ಡಾ.ಬಿ.ರಮೇಶ್
(ಸಿಂಗಲ್ ಪೋರ್ಟ್ ಸರ್ಜರಿಯಿಂದ ನೋವಿನ ಪ್ರಮಾಣ ಅತ್ಯಂತ ಕಡಿಮೆ. ಗುಣಮುಖರಾಗಲು ತೆಗೆದುಕೊಳ್ಳುವ ಅವಧಿ ಕೂಡ ಕಡಿಮೆ. ಈ ವಿಧಾನದಲ್ಲಿ ಕಂಬೈಂಡ್ ಸರ್ಜರಿಗಳನ್ನು ಸುಲಭವಾಗಿ ನೆರವೇರಿಸಬಹುದು.)
ಸ್ತ್ರೀರೋಗ ಚಿಕಿತ್ಸೆಯಲ್ಲಿ ಲ್ಯಾಪ್ರೋಸ್ಕೋಪಿ ಮಹತ್ವದ ಪಾತ್ರ ವಹಿಸುತ್ತಿದೆ. ಓಪನ್ ಸರ್ಜರಿಗೆ ಹೋಲಿಸಿದರೆ ಇದರಲ್ಲಿ ಗಾಯ ಹಾಗೂ ಕಲೆಗಳು ಉಂಟಾಗುವ ಪ್ರಮಾಣ ತುಂಭಾ ಕಡಿಮೆ.
ಇತ್ತೀಚಿನ ವರ್ಷಗಳಲ್ಲಿ ‘ಸಿಂಗಲ್ ಪೋರ್ಟ್ ಲ್ಯಾಪ್ರೋಸ್ಕೋಪಿ(SPL)’ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಇದಕ್ಕೆ ಆರೋಗ್ಯದ ಬಗೆಗಿನ ಅತಿಯಾದ ಕಾಳಜಿ ಹಾಗೂ ಸೌಂದರ್ಯ ಪ್ರಜ್ಞೆ ಕಾರಣ ಎನ್ನಬಹುದು.
ಏಕಿಷ್ಟು ಮಹತ್ವ?
ಮಾಡೆಲ್ಗಳಿಗೆ, ಟಿ.ವಿ, ಸಿನಿಮಾ ತಾರೆಯರಿಗೆ ಅಷ್ಟೇ ಅಲ್ಲ, ಇಂದಿನ ಆಧುನಿಕ ಅವಿವಾಹಿತ ಯುವತಿಯರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಾಗ ತಮ್ಮ ಹೊಟ್ಟೆ ಭಾಗದಲ್ಲಿ ಯಾವುದೇ ಕಲೆಗಳು ಗೋಚರಿಸಬಾರದು ಎನ್ನುವುದಾಗಿರುತ್ತದೆ. ಹೊಟ್ಟೆಯ ಮೇಲೆ ಕಲೆಗಳು ಕಂಡುಬಂದರೆ ಎಲ್ಲಿ ತಮ್ಮ ಮಗಳಿಗೆ ಮದುವೆಯಾಗುವುದಿಲ್ಲವೋ ಎನ್ನುವ ಆತಂಕವೂ ಪೋಷಕರನ್ನು ಕಾಡುತ್ತಿರುತ್ತದೆ.
ಪ್ರಕ್ರಿಯೆ ಹೇಗೆ?
ಸಾಮಾನ್ಯ ಲ್ಯಾಪ್ರೋಸ್ಕೋಪಿಯಲ್ಲಿ ಹೊಕ್ಕಳಿನ ಅಸುಪಾಸು 3 ಅಥವಾ 4 ರಂಧ್ರಗಳ ಮೂಲಕ ಉಪಕರಣಗಳನ್ನು ತೂರಿಸಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇದರಿಂದ ಹೊಟ್ಟೆಯ ಮೇಲ್ಭಾಗದಲ್ಲಿ ಪುಟ್ಟ-ಪುಟ್ಟ ಕಲೆಗಳು ಗೋಚರಿಸುತ್ತವೆ. ಆದರೆ ಸಿಂಗಲ್ ಪೋರ್ಟ್ ಸರ್ಜರಿ ವಿಧಾನದಲ್ಲಿ ಎರಡರಿಂದ ಎರಡೂವರೆ ಸೆಂ.ಮಿ. ನಷ್ಟು ಅಗಲದ ಒಂದೇ ರಂಧ್ರ ಮಾಡಿ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತದೆ. ಇದರಿಂದಾಗಿ ಹೊಟ್ಟೆಯ ಮೇಲೆ ಒಂದೇ ಒಂದು ಕಲೆ ಕೂಡ ಕಂಡುಬರದು.
ಏನೇನು ಉಪಯೋಗ?
- ಸಿಂಗಲ್ ಪೋರ್ಟ್ ಸರ್ಜರಿಯಿಂದ ನೋವಿನ ಪ್ರಮಾಣ ಅತ್ಯಂತ ಕಮ್ಮಿ, ಗುಣಮುಖರಾಗಲು ತೆಗೆದುಕೊಳ್ಳುವ ಅವಧಿ ಕೂಡ ಅತ್ಯಂತ ಕಡಿಮೆ. ಬೇರೆ ಭಾಗಗಳಿಗೆ ಹೋಲಿಸಿದರೆ ಹೊಕ್ಕಳಿನ ಭಾಗದಲ್ಲಿ ನರಗಳ ಹರಿವು ಕಡಿಮೆ ಇರುವುದರಿಂದ ನೋವಿನ ಅನುಭೂತಿ ಕಡಿಮೆ ಎನಿಸುತ್ತದೆ.
