷೆ. ಸತ್ತ ಬಳಿಕ ಅದೆಷ್ಟೇ ಪರಿಹಾರ ಕೊಟ್ಟರೂ ಹೋದ ಜೀವ ಮತ್ತೆ ಬರುವುದಿಲ್ಲ. ಅಮ್ಮ ಮಕ್ಕಳನ್ನು‌ ಕಳೆದುಕೊಂಡರೆ ಕೊನೆಗಾಲದ ತನಕ ಶಾಪವಾಗಿ ಕಾಡುತ್ತದೆ. ಅದೇ ರೀತಿ ಅಮ್ಮನನ್ನು ಮಕ್ಕಳು ಕಳೆದುಕೊಂಡರೆ ಅನಾಥವಾಗಿ ಬದುಕಬೇಕಾಗುತ್ತದೆ. ಇನ್ನು ಗಂಡನನ್ನು ಕಳೆದುಕೊಂಡದೆ ವಿಧವೆ ಪಟ್ಟ ದೊರೆಯುತ್ತದೆ. ಪರಿಹಾರ ಅನ್ನೋದು ಕೇವಲ ಸರ್ಕಾರದ ಕಣ್ಣೊರೆಸುವ ತಂತ್ರ ಅಷ್ಟೆ. ಅದರ ಬದಲು ದುರ್ಘಟನೆ ಸಂಭವಿಸದಂತೆ ತಡೆಯುವ ಕೆಲಸ ಆಗಬೇಕಿದೆ.

Leave a Reply