ಅಂಬಿಗೆ ಮಂಡ್ಯ ಮಣ್ಣಿನ ತಿಲಕ

    ಡಿಜಿಟಲ್ ಕನ್ನಡ ಟೀಮ್:

    ಮಂಡ್ಯದ ಮಗ, ಮಂಡ್ಯದ ಗಂಡು ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ವಾಪಸ್ ತರುವ ಮುನ್ನ ಅವರ ಹಣೆಗೆ ಪತ್ನಿ ಸುಮಲತಾ ಹಾಗೂ ಅಭಿಷೇಕ್ ಅವರು ಮಂಡ್ಯ ಮಣ್ಣನ್ನು ಅಂಬಿ ಹಣೆಗೆ ಇಟ್ಟು, ಜನರ ಅಭಿಮಾನ ಹಾಗೂ ಸಹಕಾರಕ್ಕೆ ಕೈ ಮುಗಿದು ಧನ್ಯವಾದ ಅರ್ಪಿಸಿದರು.

    ಅಂಬಿ ಅವರ ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್ ಗೆ ಸಾಗಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳು ಎದ್ದು ನಿಂತು ಅಂಬಿಗೆ ಅಂತಿಮ ವಿದಾಯ ಹೇಳಿದರು.

    Leave a Reply