- ಮುಂಜಾನೆ ಅಪರೇಷನ್ ಮಾಡಿಸಿಕೊಂಡು ಸಂಜೆಯೇ ಮನೆಗೆ ಮರಳಬಹುದು.
- ಈ ರೀತಿಯ ಶಸ್ತ್ರಚಿಕಿತ್ಸೆಯಿಂದ ಸೋಂಕು ಉಂಟಾಗುವ ಸಾಧ್ಯತೆಯೂ ಕಡಿಮೆ
- ಆಪರೇಷನ್ ನಂತರ ಹೆಚ್ಚಿನ ಕಳಜಿ ವಹಿಸಬೇಕಾದ ಅಗತ್ಯ ಕೂಡ ಉಂಟಾಗದು.
ಕಂಬೈಂಡ್ ಸರ್ಜರಿ
ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚಿನ ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಾದ ಸಂದರ್ಭದಲ್ಲಿ ಸಿಂಗಲ್ ಪೋರ್ಟ್ ಸರ್ಜರಿಯೇ ಅತ್ಯಂತ ಉಪಯುಕ್ತ ಎನಿಸುತ್ತದೆ.
ಪ್ರಮುಖ ಕಂಬೈಂಡ್ ಸರ್ಜರಿಗಳು:
- ಪಿತ್ತಕೋಶ ಮತ್ತು ಗರ್ಭಕೋಶ
- ಗರ್ಭಕೋಶ ಮತ್ತು ಅಪೆಂಡಿಕ್ಸ್
- ಪಿತ್ತಕೋಶ ಮತ್ತು ಅಂಡಾಶಯ ಸಿಸ್ಟ್
- ಕರುಳು ಮತ್ತು ಗರ್ಭಕೋಶಕ್ಕೆ ಸಂಬಂಧಪಟ್ಟ ಯಾವುದೇ ಶಸ್ತ್ರಚಿಕಿತ್ಸೆಗಳನ್ನು ಈ ವಿಧಾನದಲ್ಲಿ ಸಮರ್ಪಕವಾಗಿ ನೆರವೇರಿಸಬಹುದಾಗಿದೆ.
ಸಾಮಾನ್ಯ ಲ್ಯಾಪ್ರೋಸ್ಕೋಪಿಕ್ ಕಂಬೈಂಡ್ ಸರ್ಜರಿಯಲ್ಲಿ ಒಂದಕ್ಕಿಂತ ಹೆಚ್ಚು ಸರ್ಜರಿ ಮಾಡುವಾಗ 6 ರಿಂದ 8 ರಂಧ್ರಗಳನ್ನು ಮಾಡಬೇಕಾಗುತ್ತದೆ. ಸಿಂಗಲ್ ಪೋರ್ಟ್ ಸರ್ಜರಿಯಲ್ಲಿ ಏಕೈಕ ರಂಧ್ರ ಮಾಡುವುದರಿಂದ ಹೆಚ್ಚಿನ ಗಾಯ, ಹೊಲಿಗೆ, ನೋವು ಇರದೆ ಬಹುಬೇಗ ಗುಣಮುಖರಾಗಬಹುದು.
ಸೂಕ್ತ ಕಾಳಜಿ
ಸಿಂಗಲ್ ಪೋರ್ಟ್ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಹೊಕ್ಕಳಿನ ಭಾಗದಲ್ಲಿ ಸರಿಯಾಗಿ ಹೊಲಿಗೆ ಹಾಕಬೇಕಾಗುತ್ತದೆ. ಇಲ್ಲದಿದ್ದರೆ ಹರ್ನಿಯಾ ಆಗುವ ಸಾಧ್ಯತೆ ಇರುತ್ತದೆ. ರೋಗಿಯು ಆದಷ್ಟು ಕಾಳಜಿ ವಹಿಸುವುದು ಒಳಿತು.
ರೋಗಿಯ ಅನುಭವ
ನನಗೆ 49 ವರ್ಷ, ಸಿಂಗಲ್ ಪೋರ್ಟ್ ಸರ್ಜರಿ ಮುಖಾಂತರ ಗರ್ಭಕೋಶ ನಿವಾರಣೆ ಮಾಡಿಸಿಕೊಂಡು ಅದೇ ದಿನ ಸಂಜೆ ಮನೆಗೆ ಬಂದೆ . ಎರಡೇ ದಿನದಲ್ಲಿ ಸಾಮಾನ್ಯ ಚಟುವಟಿಕೆಗಳಲ್ಲಿ ತೊಡಗಿದೆ. ನನಗೆ ಆಪರೇಷನ್ ಆಗಿ 2 ತಿಂಗಳು ಆಯಿತು. ಯಾವುದೇ ಕಲೆ ಇಲ್ಲ. ಯಾವುದೇ ತೊಂದರೆ ಕಾಣಿಸಿಲ್ಲ. ನಾನೀಗ ಖುಷಿಯಿಂದಿದ್ದೇನೆ ( ಶಶಿಕಲಾ , ಬೆಂಗಳೂರು)
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789
ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873
ಇಮೇಲ್ ವಿಳಾಸ: altiushospital@yahoo.com, www.altiushospital.com