ಮಹಿಳೆಯರಲ್ಲಿ ಅಂಡಕೋಶ ವೈಫಲ್ಯಕ್ಕೆ ಕಾರಣವೇನು? ಚಿಕಿತ್ಸೆಗಳೇನು?

ಡಾ.ಬಿ.ರಮೇಶ್

ಸಾಮಾನ್ಯವಾಗಿ ಮಹಿಳೆಯೊಬ್ಬಳಿಗೆ 40-45ರ ಆಸುಪಾಸಿನಲ್ಲಿ ಮುಟ್ಟು ನಿಲ್ಲುತ್ತದೆ. ಈ ಹಂತದಲ್ಲಿ ‘ಮೆನೊಪಾಸ್’ಎಂದು ಕರೆಯಲಾಗುತ್ತದೆ. ಆ ವಯಸ್ಸಿನ ತನಕ ಮಹಿಳೆಯ ಸಂತಾನೋತ್ಪತ್ತಿ ಪ್ರಕ್ರಿಯೆಯೆಲ್ಲ ಮುಗಿದು ಹೋಗಿರುವುದರಿಂದ ಆ ಹಂತ ಒಂದು ಸಹಜ ಪ್ರಕ್ರಿಯೆ ಎನಿಸುತ್ತದೆ. ಕೆಲವು ಮಹಿಳೆಯರಿಗೆ ನೈಸರ್ಗಿಕ ರೀತಿಯಲ್ಲಿ ಉಂಟಾಗುವ ಮುಟ್ಟಂತ್ಯಕ್ಕಿಂತ 10 ವರ್ಷ ಮುಂಚೆಯೇ ಮುಟ್ಟು ನಿಲ್ಲುವ ಲಕ್ಷಣಗಳು ಗೋಚರಿಸಿ ಅವಳನ್ನು ಆತಂಕಕ್ಕೆದೂಡುತ್ತವೆ. ಇದನ್ನು KPE ಎಂದು ಕರೆಯುತ್ತೇವೆ.

ಏಕೆ ಹೀಗಾಗುತ್ತದೆ?
ಹುಡುಗಿಯೊಬ್ಬಳು ಅದೆಷ್ಟೋ ಲಕ್ಷಾಂತರ ಅಂಡಾಣುಗಳನ್ನು ಹೊತ್ತುಕೊಂಡೇ ಹುಟ್ಟುತ್ತಾಳೆ. ಋತು ಚಕ್ರ ಆರಂಭದ ಬಳಿಕ ಅವಳ ಅಂಡಕೋಶದಲ್ಲಿನ ಅಂಡಾಣುಗಳ ಸಂಖ್ಯೆಕಡಿಮೆಯಾಗುತ್ತ ಸಾಗುತ್ತದೆ. ಉತ್ತಮ ಆರೋಗ್ಯ ಸ್ಥಿತಿ, ಹಿತಕರ ಜೀವನಶೈಲಿ ಹೊಂದಿದ ಮಹಿಳೆ 30-35ನೇ ವಯಸ್ಸಿನವರೆಗೂ ಯಾವುದೇ ತೊಂದರೆ ಇಲ್ಲದೆ ತನ್ನದೇ ಆದ ಅಂಡಾಣುಗಳ ಸಹಾಯದಿಂದ ಗರ್ಭಧರಿಸಿ, ಆರೋಗ್ಯಕರ ಮಗುವಿನ ತಾಯಿಯಾಗಬಹುದು. ಆದರೆ ಆಧುನಿಕ ಜೀವನ ಶೈಲಿಯಲ್ಲಿನ ಏರುಪೇರುಗಳು, ಅನೇಕ ರೋಗಗಳು, ಅವುಗಳಿಗೆ ಕೊಡುವ ಚಿಕಿತ್ಸೆಗಳು ಆಕೆಯ ಅಂಡಕೋಶದಲ್ಲಿನ ಅಂಡಾಣುಗಳ ಸಂಖ್ಯೆಯನ್ನು ಬರಿದು ಮಾಡಿಬಿಡುತ್ತವೆ. ಈ ಸ್ಥಿತಿಯೇ ‘ಅವಧಿ ಪೂರ್ಣ ಅಂಡಕೋಶ ವೈಫಲ್ಯ’ ಅಥವಾ ‘ಪ್ರಿಮೆಚ್ಯೂರ್‍ ಒವೇರಿಯನ್‍ ಫೆಲ್ಯೂರ್’ ಸಮಸ್ಯೆಗೆ ಕಾರಣವಾಗುತ್ತದೆ. ಇದರ ನೇರ ಪರಿಣಾಮ ಬಂಜೆತನಕ್ಕೂ ಕಾರಣವಾಗಬಹದು.

ಏನೇನು ಲಕ್ಷಣಗಳು?

  • ಅಂಡಾಣು ಕೊರತೆಯಿಂದ ಮುಟ್ಟು ಬರದೇ ಇರಬಹುದು. ಒಂದು ವೇಳೆ ಬಂದರೂ ಯಾವಾಗಲಾದರೊಮ್ಮೆ ಬರಬಹುದು. ರಕ್ತಸ್ರಾವ 1-2 ದಿನಕ್ಕೆ ಸೀಮಿತಗೊಳ್ಳಬಹುದು.
  • ಎಷ್ಟೇ ಪ್ರಯತ್ನಿಸಿದರೂ ಗರ್ಭನಿಲ್ಲದಿರುವ ಸಮಸ್ಯೆ ಉಂಟಾಗಬಹುದು.
  • ದೇಹ ಬಿಸಿಯಾಗುವ ‘ಹಾಟ್‍ಫ್ಲಾಷೆಸ್’ ಸಮಸ್ಯೆ ಕಾಣಿಸಿಕೊಳ್ಳಬಹುದು.
  • ಮೂತ್ರ ವಿಸರ್ಜನೆ ಮಾಡುವಾಗ ಉರಿತದ ಅನುಭವ ಆಗಬಹುದು.
  • ಸಮಾಗಮ ಕಿರಿಕಿರಿ ಅನಿಸಬಹುದು.
  • ರಾತ್ರಿ ನಿದ್ರೆ ಬರದೇ ಇರುವ ಸಮಸ್ಯೆ ಕಾಣಿಸಿಕೊಳ್ಳಬಹುದು.
  • ಖಿನ್ನತೆಯ ಸಮಸ್ಯೆ ಕಾಡಬಹುದು.
  • Oestreogen ಹಾರ್ಮೋನುಗಳ ಮಟ್ಟ ತುಂಬಾ ಕುಸಿಯುತ್ತದೆ.
  • ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಅವು ಬಹುಬೇಗ ಫ್ರಾಕ್ಚರ್ ಆಗಬಹುದು.

ಪರೀಕ್ಷೆ:

  • ಪ್ರಿಮೆಚ್ಯೂರ್ ಒವೇರಿಯನ್ ಫೇಲ್ಯೂರ್ ಸ್ಥಿತಿಗೆ ಏನು ಕಾರಣ ಎಂದು ತಿಳಿದುಕೊಳ್ಳಲು ಎಫ್.ಎಸ್.ಎಚ್. (ಹಾರ್ಮೊನ್) ಮತ್ತು ಟ್ರಾನ್ಸ್ ವೈಜೈನಲ್ ಸ್ಕ್ಯಾನ್ ಮಾಡಲಾಗುತ್ತದೆ.
  • ಪ್ರಿಮೆಚ್ಯೂರ್ ಒವೇರಿಯನ್ ಫೆಲ್ಯೂರ್ ಸ್ಥಿತಿಯನ್ನು ಸಂಪೂರ್ಣವಾಗಿ ಗುಣಪಡಿಸುವುದಾಗಲಿ, ಈಗಿರುವ ಸ್ಥಿತಿ ಬದಲಿಸುವುದಾಗಲಿ ಸಾಧ್ಯವಾಗುವುದಿಲ್ಲ. ಆದರೆ ಮುಂದೆ ಆಗಬಹುದಾದ ಹಲವಾರು ಅನಾಹುತಗಳನ್ನು ತಪ್ಪಿಸಬಹುದಾಗಿದೆ.
  • ಋತುಚಕ್ರ ನಿಯಮಿತಗೊಳಿಸಲು ಹಾರ್ಮೋನ ಥೆರಪಿ ಕೊಡಲಾಗುತ್ತದೆ. ವೆಜೈನಲ್ ಶುಷ್ಕತೆ ನಿವಾರಿಸಲು ಕೆಲವೊಂದು ಮುಲಾಮುಗಳನ್ನು ಬಳಸಲು ಸಲಹೆ ನೀಡಲಾಗುತ್ತದೆ.

ಅಂಡಾಣು ದಾನಿಯ ಸಹಾಯ:
ಅಂಡಕೋಶ ವೈಫಲ್ಯವಾಗಿರುವ ಸ್ಥಿತಿಯಲ್ಲಿ ಮಹಿಳೆ ಗರ್ಭಧರಿಸುವ ಅಪೇಕ್ಷೆ ಹೊಂದಿದ್ದಲ್ಲಿ ತನ್ನಿಚ್ಚೆ ಈಡೇರಿಸಿಕೊಳ್ಳಲು ಆಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಅಂಡಾಣು ದಾನಿಯ ಸಹಾಯ ಪಡೆದು ಗರ್ಭಧರಿಸಬಹುದು.ಈ ನಿಟ್ಟಿನಲ್ಲಿ ವೈದ್ಯರು ಸಂಪೂರ್ಣ ಸಹಕಾರ ನೀಡುತ್ತಾರೆ.

ಮೊದಲೇ ಜಾಗೃತರಾಗಿ…!
ಅವಧಿಗೆ ಮೊದಲೇ ಅಂಡಕೋಶ ವೈಫಲ್ಯ ತಡೆಯಲು ಆರಂಭದಿಂದಲೇ ಜೀವನ ಶೈಲಿಯ ಮೇಲೆ ಕಟ್ಟುನಿಟ್ಟಿನ ಹಿಡಿತ ಇಟ್ಟುಕೊಳ್ಳಬೇಕು.ಮಧ್ಯಪಾನ, ಧೂಮಪಾನದಂತಹ ಚಟಗಳಿಂದ ದೂರ ಇದ್ದು ವ್ಯಾಯಾಮದಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು.

‘ನನ್ನ ವಯಸ್ಸು29, ಮದುವೆಯಾಗಿ 4 ವರ್ಷ ಆಗಿದೆ. ಬಂಜೆತನದ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗಿದ್ದೆ. ನನ್ನದು ಅಂಡಕೋಶದ ವೈಫಲ್ಯದ ಸಮಸ್ಯೆ ಎಂದು ಪತ್ತೆ ಮಾಡಿ, ಅಂಡಾಣು ದಾನಿಯ ಸಹಾಯ ಪಡೆದು ಗರ್ಭಧರಿಸುವ ಬಗ್ಗೆ ಹೇಳಿದರು. ನಾನು ಐವಿಎಫ್ ಮೂಲಕ ಮಗು ಪಡೆದು ಈಗ ಜೀವನ ಪರಿಪೂರ್ಣವಾಯಿತೆಂಬ ಋಷಿಯಲ್ಲಿದ್ದೇನೆ.’
– ಸವಿತಾ (ಗೃಹಿಣಿ)

 ಮಾಹಿತಿಗೆ:
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

ಇಮೇಲ್ ವಿಳಾಸ: altiushospital@yahoo.com, www.altiushospital.com

Leave a Reply