ಹಿರಿಯ ಮುಖಂಡ ಜಾಫರ್ ಷರೀಫ್ ನಿಧನಕ್ಕೆ ಡಿಕೆಶಿ ಸಂತಾಪ

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ನಿಧನಕ್ಕೆ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಹಿರಿಯ ಮುತ್ಸದ್ಧಿ ಜಾಫರ್ ಷರೀಫ್ ಅವರ ನಿಧನ ಆಘಾತ ತಂದಿದೆ. ಅವರು ಕಾಂಗ್ರೆಸ್ಸಿನ ಮಾರ್ಗದರ್ಶಕರಾಗಿದ್ದರು. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ಧೀಮಂತ ನಾಯಕರಾಗಿದ್ದರು. ಕೇಂದ್ರದ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ದೇಶ ಹಾಗೂ ರಾಜ್ಯ ರೈಲ್ವೆ ಭೂಪಟವನ್ನೇ ಬದಲಾಯಿಸಿದ್ದರು. ಅವರ ಸೇವೆ ಅವಿಸ್ಮರಣೀಯ.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಕುಟುಂಬಕ್ಕೆ ಆಪ್ತರಾಗಿದ್ದ ಅವರು ಬಡವರು, ದೀನರು, ಶೋಷಿತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ನಾಡಿನ ಹಿತರಕ್ಷಣೆಗೆ ಸದಾ ಬದ್ದರಾಗಿದ್ದರು.

ನನ್ನ ಹಾಗೂ ಜಾಫರ್ ಷರೀಫ್ ಅವರ ಒಡನಾಟ ಸುಮಾರು ಮೂರು ದಶಕಗಳಿಗಿಂತಲೂ ಹೆಚ್ಚಿನದು. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ. ಅವರ ಅಗಲಿಕೆ ನೋವು ಭರಿಸುವ ಶಕ್ತಿ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಸಿಗಲಿ ಎಂದು ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply