ಮಾಜಿ ಜಾಫರ್ ಷರೀಫ್ ಇನ್ನಿಲ್ಲ

ಡಿಜಿಟಲ್ ಕನ್ನಡ ಟೀಮ್:

ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಜಾಫರ್ ಷರೀಫ್ ಭಾನುವಾರ ವಿಧಿವಶರಾಗಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಅತ್ಯಂತ ಆಪ್ತರಾಗಿದ್ದ ಜಾಫರ್ ಷರೀಫ್, ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 1991ರಿಂದ 1995ರ ವರೆಗೆ ಕೇಂದ್ರ ರೈಲ್ವೆ ಸಚಿವರಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದರು.

ವೈಯಕ್ತಿಕವಾಗಿ ನೋವು ತಿಂದಿದ್ದ ಹಿರಿಯ ಜೀವ:

ಜಾಫರ್ ಷರೀಫ್ ಅವರು ಕಳೆದ ಎರಡು ದಶಕಗಳಲ್ಲಿ ತಮ್ಮ ಕೌಟುಂಬಿಕ ಜೀವನದಲ್ಲಿ ಸಾಕಷ್ಟು ನೋವು ತಿಂದಿದ್ದರು. 1999ರಲ್ಲಿ ಕಿರಿಯ ಪುತ್ರನನ್ನು ಕಳೆದುಕೊಂಡಿದ್ದ ಶರೀಫ್, 2008ರಲ್ಲಿ ಪತ್ನಿ ಹಾಗೂ 2009ರಲ್ಲಿ ಹಿರಿಯ ಪುತ್ರನನ್ನು ಕಳೆದುಕೊಂಡಿದ್ದರು.

Leave a Reply